ಅತಿಯಾದ ಭ್ರಷ್ಟಾಚಾರದಿಂದ ದೇಶದ ಆರ್ಥಿಕ ಪರಿಸ್ಥಿತಿ ಅದೋಗತಿಗೆ ತಲುಪಿ ಆರಾಜಕತೆ ಸೃಷ್ಠಿಯಾಗುವುದು ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅಭಿಪ್ರಾಯಪಟ್ಟರು.
ಸುದ್ದಿ ಜಗಳೂರು
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಡಿಸೆಂಬರ್ 27
ಪಟ್ಟಣದ ಇಮಾಮ್ ಸ್ಮಾರಕ ಶಾಲಾ ಆವರಣದಲ್ಲಿ ಜೆ ಎಂ ಇಮಾಮ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಕೊಡಮಾಡುವ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಮುಸಿರ್ ಉಲ್ ಮುಲ್ಕ್ ಇಮಾಮ್ ಪ್ರಶಸ್ತಿ ಸ್ವಿಕರಿ ಸಮಾರಂಭವನ್ನು ಕುರಿತು ಮಾತನಾಡಿದರು ಸಮಾಜದಲ್ಲಿ ಶಾಂತಿಯುತ ಜೀವನ ನಡೆಸಲು ಭ್ರಷ್ಟಾಚಾರ ಮುಕ್ತ ಆಡಳಿತದಿಂದ
ತೃಪ್ತಿ ಮತ್ತು ಮಾನವೀಯ ಮೌಲ್ಯಗಳಿಂದ ಸಮಾಜದ ಬದಲಾವಣೆ ಸಾಧ್ಯ ಎಂದರು
ಪೋಷಕರ ಮೇಲೆ ಹೆಚ್ಚು ಜವಾಬ್ದಾರಿಯಿದೆ ತಮ್ಮ ಮಕ್ಕಳಿಗೆ ವಿದ್ಯಾರ್ಥಿದೆಸೆಯಿಂದಲೇ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತ ವಾತವರಣ ಕಲ್ಪಿಸಬೇಕು.
ಕೂಪಮಂಡೂಕದಲ್ಲಿದ್ದ ನಾನು ಕರ್ನಾಟಕ ಲೋಕಾಯುಕ್ತನಾಗಿ ಆಗಮಿಸಿದ ನಂತರ ಸಮಾಜದಲ್ಲಿ ನಡೆಯುವ ಸಾಕಷ್ಟು ಅನ್ಯಾಗಳನ್ನು ಕಂಡು ಕಣ್ಣೀರಿಟ್ಟಿರುವೆ.ಇದು ವ್ಯಕ್ತಿಯ ತಪ್ಪಲ್ಲ ಸಮಾಜದ ತಪ್ಪಾಗಿದೆ.ಇಂದಿನ ಸಮಾಜದಲ್ಲಿ ಪ್ರಾಮಾಣಿಕತೆಗೆ ಬೆಲೆಯಿಲ್ಲ.ಶ್ರೀಮಂತಿಕೆ ಹಾಗೂ ದುರಾಸೆಯಿಂದ ಕೂಡಿದ್ದು. ಶ್ರೀಮಂತಿಕೆ ಗಳಿಸುವ ಸ್ವಾರ್ಥಭಾವನೆಯಿಂದಾಗಿ ಕಾನೂನು ವಿರುದ್ದವಾಗಿ ಪೈಪೋಟಿ ಮೂಲೆಮೂಲೆಗಳಲ್ಲಿ ಪಸರಿಸಿದೆ.ಇದು ಕಷ್ಟಪಟ್ಟು ಶ್ರಮದ ಹಣದಿಂದ ಸಿಗುವ ಸಂತಸದ ತೃಪ್ತಿ ಮತ್ತೊಂದಿಲ್ಲ.ಕಳೆದ ದಶಕದಲ್ಲಿ ಅವಲೋಕನನಡೆಸಿದಾಗ ಭ್ರಷ್ಟಾಚಾರಗಳಲ್ಲಿ ದಶಕ್ಕೊಂದು ನಡೆದ ಪ್ರಮುಖ ಹಗರಣಗಳಲ್ಲಿ ಬೋಪರ್ಸ್ ಹಗರಣದಲ್ಲಿ 64 ಕೋಟಿ ,ಕಾಮನ್ ವೆಲ್ತ್ ಗೇಮ್,ಹಗರಣದಲ್ಲಿ 74 ಸಾವಿರ ಕೋಟಿ,ಕೋಲ್ ಗೇಟ್ 186000 ಕೋಟಿ ,2-ಜಿ ಸ್ಪೆಕ್ಟರಂ 1,76,000ಕೋಟಿ ಗಳಷ್ಟು ದೇಶಕ್ಕೆ ನಷ್ಟವಾಗಿದೆ ಇದಕ್ಕೆ ಅಂಕಿಅಂಶದ ದಾಖಲೆಗಳಿವೆ ಇದು 1985ರಲ್ಲಿ ರಾಜೀವ್ ಗಾಂಧಿ ಹೇಳಿಕೆಯಂತೆ ದೇಶದ ಅಭಿವೃದ್ದಿಗೆ ಮೀಸಲಿಟ್ಟ ಶೇ.100 ರಷ್ಟು ಹಣದಲ್ಲಿ ಶೇ 15ರಷ್ಟು ಮಾತ್ರ ವಿನಿಯೋಗಗೊಳ್ಳುವುದು ಎಂಬುದು ಸಾಕ್ಷಿಯಾಗಿದೆ.ಎಂದು ಬೇಸರ ವ್ಯಕ್ತಪಡಿಸಿದರು.
ನಾನು ನನ್ನ ಅಧಿಕಾರಾವಧಿಯಲ್ಲಿ ಪ್ರಮಾಣಿಕ ಸೇವೆ ಮಾಡಿರುವೆ.
ನಾನೊಬ್ಬನ್ಯಾಯಮೂರ್ತಿಯಾಗಿದ್ದುಕೊಂಡು ,ಲೋಕಾಯುಕ್ತನಾಗಿ ಮೂರು ಸರಕಾರಗಳು ನನ್ನ ಪರವಾಗಿದ್ದವು.ಆದರೆ ನನ್ನನ್ನು ನೇಮಿಸಿಕೊಂಡ ಮುಖ್ಯಮಂತ್ರಿಯ ವಿರುದ್ದವೇ ಪ್ರಕರಣದಾಖಲಿಸಿದೆ.ನಾನೊಬ್ಬ ನಿಸ್ವಾರ್ಥಸೇವಕನಾಗಿ ನಿವೃತ್ತನಾಗಿರುವೆ ನಾನುಮುಡಿಗೇರಿಸಿಕೊಂಡ ಹಲವಾರು ಪ್ರಶಸ್ತಿಗಳಲ್ಲಿ ಇಮಾಂರಾಜ್ಯ ಪ್ರಶಸ್ತಿ ತೃಪ್ತಿ ತಂದಿದೆ ಎಂದು ಅನುಭವ ಹಂಚಿಕೊಂಡರು.
807 ಶಾಲಾಕಾಲೇಜುಗಳಿಗೆ ತೆರಳಿದ್ದೇನೆ.ಮೌಲ್ಯಗಳನ್ನು ಬೆಳೆಸಲು ಸಲಹೆ ನೀಡಿರುವೆ.ಇಂದಿನ ಸಮಾಜದಲ್ಲಿ ಶಾಂತಿ ಸೌಹಾರ್ದತೆಗಾಗಿ ಹಿರಿಯರು ಕಟ್ಟಿದ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ.5 ವರ್ಷಗಳಲ್ಲಿ ಕಂಡಂತಹ ಅನ್ಯಾಯಗಳನ್ನು ಕಂಡು ಕಣ್ಣೀರಿಟ್ಟಿರುವೆ.ಆದ್ದರಿಂದಲೇ ರಾಜ್ಯವ್ಯಾಪಿ ಶಾಲಾಕಾಲೇಜುಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾನವೀಯ ಮೌಲ್ಯಗಳನ್ನು
ಮತ್ತೊಬ್ಬರಿಗೆ ಲಂಚಕೊಡುವುದು ಮತ್ತು ಪಡೆಯುವುದು ಎರಡೂ ತಪ್ಪುದೇಶದಲ್ಲಿ ದರಾಸೆಯ ಪರಿಣಾಮ ಹೆಚ್ಚಾದರೆ ದೇಶದ ಆರ್ಥಿಕ ಪರಿಸ್ಥಿತಿ ಕುಸಿತವಾಗಿ ಅಶಾಂತಿ ರಣರಂಗದಲ್ಲಿ ಉಂಟಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು.
.
ಹಿರಿಯ ಪತ್ರಕರ್ತ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಜಗದೀಶ್ ಕೊಪ್ಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,ಧರ್ಮ ಜಾತಿ ಎಲ್ಲೆ
ಮೀರಿ ಬದುಕಿದ್ದ ರಾಜಕಾರಣಿ ಇಮಾಂ ಸಾಹೇಬರ ಸೇವೆ ಅವಿಸ್ಮರಣೀಯ.ಅಂದಿನ ಕಾಲಘಟ್ಟದಲ್ಲಿ ಮೈಸೂರು ಸಂಸ್ಥಾನದಲ್ಲಿ ಬಯಲುಸೀಮೆ ಚಿತ್ರದುರ್ಗದ ಜನತೆಯ ಬದುಕಿಗೆ ಬಡತನವಿತ್ತು ಆದರೆ ಹೃದಯ ಶ್ರೀಮಂತಿಕೆ ಅಪಾರವಾಗಿತ್ತು.ಅಂದಿನ ರಾಜಕಾರಣಿಗಳು ಮೀಸಲಾತಿ,ಗ್ರಾಮೀಣಾಭಿವೃದ್ದಿ,ಶಿಕ್ಷಣ,ಆರೋಗ್ಯ,ನೀರಾವರಿ ಕನಸುಗಳ ದೂರದೃಷ್ಠಿಯನ್ನು ಹೊಂದಿದ್ದರು.ಇಮಾಂ ಸಾಹೇಬರು ರಾಜ್ಯದ ಮೊಟ್ಟ ಮೊದಲ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸಮಿತಿ ಅಧ್ಯಕ್ಷರಾಗಿದ್ದರು.ಕೇವಲ ಒಬ್ಬ ರಾಜಕಾರಣಿಯಾಗದೆ ಶಿಕ್ಷಣತಜ್ಞರಾಗಿ,ಸಾಮಾಜಿಕ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ ಕೀರ್ತಿ ಸಲ್ಲುತ್ತದೆ ಎಂದು ಸ್ಮರಿಸಿದರು.
ಭಾರತದೇಶ ಬಹುಸಂಸ್ಕೃತಿಯ ನೆಲೆಬೀಡು.ಸೂಫಿ ಸಂತರು ನೆಲೆಸಿದ್ದ ನೆಲದಲ್ಲಿ ಪೂರ್ವಜರ ಕಾಲದಿಂದಲೂ ಸಂವೇದನೆ,ಬ್ರಾತೃತ್ವದ ಬದುಕು ನಡೆಸಿದ್ದರು.ಆದರೆ ಇಂದು ಸ್ವಾರ್ಥಕ್ಕಾಗಿ ಹಿಂದೂ ಮುಸ್ಲಿಂ ಮಧ್ಯೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ.ಆಧುನಿಕ ಬದುಕಿನಶೈಲಿ ಮಹಾನೀಯರಿಗೆ ತೋರುವ ಅಪಮಾನವಾಗಿದೆ.ಚರಿತ್ರೆಯನ್ನು ಮುನ್ನೆಲೆಗೆ ತರಬೇಕಿದೆ.ನಾನು 2004 ರಲ್ಲಿ ಪತ್ರಕರ್ತನಾಗಿ ನಾಗವಾರದ ಘಟನೆಯಲ್ಲಿ ಸಹಾಯಸ್ತಚಾಚಿದವರನ್ನು ಕಂಡ ಕ್ಷಣದಿಂದ ನಾಸ್ತಿಕನಾಗಿರುವೆ.ಯಾವುದೇ ಧರ್ಮದ ಬಗ್ಗೆ ಚಿಂತನೆನಡೆಸದೆ ಮಾನವ ಧರ್ಮವಾಗಲಿ ಎಂಬುದು ನನ್ನ ಆಶಯವಾಗಿದೆ ಎಂದು ಹೇಳಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,ನನ್ನ ಮಕ್ಕಳಿಗೆ ಶಿಕ್ಷಣ ಕೊಡಿಸಿದ ಫಲವಾಗಿ ಶಾಸಕನಾಗಿ ಆಯ್ಕೆಯಾಗಿರುವೆ.ಪೋಷಕರು ಹಣ ಆಸ್ತಿಗಳಿಕೆಗಿಂತ ಮಕ್ಕಳನ್ನೇ ಆಸ್ತಿಯನ್ನಾಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಶೌರ್ಯಪ್ರಶಸ್ತಿ ಪುರಸ್ಕೃತರಾದ ಮಾನಸಿ ಪಾಲ್ಗುಣಿ,ಯಜ್ಞ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು
ಜೆಎಂ ಇಮಾಂ ಟ್ರಸ್ಟ್ ನ ಕಾರ್ಯದರ್ಶಿ ಹುಸೇನ್ ಮಿಯ್ಯಾ,ಪಿಂಜಾರ್ ಲದಾಫ್ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಜಲೀಲ್ ಸಾಹೇಬ್ ,ಇಮಾಂ ಟ್ರಸ್ಟ್ ನ ಸಲಹಾ ಸಮಿತಿಯ ಸದಸ್ಯರುಗಳಾದ ಎನ್.ಟಿ.ಎರ್ರಿಸ್ವಾಮಿ,ಸಾಹಿತಿ ಡಿ.ಸಿ.ಮಲ್ಲಿಕಾರ್ಜುನ್,ಪ್ರಾಂಶುಪಾಲ ಡಾ.ದಾದಪೀರ್ ನವಿಲೆ ಹಾಳ್,ಆಡಳಿತ ಮಂಡಳಿಯ ಮುನ್ನಾ,
ಶಿಕ್ಷಕಿ ಶಿಲ್ಪಾ,ಪಲ್ಲಾಗಟ್ಟೆ ಶೇಖರಪ್ಪ,ಗೌಸ್ ಪೀರ್,ಜಗಳೂರು ನದಾಪ್ ಪಿಂಜಾರ್ ಸಂಘದ ಅದ್ಯಕ್ಷ ಬಂಗ್ಲೆ ಪರ್ವೀಜ್. ,ಸೇರಿದಂತೆ ಹಾಜರಿದ್ದರು.