ಜಗಳೂರು ಸುದ್ದಿ
ಗಿರಿಜನರ ಪ್ರಾತಸ್ಮರಣೀಯರ ಇತಿಹಾಸ ಸಾರುವ ಕಲೆಗಳು ಪ್ರಸ್ತುತ ಆಧುನಿಕ ಭರಾಟೆಯಲ್ಲಿ ಮೂಲ ಕಲೆಗಳು ಕ್ಷಿಣಿಸುತ್ತಿವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಕಲೆಗಳು ಉಳಿಸಿ ಬೆಳೆಸಲು ಪ್ರೋತ್ಸಾಹ ಶ್ಲಾಘನೀಯ ಶಾಸಕ ಬಿ. ದೇವೇಂದ್ರಪ್ಪ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಗಿರಿಜನ ಉತ್ಸವ ಕಾರ್ಯಕ್ರಮ ಜರುಗಿತು.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಡಿಸೆಂಬರ್ 26
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಬುಡಕಟ್ಟು ಸಂಸ್ಕೃತಿ ವಿವಿಧ ಕಲೆಗಳು ಪ್ರದರ್ಶನ ಮೂಲಕ ಗಿರಿಜ ಉತ್ಸವಕ್ಕೆ ಶಾಸಕ ಬಿ ದೇವೇಂದ್ರಪ್ಪ ಚಾಲನೆ ನೀಡಿ ಬಯಲು ರಂಗ ಮಂದಿರದಲ್ಲಿ ನಡೆದ ವೇದಿಕೆ ಕಾರ್ಯಕ್ರಮದ ಉದ್ಗಾಟನೆಯನ್ನು ನೆರವೇರಿಸಿ ಉದ್ದೇಶಿಸಿ ಮಾತನಾಡಿದರು ಭಾರತದ ಮೂಲ ನಿವಾಸಿಗಳು ದ್ರಾವಿಡರು ಮತ್ತು ಆರ್ಯರು ನದಿ ಪಥದಲ್ಲಿ ಪ್ರಥಮವಾಗಿ ಬದುಕಿದ್ದರು
ಜನಪದರ ಕಲೆಯೆ ಮೂಲ ಗಿರಿಜನ ಉತ್ಸವ ಗ್ರಾಮೀಣ ಸೋಗಡಿ ಮೂಲ ಬೇರು ಆ ಕಲೆಗಳನ್ನು ಆಧುನಿಕತೆಯಲ್ಲಿ ಉಳಿಸಿ ಬೇಳೆಸಲು ಇಲಾಖೆ ಮೂಲಕ ಅತ್ಯಂತ ಸಹಕಾರಿಯಾಗಿದ್ದು ನಾವು ಮೂಲ ಗ್ರಾಮೀಣ ಪ್ರದೇಶಗಳಲ್ಲಿ ಕೋಲಾಟ. ಸೋಬಾನೆ ಪದ .ಭಜನೆ ವಿವಿಧ ಕಲೆಗಳು ನಮ್ಮ ಪ್ರಾತಸ್ಮರಣೀಯರ ಇತಿಹಾಸ ಸಾರುವ ಕಲೆಗಳು ಪ್ರಸ್ತುತ ಆಧುನಿಕ ಭರಾಟೆಯಲ್ಲಿ ಮೂಲ ಕಲೆಗಳು ಕ್ಷಿಣಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮಗಳ ಮೂಲಕ ಪ್ರೊತ್ಸಾಹ ನೀಡುವಂತೆ ತಿಳಿಸಿದ ಕ್ಷೇತ್ರದ ಶಾಸಕರು ಕೋಲಾಟ ಮತ್ತು ಜನಪದ ಗೀತೆ ಹಾಡುವ ಮೂಲಕ ಪ್ರೇಕ್ಷಕರುನ್ನು ರಂಜಿಸಿದರು.
ಹಿರಿಯ ಸಾಹಿತಿ ಎನ್ ಟಿ ಎರ್ರಿಸ್ವಾಮಿ ಮಾತನಾಡಿದರು ಗ್ರಾಮೀಣ ಕಲೆಗಳುನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಗಿರಿಜನರ ಜನಪದರ ಸಾಹಿತ್ಯ ಮತ್ತು ಕಲೆ ಒಂದು ಅವಿಭಾಜ್ಯ ಅಂಗ ಎಂದರು.ಕಲೆಗಳು ಹೆಚ್ಚಾಗಿ ತಳಸಮುದಾಯದ ಜನರಲ್ಲಿ ಕಂಡು ಬರಲಿದೆ ಪಾರಂಪರಿಕವಾಗಿ ಬಂದಂತ ಕಲೆಗಳು ಉಳಿಸಬೇಕಾಗಿದೆ. ಪೋತರಾಜರ ಕುಣಿತ ವಿವಿಧ ಕಲೆಗಳ ಕಲೆಗಾರರು ನಮ್ಮ ತಾಲೂಕಿನಲ್ಲಿರುವುದು ಶ್ಲಾಘನೀಯ
ಆದರೆ ತಾಂತ್ರಿಕ ವಿದ್ಯಮಾನದ ವಾಟ್ಸಪ್ ಪೇಸ್ ಬುಕ್ ನಂತ ಹಾವಳಿಯಲ್ಲಿ ಕಲೆಗಳು ನಶಿಸುತ್ತವೆ ಆದ್ದರಿಂದ ಇಂತ ಕಾರ್ಯಕ್ರಮಗಳ ಮೂಲಕ ಉಳಿಸಿ ಯುವಕರಿಗೆ ಸಾಂಸ್ಕೃತಿಕ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿವೆ.
ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾದ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿದರು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುವ ಮೂಲಕ ಗಿರಿಜನ ಮತ್ತು ಹರಿಜನ ಹಿಂದೂಳಿದ ಸಮುದಾಯವರಿಗೆ ಹೆಚ್ಚು ಅನುದಾನವನ್ನ ಪರಿಶಿಷ್ಟ ವರ್ಗಗಳಂತ ಅಭಿವೃದ್ಧಿ ನಿಗಮಗಳ ಮೂಲಕ ತಲುಪಿಸುವಂತ ಕೆಲಸ ಮಾಡಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮುಂಚಿತವಾಗಿ ತಿಳಿಸಿದರೆ ಹೆಚ್ಚಿನ ಸ್ಥಳಿಯ ಕಲಾವಿದರುನ್ನು ಕರೆತರಲು ಸಹಕಾರಿಯಾಗುತ್ತಿತ್ತು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ ಈ ಗಿರಿಜನ ಉತ್ಸವದಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದು ಒಂದು ತಂಡಕ್ಕೆ 20.000 ಸಾವಿರ ಆ ತಂಡ ಖಾತೆಗೆ ಜಮಾ ಮಾಡುವ ಮೂಲಕ ಗಿರಿಜನರ ಸಂಸ್ಕೃತಿ ಮುನ್ನಲೆಗೆ ತರುವ ಉದ್ದೇಶವಾಗಿದೆ ಎಂದರು.
ಮಾನವ ಬಂಧುತ್ವ ವೇದಿಕೆ ಸಂಚಾಲಕ ಕೆ ಎಸ್ ಪ್ರಭಣ್ಣ ಮಾತನಾಡಿ ನಮ್ಮ ಮೂಲ ಸಂಸ್ಕೃತಿ ಕಲೆಗಳು ನಮ್ಮ ಇತಿಹಾಸವನ್ನು ತಿಳಿಸುತ್ತೆವೆ. ಗಿರಿಜನರ ಬುಡಕಟ್ಟು ಜನರ ಜನಪದರ ಜೀವನ ಶೈಲಿ ಶ್ಲಾಘನೀಯ ಎಂದರು. ನಮ್ಮ ಮೂಲ ಗಿರಿಜನ ಸಮುದಾಯ ಬೆಟ್ಟ ಗುಡ್ಡಗಳಲ್ಲಿ ವಾಸಿಸುತಾ ಗೆಡ್ಡೆ ಗೆಣಸು ತಿನ್ನುವ ಮೂಲಕ ಹುಟ್ಟು ಬೆಳವಣಿಗೆ ಉದಿಪದಿಯಲ್ಲಿ ವಾಸಿಸುವಂತ ಬುಡಕಟ್ಟು ಸಂಸ್ಕೃತಿ ಸಾರವೆ ಈ ಗಿರಿಜನೋತ್ಸವ ಎಂದರು.
ಈ ಸಂದರ್ಭದಲ್ಲಿ. ಚಿತ್ರದುರ್ಗ ಮಾಜಿ ಜಿಪಂ ಸದಸ್ಯ ಬಾಬುರೆಡ್ಡಿ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್.
ಕಾಂಗ್ರೆಸ್ ಲೋಕಸಭಾ ಆಕಾಂಕ್ಷಿ ಕಲ್ಲೇಶ್ ರಾಜ್ ಪಟೇಲ್. ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ರೆಡ್ಡಿ. ಪಪಂ ಸದಸ್ಯ ಲುಖ್ಮಾನ್ ಖಾನ್. ಪಪಂ ನಾಮನಿರ್ದೇಶನ ಸದಸ್ಯರಾದ ಜೈಯ್ಯಣ್ಣ. ಮುಖಂಡರಾದ ಮಹಮದ್ ಗೌಸ್ .ತಮಲೆಹಳ್ಳಿ ತಿಮ್ಮಣ್ಣ.ಪಲ್ಲಾಗಟ್ಟೆ ಶೇಖರಪ್ಪ. ಸಣ್ಣ ತಾನಾಜಿ ಗೋಸಾಯಿ. ಚು.ಸಾ.ಪ.ಅದ್ಯಕ್ಷ ಗೀತಾ ಮಂಜು.ಶಾಹಿನ್ ಬೇಗಂ .ಕಸಾಪ ಸದಸ್ಯರಾದ ಶಿಕ್ಷಕರಾದ ಮಾರನಾಯ್ಕ್.ಇಂದ್ರಮ್ಮ. ಇನ್ನು ಮುಂತಾದವರು ಹಾಜರಿದ್ದರು.
ವಿವಿಧ ಕಲಾತಂಡದ ಕಲಾವಿದರಿಂದ ವಿವಿದ ಕಲೆಗಳ ನೃತ್ಯ ಪ್ರದರ್ಶನ ಅನಾವರಗೊಂಡವು ಹಾಗೂ ಮದಕರಿ ನಾಯಕ ಕುರಿತು ನಾಟಕ. ಪ್ರೇಕ್ಷಕರಿಗೆ ಮನೋರಂಜನೆ ಕಾರ್ಯಕ್ರಮ ಜರುಗಿತು.