ಜಗಳೂರು ರಾಜ್ಯ ಎಸ್ಟಿ ಘಟಕದ ಪ್ರದಾನ ಕಾರ್ಯಧರ್ಶಿಯಾಗಿ ಎಂ ಡಿ ಕೀರ್ತಿಕುಮಾರ್ ಆಯ್ಕೆ ಆದೇಶ ಪ್ರತಿ ಅಸ್ತಂತರಿಸಿ ಕಾಂಗ್ರೆಸ್ ಪಕ್ಷದ ಬಲವರ್ಧನೆ ಸ್ಥಾನಗಳು ಅತ್ಯವಶ್ಯಕ ಎಂದು ರಾಜ್ಯ ಕೆ ಪಿ ಸಿ ಸಿ ಕಾರ್ಯದರ್ಶಿ ಅಸಗೋಡು ಜಯಸಿಂಹ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿ ಜಗಳೂರು:
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಡಿಸೆಂಬರ್ 30.
ಜಗಳೂರು ಪಟ್ಟಣದಲ್ಲಿರುವ ಶಾಸಕರ ಜನ ಸಂಪರ್ಕ ಕಛೇರಿಯಲ್ಲಿ ಶನಿವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು ಕ್ಷೇತ್ರದಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕರ ಗೆಲುವಿಗೆ ಕೀರ್ತಿಕುಮಾರ್ ಶ್ರಮ ಆಪಾರವಿದ್ದು ಪಕ್ಷವನ್ನ ತಳಮಟ್ಟದಿಂದ ಸಂಘಟನೆ ಮಾಡುವಲ್ಲಿ ಯಶಸ್ವಿಯಾಗಿರುವ ಕೀರ್ತಿಕುಮಾರ್ ಕಾರ್ಯವೈಖರಿಗಳನ್ನ ಕಂಡಂತ ಸರ್ಕಾರದ ಉಪಾಮುಖ್ಯಮಂತ್ರಿ ಹಾಗೂ ರಾಜ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರು ಗುರುತಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿ ಆದೇಶ ಮಾಡಿದ್ದಾರೆ.
ಎಂ ಡಿ ಕೀರ್ತಿಕುಮಾರ್ ರವರಿಗೆ ಕೆಪಿಸಿಸಿ ಕಾರ್ಯಧರ್ಶಿ ಅಸಗೋಡು ಜಯಸಿಂಹ ಆದೇಶ ಪ್ರತಿ ವಿತರಿಸಿದರು
ಈ ದಿನ ನಾವು ಶಾಸಕರ ಕಛೇರಿಯಲ್ಲಿ ಆದೇಶ ಪತ್ರ ಅಸ್ತಂತರಿಸಿ ಮುಂದಿನ ಲೋಕಸಭಾ ಚುನಾವಣೆ ಗೆಲುವಿಗೆ ಮತ್ತೂಷ್ಟು ಪಕ್ಷ ಸಂಘಟನೆಗೆ ತೋಡಗಿ ಕಾಂಗ್ರೆಸ್ ಪಕ್ಷವನ್ನ ಕ್ಷೇತ್ರದಲ್ಲಿ ಭದ್ರಕೋಟೆಯಂತೆ ಪಕ್ಷದ ಸಂಘಟನೆ ಮಾಡುವ ನಿಟ್ಟಿನಲ್ಲಿ ಕಿರ್ತಿಕುಮಾರ್ ತಂದೆಯಂತೆ ಜನರ ಸೇವೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ರಾಜ್ಯಮಟ್ಟದ ನಾಯಕರುಗಳಾದ ಕೆಪಿಸಿಸಿ ವಕ್ತಾರರಾದ ಸಲೀಂ ಆಲಿ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮಾರ್ಗದರ್ಶನದಂತೆ ರಾಜ್ಯಮಟ್ಟದ ಸ್ಥಾನಗಳು ದೊರಕಿವೆ. ನಮ್ಮ ಜಗಳೂರು ಕ್ಷೇತ್ರಕ್ಕೆ ಎರಡು ಸ್ಥಾನಗಳು ಸಿಕ್ಕಿರುವುದು ಶ್ಲಾಘನೀಯ ಈಗಾಗಲೇ ರಾಜ್ಯ ಎಸ್ಟಿ ಸೆಲ್ ಅದ್ಯಕ್ಷರಾದ ಕೆ ಪಿ ಪಾಲಯ್ಯ ಉತ್ತಮ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದು ಇದೀಗ ಮತ್ತೊಂದು ಸ್ಥಾನ ಎಂ ಡಿ ಕೀರ್ತಿಕುಮಾರ್ ರಾಜ್ಯ ಪ್ರದಾನ ಕಾರ್ಯಧರ್ಶಿಯಾಗಿ ಹೊಸ ವರ್ಷದ ಹೊಸ್ತಿಲಲ್ಲಿ ಆಯ್ಕೆಯಾಗಿರುವುದು ಸಂತೋಷ ತಂದಿದೆ ಎಂದು ಶ್ಲಾಘಿಸಿದರು.
ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಮಾತನಾಡಿ ನಮ್ಮ ಪುತ್ರ ಎಂ.ಡಿ ಕೀರ್ತಿಕುಮಾರ್ ಕ್ಷೇತ್ರದಲ್ಲಿ ಯುವಕರ ಸಂಘಟನೆ ಮಾಡುವ ದೃಷ್ಟಿಯಲ್ಲಿ ಉತ್ತಮ ಪಕ್ಷ ಬೆಳವಣಿಗೆಯತ್ತಾ ದಾಪುಗಾಲು ಹಾಕಿ ನಮ್ಮ ಬೆನ್ನಿಗೆ ನಿಂತು ಕೆಲಸ ಮಾಡಲಿದ್ದಾರೆ. ಇದನ್ನು ಗುರುತಿಸಿದ ರಾಜ್ಯ ನಾಯಕರುಗಳು ಕೆಪಿಸಿಸಿ ರಾಜ್ಯ ಎಸ್ಟಿ ಪ್ರದಾನ ಕಾರ್ಯಧರ್ಶಿ ಸ್ಥಾನ ನೀಡಿರುತ್ತಾರೆ. ಕೀರ್ತಿಕುಮಾರ್ ಕಳೆದ 12 ವರ್ಷಗಳ ಕಾಲ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು ನಮ್ಮ ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗೆ ಹಗಲಿರುಳು ಶ್ರಮಿಸಿರುವುದು ತಮ್ಮೆಲ್ಲರಿಗೆ ತಿಳಿದಿದೆ. ಇದೀಗ ಬರುವ ಲೋಕಸಭಾ ಚುನಾವಣೆ ಗೆಲುವಿಗೆ ಅತ್ಯಂತ ಸಹಕಾರಿಯಾಗುವುದು..ಜಗಳೂರಿಗೆ ಹೆಚ್ಚು ರಾಜ್ಯ ಘಟಕದ ಸ್ಥಾನಗಳು ಒದಗಿ ಬಂದ ಪ್ರತಿಫಲವಾಗಿ ಬರುವ ಜಿಪಂ ತಾಪಂ ಲೋಕಸಭಾ ಚುನಾಚಣೆ ಎದುರಿಸಲು ಮತ್ತೆ ತಳ ಮಟ್ಟದ ಪಕ್ಷ ಸಂಘಟನೆ ಮಾಡಲು ಅತ್ಯವಶ್ಯಕ ಎಂದರು .ಪಕ್ಷದಲ್ಲಿ ಕೆಲಸ ಮಾಡಲು ಒಂದು ಸ್ಥಾನಗಳು ಬಹುಮುಖ್ಯ ಈ ರೀತಿ ಜವಾಬ್ದಾರಿ ನೀಡಿದರೆ ಪಕ್ಷ ಬಲವರ್ಧನೆಗೆ ಸಹಕಾರಿಯಾಗಲಿದೆ ..ಬರುವ ದಿನಗಳಲ್ಲಿ ರಾಜ್ಯ ನಾಯಕರುಗಳನ್ನು ಕರೆ ತರುವ ಮೂಲಕ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಕಾಂಗ್ರೆಸ್ ರಾಜ್ಯ ಎಸ್ಟಿ ಸೆಲ್ ಪ್ರದಾನ ಕಾರ್ಯಧರ್ಶಿ ಎಂ ಡಿ ಕೀರ್ತಿಕುಮಾರ್ ಆದೇಶ ಪ್ರತಿ ಸ್ವೀಕರಿಸಿ ಮಾತನಾಡಿದರು ಪಕ್ಷದಲ್ಲಿ ಕೆಲ ಅಂತರಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಂಡು ಮತ್ತಷ್ಟು ಪಕ್ಷ ಸಂಘಟನೆಗೆ ಶ್ರಮಿಸುವ ಮೂಲಕ ಬರುವ ಲೋಕಸಭಾ .ಜಿಪಂ ತಾಪಂ.ಚುನಾವಣೆ ಅಭ್ಯರ್ಥಿಗಳ ಬಹುಮತದ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರ ಸಹಕಾರ ಅತಿ ಮುಖ್ಯವಾಗಿದೆ. ಇದೀಗ ನನಗೆ ಆಯ್ಕೆ ಮಾಡಿದ ರಾಜ್ಯ ಅದ್ಯಕ್ಷರಾದ ಡಿ ಕೆ ಶಿವಕುಮಾರ್ ಹಾಗೂ ರಾಜ್ಯ ನಾಯಕರುಗಳು ಜಿಲ್ಲಾ ಉಸ್ತುವಾರಿ ಸಚಿವರಿಗೂ ಕ್ಷೇತ್ರದ ನಾಯಕರುಗಳಿಗೆ ನಾನು ಅಭಾರಿಯಾಗಿದ್ದೆನೆ ನನಗೆ ನೀಡಿದ ಜವಾಬ್ದಾರಿಯನ್ನ ಪಾರದರ್ಶಕ ವಾಗಿ ಪಕ್ಷ ಸಂಘಟನೆಗೆ ಶ್ರಮಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಷಂಷೀರ್ ಆಹಮದ್. ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಗೌಡ್ರು.ಮುಖಂಡರಾದ ತಿಪ್ಪೇಸ್ವಾಮಿ.ಮುಖಂಡರಾದ ಪ್ರಕಾಶರೆಡ್ಡಿ . ಓಮಣ್ಣ ಗುರುಮೂರ್ತಿ.ವಕೀಲರಾದ ಲಕ್ಷ್ಮಣ.ಜಗಳೂರಯ್ಯ.ಕಾಂಗ್ರೆಸ್ ಮುಖಂಡರಾದ ಪ್ರಭಣ್ಣ.ನಿವೃತ್ತ ಉಪಾನ್ಯಾಸಕ ಷಂಷುದ್ದಿನ್.ಪಲ್ಲಾಗಟ್ಟೆ ಶೇಖರಪ್ಪ..ತಮಲೆಹಳ್ಳಿ ಹುನುಮಂತಣ್ಣ.ತಿಮ್ಮಣ್ಣ..ರುದ್ರಮುನಿ.ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಸಮಿತಿ ಅದ್ಯಕ್ಷರು ಸಿ ಎಂ ಹೊಳೆ ಮಾರುತಿ
ಯುವ ಕಾಂಗ್ರೆಸ್ ಮುಖಂಡ ಅಜ್ಮೂಲ..ಸೇರಿದಂತೆ ಹಾಜರಿದ್ದರು.