ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ನಡೆದ ಮಾಜಿ ಸಂಸದರಾದ ಶ್ರೀ ಚನ್ನಯ್ಯ ಒಡೆಯರ್ ವೇದಿಕೆಯಲ್ಲಿ  ದಾಸಶ್ರೇಷ್ಠ ಶ್ರೀ ಕನಕದಾಸರ 536 ನೇ  ಜಯಂತೋತ್ಸವನ್ನು ಅರ್ಥಗರ್ಭಿತವಾಗಿ ಜರುಗಿತು.

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಡಿಸೆಂಬರ್ 31 

ಕನಕದಾಸರು ರಚಿಸಿರುವ ಕೃತಿಗಳು, ಸಂದೇಶಗಳು ಮಾನವ ಸಮಾಜ ಸಮಾನತೆಯಿಂದ ಹಾಗೂ ಮತ್ತು ಸಹಬಾಳ್ವೆಯಿಂದ ಬದುಕಲು ಅತ್ಯಂತ ಸಹಕಾರಿಯಾಗಿವೆ . ಎಂದು ಕಾರ್ಯಕ್ರಮವನ್ನು ಉದ್ಗಾಟನೆ ಮಾಡಿ ಶಾಸಕ ಬಿ ದೇವೇಂದ್ರಪ್ಪ ಅಭಿಪ್ರಾಯಪಟ್ಟರು.

ಲೋಕಸಭಾ ಚುನಾವಣೆ ಆಕಾಂಕ್ಷಿ ಶಿವಕುಮಾರ್ ಒಡೆಯರ್ ರವರ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದ್ದ ದಾಸ ಶ್ರೇಷ್ಠ  ಕನಕದಾಸ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು 

ಯಾವುದೇ ಜಾತಿ, ಮತ, ಪಂಥ ಹಾಗೂ ಮೇಲು ಕೀಳು ಎಂಬ ಭೇದವಿಲ್ಲದೆ ಜಗತ್ತಿನ ಎಲ್ಲ ವ್ಯಕ್ತಿಗಳು ಸಮಾನರು ಎಂಬ ತತ್ವವನ್ನು ‘ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಕೀರ್ತನೆಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಕೀರ್ತಿ ಕನಕ ದಾಸರಿಗೆ ಸಲ್ಲುತ್ತದೆ ಎಂದರು.

ಮಾಜಿ ಸಂಸದರ ಪುತ್ರ ಲೋಕಸಭಾ ಚುನಾವಣೆ ಆಕಾಂಕ್ಷಿ ಶಿವಕುಮಾರ್ ಒಡೆಯರ್ ಕಾರ್ಯಕ್ರಮವನ್ನುದ್ದೆಶಿಸಿ  ಮಾತನಾಡಿದರು. ಮಾನವರಾದ ನಾವು ಉತ್ತಮ ದಾರಿಯಲ್ಲಿ ನಡೆಯಲು ಕನಕದಾಸರ ಸಂದೇಶಗಳು ಸದಾ ದಾರಿದೀಪಗಳಾಗಿರುತ್ತವೆ ಎಂದರು.

ಉಡುಪಿ ಕೃಷ್ಣಗೂ ಹಾಗೂ ಕನಕದಾಸರಿಗೂ ಇರುವ ಅವಿನಾಭಾವ ಸಂಬಂದ ಭಕ್ತಿಭಾವನೆಯ‌ ಸಂಕೇತ ಮತ್ತು ಕೃಷ್ಣ ಮಠದ ಕನಕನ ಕಿಂಡಿಯ ಮಹತ್ವ ಎಲ್ಲರಿಗೂ ತಿಳಿದಿದೆ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ  ಎಚ್.ಪಿ. ರಾಜೇಶ್,  ಕಾಂಗ್ರೆಸ್ ರಾಜ್ಯ ಎಸ್ ಟಿ ಘಟಕದ ರಾಜ್ಯಾದ್ಯಕ್ಷ ಕೆ ಪಿ. ಪಾಲಯ್ಯ .ಲೋಕಸಭಾ ಚುನಾವಣೆ ಆಕಾಂಕ್ಷಿ  ಕಲ್ಲೆಶ್ ರಾಜ್ ಪಟೇಲ್.ಕಾಂಗ್ರೆಸ್ ಪಕ್ಷದ ಜಿಲ್ಲಾದ್ಯಕ್ಷ ಹೆಚ್ ಬಿ ಮಂಜಪ್ಪ.,ಮುಖಂಡ ಎಲ್ ಬಿ ಬೈರೇಶ್.ಮುಖಂಡ ಗಿರೀಶ್ ಒಡೆಯರ್.  ಮಾಜಿ ಪಾಟೇಲ್ ರು  ಚಂದ್ರಶೇಖರ್ ಒಡೆಯರ್ , ಸಿದ್ದಯ್ಯ ಒಡೆಯರ್, ಹೊನ್ನಪ್ಪ, ಚಂದ್ರಮ್ಮ ಮಚೇಂದ್ರಪ್ಪ ಹಾಗೂ ಸಮಾಜದ ಎಲ್ಲಾ ಮುಖಂಡರು.ಸೇರಿದಂತೆ, ಯುವಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You missed

error: Content is protected !!