ಬಹುದಿನದ ಬೇಡಿಕೆಯಾದ 7 ನೇ ವೇತನ ಆಯೋಗ ಶೀಘ್ರವೆ ಜಾರಿಯಾಗೋಳಿಸಿ ನೌಕರರ ಬೇಡಿಕೆಗಳಿಗೆ ಸರ್ಕಾರ ದ್ವನಿಯಾಗಬೇಕು ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಸಿ ಬಿ ನಾಗರಾಜ್ ಶಾಸಕರಿಗೆ ಮನವಿ
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜನವರಿ 18
ಸುದ್ದಿ ಜಗಳೂರು
7ನೇ ವೇತನ ಆಯೋಗ ಜಾರಿಗೋಳಿಸಲು ತಾಲೂಕು ಸರ್ಕಾರಿ ನೌಕರರ ಸಂಘ ವತಿಯಿಂದ ಕ್ಷೇತ್ರದ ಶಾಸಕ ಬಿ. ದೇವೇಂದ್ರಪ್ಪರವರಿಗೆ ಮನವಿ ಸಲ್ಲಿಸಿದರು.
:
ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಜಗಳೂರು ತಾಲೂಕು ನೌಕರರ ಸಂಘದ ಪದಾಧಿಕಾರಿಗಳು ಶಾಸಕ ಬಿ ದೇವೇಂದ್ರಪ್ಪ ರವರುನ್ನು ಭೇಟಿ ಮಾಡಿ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ರಚಿಸಿರುವ ಏಳನೇ ವೇತನ ಆಯೋಗ ಜಾರಿಗೋಳಿಸಲು ಸದನದಲ್ಲಿ ಚರ್ಚಿಸಿ ನಮ್ಮ ಬೇಡಿಕೆಗಳುನ್ನು ಹಿಡೇರಿಸಿ ನೌಕರರಿಗೆ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಲಾಯಿತು.
.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಸಿ ಬಿ ನಾಗರಾಜ್ ಮಾತನಾಡಿ 7 ನೇ ವೇತನ ಆಯೋಗ ಜಾರಿ ಮಾಡುವಂತೆ ಸರ್ಕಾರಕ್ಕೆ ನಾವು ಸುಮಾರು ಬಾರಿ ಮನವಿ ಸಲ್ಲಿಸುತಾ ಬಂದಿದ್ದು ಸರ್ಕಾರ ನೌಕರರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಹೊಸ ಪಿಂಚಣಿ ಯೋಜನೆ ಎನ್‌ಪಿಎಸ್ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಒಪಿಎಸ್ ಜಾರಿಗೆ ತರಲು ಸರ್ಕಾರ ಕ್ರಮಕೈಗೊಳ್ಳಬೇಕು .ರಾಜ್ಯದಲ್ಲಿ 6 ಲಕ್ಷ ಸರ್ಕಾರಿ ನೌಕರರು ಇದ್ದು, ಇನ್ನೂ 2.50 ಲಕ್ಷ ಹುದ್ದೆಗಳು ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆ ಭರ್ತಿ ಮಾಡಬೇಕು ಇಂತ ಹಲವು ಬೇಡಿಕೆಗಳ ಬಗ್ಗೆ ಸರ್ಕಾರ ಗಮನಹರಿಸುವಂತೆ ಶಾಸಕರೊಂದಿಗೆ ಮನವಿ ಮಾಡಿಕೊಂಡರು.
ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ನೌಕರರ ಮನವಿ ಸ್ವಿಕರಿಸಿ ಶೀಘ್ರವೆ ಸಚಿವರೊಂದಿಗೆ ಚರ್ಚೆ ನಡೆಸುವೆ ಎಂದು ಭರವಸೆ ನೀಡಿದರು. ನಾನು ಕೂಡ ನಿವೃತ್ತ ನೌಕರ ಇದೀಗ ಶಾಸಕನಾಗಿ ನಿಮ್ಮೆಲ್ಲರ ಅಶಿರ್ವಾದದಿಂದ ಕ್ಷೇತ್ರದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದು ನಿಮ್ಮ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ನಿಮ್ಮ ಎಲ್ಲಾ ಬೇಡಿಕೆಗಳನ್ನು ಹಿಡೇರಿಸಲು ಸದನದಲ್ಲಿ ದ್ವನಿ ಎತ್ತುವೆ ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಬಿ ಆರ್ ಸಿ . ಡಿ.ಡಿ ಹಾಲಪ್ಪ.ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಉಮೇಶ್.. ಕಾಂಗ್ರೆಸ್ ಮುಖಂಡರು ಹಾಗೂ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್..ಸರ್ಕಾರಿ ನೌಕರರ ಸಂಘದ.ಕಾರ್ಯಧರ್ಶಿ ಎ ಎಲ್ ಟಿ. ತಿಪ್ಪೇಸ್ವಾಮಿ . ಮಾಜಿ ಅದ್ಯಕ್ಷ ಚಂದ್ರಪ್ಪ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಹನುಮಂತೇಶ್.ಸಹಕಾರ್ಯಧರ್ಶಿ ಶಿಕ್ಷಕರಾದ ಮಾರಪ್ಪ ಸೇರಿದಂತೆ ಮುಂತಾದವರು ಹಾಜರಿದ್ದರು