Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜನವರಿ 18
ಸುದ್ದಿ ಜಗಳೂರು
ಜಗಳೂರು ಪಟ್ಟಣದ ಶಾಸಕರ ಜನ ಸಂಪರ್ಕ ಕಛೇರಿ ಆವರಣದಲ್ಲಿ ಗುರುವಾರ ಯಾದವ ಸಮುದಾಯದ ವಿವಿಧ ಕಾರ್ಯಕರ್ತರು ಶಾಸಕರ ನೇತೃತ್ವದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ತೆರಳಿದ ಕಾರ್ಯಕರ್ತರುನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಂಡು ಸಭೆನ್ನುದ್ದೆಶಿಸಿ ಅವರು ಮಾತನಾಡಿದರು . ಕಾಂಗ್ರೆಸ್ ಪಕ್ಷ ಸಿದ್ಧಾಂತವನ್ನು ಒಪ್ಪಿ ಯಾದವ ಸಮುದಾಯದವರು ಮರಳಿ ಗೂಡಿಗೆ ಎಂಬಂತೆ ಪುನ ಪಕ್ಷಕ್ಕೆ ಸೇರ್ಪಡೆಯಾಗಿದ್ದಿರಿ.
ಮನುಷ್ಯ ತಪ್ಪು ಮಾಡುವುದು ಸಹಜ ಆದರೆ ಆತ್ಮಾವಲೋಕನ ಮಾಡಿಕೊಳ್ಳುವುದಕ್ಕಿಂತ ಮತ್ತೊಂದು ಶಿಕ್ಷೆಯಿಲ್ಲ ಎಂದರು .ತಾವುಗಳು ಯಾವುದೇ ಪಕ್ಷದಲ್ಲಿದ್ದರು ಸಹ ಪಕ್ಷ ನಿಷ್ಠೆ ಬದ್ದರಾಗಿರಿ ಎಂದು ಶಾಸಕರು ಕಿವಿ ಮಾತು ಹೇಳಿದರು. ನಾನು ಈ ಹಿಂದೆ ರಾಜಕೀಯಕ್ಕೆ ಬರಲು ರಾಜಕಾರಣ ಮಾಡಿದೆ ಆದರೆ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರ ಸಿಕ್ಕ ನಂತರ ನಾನು ರಾಜ ನೀತಿ ರಾಜ ಧರ್ಮವನ್ನ ಅನುಸರಿಸುವೆ.
ಕ್ಷೇತ್ರದಲ್ಲಿ ನಾನು ಗೆದ್ದಿರುವುದೆ ಒಂದು ಪವಾಡ ಸದೃಶ್ಯ
.ಚುನಾವಣೆಯಲ್ಲಿ ನನ್ನ ವಿರೋಧಿಗಳು ರೌಡಿ ಪಟ್ಟ ಕಟ್ಟಿ ಪಿತೂರಿ ನಡೆಸಿದರು ನಾನು ಶ್ರೀಕೃಷ್ಣನಂತೆ ಪವಾಡ ಸದೃಶ್ಯ ಎಂದರು .
ತಾಲ್ಲೂಕಿನಲ್ಲಿ ಶಾಂತಿ ಕಾಪಾಡುವೆ ನಾನು ನಿಮ್ಮ ಸೇವಕ ಕ್ಷೇತ್ರ ಅಭಿವೃದ್ಧಿಗೆ ಆದ್ಯತೆ ನೀಡಿ ಎಲ್ಲಾ ವರ್ಗದ ಹಿತಾ ಬಯಿಸುವೆ. ಯಾದವ ಸಮಾಜಕ್ಕೆ ಕಾಂಗ್ರೆಸ್ ಕೊಡುಗೆ ನೀಡಿರುವುದನ್ನ ಯಾರು ಮರೆಯಬಾರದು ಕಳೆದ ಅವಧಿಯಲ್ಲಿ ಕಾಂಗ್ರೇಸ್ ಪಕ್ಷ ಜಯಮ್ಮ ಬಾಲರಾಜ್ ರವರುನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿರುವುದನ್ನ ಸ್ಮರಿಸಿಕೊಳ್ಳಬೇಕಿದೆ..ಯಾದವ ಸಮಾಜದಲ್ಲಿ ಗೊಡ್ಡು ಸಂಪ್ರದಾಯ ಗಳಿಗೆ ಇತಿಶ್ರೀ ಹಾಡಲು ತಾಲ್ಲೂಕಿನಲ್ಲಿ ಜಾಗೃತಿ ಕಾರ್ಯಗಾರ ಅಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು .
57 ಕೆರೆ ತುಂಬಿಸುವ ಯೋಜನೆಯಡಿಯಲ್ಲಿ ಮಾರ್ಚ ಅಂತ್ಯಕ್ಕೆ ಕಾಮಗಾರಿ ಮುಗಿಯಲಿದ್ದು ಬರುವ ಜೋನ್ ತಿಂಗಳಲ್ಲಿ ಕೆರೆ ತುಂಬಿಸುವ ಚಿಂತನೆ ಕೆರೆಗಳಿಗೆ ನೀರು ತುಂಬಿಸಲು ಬದ್ದ ..ನಮ್ಮ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆಗಳು ಇಂತ ಬರಪರಿಸ್ಥಿತಿಯಲ್ಲಿ ಬಡವರ ಹಸಿವು ನೀಗಿಸಲು ಸಹಕಾರಿಯಾಗಿವೆ.. ರಾಮ ಮಂದಿರ ಹೆಸರಿನಲ್ಲಿ ಅಯೋದ್ಯೆಯಲ್ಲಿ ಕೋಟಿಗಟ್ಟಲೆ ಖರ್ಚು ಮಾಡುವ ಬಿಜೆಪಿ ಕೇಂದ್ರ ಸರ್ಕಾರ ಬಡವರ ಶೋಷಿತರ ಆಹಾರ ಹಕ್ಕಿನ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಸಂವಿಧಾನ ವಿರೋದ ನೀತಿ ಸರಿಯಲ್ಲ . ದೇಶದ ಸಂವಿಧಾನದಿಂದ ಪ್ರತಿಯೊಬ್ಬರು ಸ್ವಾತಂತ್ರ್ಯವಾಗಿ ಬದುಕುವ ಹಕ್ಕಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದ ಎಸ್ಟಿ ಘಟಕದ ರಾಜ್ಯಾದ್ಯಕ್ಷ ಕೆ ಪಿ ಪಾಲಯ್ಯ ಮಾತನಾಡಿದರು ಮುಂಬರುವ ದಿನಗಳಲ್ಲಿ ಸಂವಿಧಾನ ಉಳಿವಿಗೆ ಕಾಂಗ್ರೆಸ್ ದೇಶದಲ್ಲಿ ಅನಿವಾರ್ಯ
ಕಾಂಗ್ರೆಸ್ ಪಕ್ಷ ಸಿದ್ಧಾಂತಗಳು ಹಿಂದೂಳಿದ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಲಿವೆ. ಕಾಂಗ್ರೆಸ್ ಪಕ್ಷ ದೇಶದಲ್ಲಿ ಆಡಳಿತ ನಡೆಸಲು
59 ಸಾವಿರ ಕೋಟಿ ಹಣವನ್ನ ಜನಪರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಂತ ಮುಖ್ಯಮಂತ್ರಿ ಸಿದ್ದರಾಮಯ್ಯರವರ ದೂರದೃಷ್ಟಿಯಾಗಿದೆ..
ಕ್ಷೇತ್ರದಲ್ಲಿ ಶಾಸಕರ ಮಾರ್ಗದರ್ಶನದಲ್ಲಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಯಾದವ ಸಮಾಜದ ಮುಖಂಡರುಗಳು ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಬರುವ ಲೋಕಸಭಾ ಚುನಾವಣೆಯಲ್ಲಿ ಕೈ ಬಲಪಡಿಸಲು ಸಹಕಾರಿಯಾಗುವುದು ಎಂದರು.
ಕೆಪಿಸಿಸಿ ರಾಜ್ಯ ಎಸ್ ಟಿ. ಘಟಕದ ಪ್ರಧಾನಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್ ಮಾತನಾಡಿದರು ಯಾದವ ಸಮುದಾಯದವರಿಗೆ ಕಾಂಗ್ರೆಸ್ ಪಕ್ಷ ಸದಾ ಬೆಂಬಲ ನೀಡುತಾ ಬಂದಿದೆ.ಬಿಜೆಪಿ ಕೇವಲ ಓಟಿನ ರಾಜಕಾರಣ ಮಾಡಿ ನಿಮ್ಮನ್ನ ಬಳಸಿಕೊಂಡು ನಿಮ್ಮ ಹಿತಾ ಕಾಯುವುದಿಲ್ಲ . ಅಹಿಂದ ವರ್ಗದ ಪಕ್ಷ ಕಾಂಗ್ರೆಸ್ ಯಾವತ್ತು ಹಿಂದೂಳಿದ ಸಮುದಾಯಗಳುನ್ನು ಕೈಬಿಡಲ್ಲ
ಕಾರ್ಯಕರ್ತರು ಪಕ್ಷನಿಷ್ಠೆಗೆ ಕೆಲಸ ಮಾಡಿ ನಾವು ಮತ್ತು ನಮ್ಮ ಪಕ್ಷದ ನಾಯಕರುಗಳು ತಮ್ಮ ಕಷ್ಟ ಸುಖದಲ್ಲಿ ಬಾಗಿಯಾಗರುವ ನಾಯಕರುಗಳುನ್ನು ಮರೆಯಬೇಡಿ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು. ತಾಲ್ಲೂಕಿನ ವಿವಿಧ ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಮೌಡ್ಯ ಸಂಪ್ರದಾಯದಂತೆ ಬಾಲ್ಯವಿವಾಹ ಪದ್ದತಿಯಂತ ಪಿಡುಗುಗಳಿಗೆ ಒಳಗಾಗಿ ಕಾನೂನು ಸಮಸ್ಯೆಗಳ ಸುಳಿಗೆ ಸಿಲುಕದಂತೆ ಶೀಘ್ರವಾಗಿ ಗೋಲ್ಲರಹಟ್ಟಿ ಗ್ರಾಮಗಳಲ್ಲಿ ಸಂಬಂಧಿಸಿದ ಇಲಾಖೆಗಳಿಂದ ಜಾಗೃತಿ ಕಾರ್ಯಗಾರ ನಡೆಸಲಾಗುವುದು. ಯಾದವ ಸಮುದಾಯದವರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ನಮ್ಮ ಪಕ್ಷಕ್ಕೆ ಸಹಕಾರ ನೀಡುವಂತೆ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡ ಸಿ.ತಿಪ್ಪೇಸ್ವಾಮಿ ಮಾತನಾಡಿ ಭಾರತ ದೇಶಕ್ಕಾಗಿ ಪ್ರಾಣ ತೆತ್ತು ಸ್ವಾತಂತ್ರ್ಯ ತಂದುಕೊಟ್ಟಂತ ಏಕೈಕ ಕಾಂಗ್ರೆಸ್ ಪಕ್ಷ ಇದೀಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪಕ್ಷಗಳು ಕೋಮುಗಲಭೆ ಸೃಷ್ಠಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು
ತಾಪಂ ಮಾಜಿ ಸದಸ್ಯ ಮುಖಂಡ ಗೊಲ್ಲರಹಟ್ಟಿ ಚಿತ್ತಪ್ಪ ಮಾತನಾಡಿ ನಾನು ತಪ್ಪಿನ ಅರಿವಿನಿಂದ ಪುನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಇನ್ನು ಮುಂದೆ ಯಾವುದೇ ಕಾರಣಕ್ಕೂ ಪಕ್ಷ ಬದಲಾವಣೆ ಪ್ರಶ್ನೆಯಿಲ್ಲ ಶಾಸಕರ ನೇತೃತ್ವದಲ್ಲಿ ನಾನು ಈ ಹಿಂದೆ ಪಕ್ಷಕ್ಕೆ ಸೇರ್ಪಡೆಯಾಗಿ ಇದೀಗ ನಮ್ಮ ಸಮುದಾಯದ ಹೆಚ್ಚು ಕಾರ್ಯಕರ್ತರುನ್ನು ಪಕ್ಷಕ್ಕೆ ಕರೆತರಲಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನ ವಿವಿಧ ಗ್ರಾಮಗಳ 150 ಕ್ಕೂ ಹೆಚ್ಚು ಕಾರ್ಯಕರ್ತರು ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಮರು ಸೇರ್ಪಡೆಗೊಂಡರು .ಮುಖಂಡರಾದ ಚಿತ್ತಪ್ಪ,ರಂಗಪ್ಪ.ಕಾಟಲಿಂಗಪ್ಪ,ಅಜ್ಜಯ್ಯ.ರೇವಣಸಿದ್ದಪ್ಪ.ಬಾಲರಾಜ್ ಸೇರಿದಂತೆ ಮುಂತಾದವರು ಸೇರ್ಪಡೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಅದ್ಯಕ್ಷರಾದ ಷಂಷೀರ್ ಆಹಮದ್. ಪಪಂ ಸದಸ್ಯ ರವಿಕುಮಾರ್. ಕಾಂಗ್ರೆಸ್ ಮುಖಂಡ .ಪ್ರಕಾಶ್ ರೆಡ್ಡಿ.ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಬಿ ಮಹೇಶ್. ಮುಖಂಡರಾದ.ಓಮಣ್ಣ. ಮಾಳಮ್ಮನಹಳ್ಳಿ ವೆಂಕಟೇಶ. ನಾಗೇಂದ್ರರೆಡ್ಡಿ.ಯಾದವ ಸಮಾಜದ ಮುಖಂಡ ಜೀವಣ್ಣ..ರಂಗನಾಥರೆಡ್ಡಿ.ಹಿರೆ ಮಲ್ಲನಹಳೆ ಗ್ರಾಪಂ ಸದಸ್ಯ ಅನೂಪ್.
ತಾಪಂ ಮಾಜಿ ಸದಸ್ಯ ರೇವಣ್ಣ. ಬೋವಿ ಸಮಾಜದ ಮುಖಂಡ ಅರ್ಜನ್.
ರಾಜ್ಯ ಕಾರ್ಮಿಕ ಘಟಕದ ಜಂಟಿ ಕಾರ್ಯಧರ್ಶಿ ರುದ್ರೇಶ್. ಹಟ್ಟಿ ತಿಪ್ಪೇಸ್ವಾಮಿ .ಯುವ ಘಟಕದ ಅಜ್ಮೂಲ್.ಮುಖಂಡ ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಹಾಜರಿದ್ದರು.