Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜನವರಿ 23 ಜೆ ಎಲ್ ಅರ್ ನ್ಯೂಸ್
ಜಗಳೂರು ಸುದ್ದಿ:ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಅಂಬೇಡ್ಕರ್ ಪುತ್ಥಳಿ ಸುತ್ತಲೂ,ಪಾರ್ಕ್,ಗೇಟ್,ಮೆಟ್ಟಿಲು ಅಭಿವೃದ್ದಿ ಕಾಮಗಾರಿಗೆ ಕ್ರಮಕೈಗೊಳ್ಳಲು ಶಾಸಕ.ಬಿ.ದೇವೇಂದ್ರಪ್ಪ ಅವರು ಸ್ಥಳ ಪರಿಶೀಲನೆ ನಡೆಸಿ ದಲಿತ ಮುಖಂಡರುಗಳಿಗೆ ಸೂಚಿಸಿದರು.
ನಂತರ ಮಾತನಾಡಿದ ಅವರು,ಪಟ್ಟಣದಲ್ಲಿ ಡಾ.ಬಿ.ಆರ್ .ಅಂಬೇಡ್ಕರ್ ಪುತ್ಥಳಿ ಇರುವುದು ಸಂತಸದ ಸಂಗತಿ ಆದರೆ,ಅದರ ಸುತ್ತಲೂ ನಿರ್ವಹಣೆ,ಭದ್ರತೆ,ಪ್ರತಿಯೊಬ್ಬರ ಹೊಣೆಯಾಗಬೇಕಿದೆ.ದೇಶಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕ ಬಾಬಾಸಾಹೇಬರು ಕೇವಲ ಒಂದು ಜಾತಿಗೆ ಸೀಮಿತವಾಗಬಾರದು.ಅವರ ಆಶಯದಂತೆ ಶಿಕ್ಷಣ ಸಂಘಟನೆ,ಹೊರಾಟ ಅನಿವಾರ್ಯ.ದೇಶದ ಸಂವಿಧಾನ ಉಳಿಸುವ ರಾಜಕೀಯ ಪಕ್ಷಗಳ ಪರವಾಗಿ ಶೋಷಿತ ಸಮುದಾಯಗಳು ಜಾಗೃತರಾಗಬೇಕಿದೆ ಎಂದು ಕಿವಿಮಾತು ಹೇಳಿದರು.
ಅಂಬೇಡ್ಕರ್ ಅಭಿಮಾನಿಗಳು ಸ್ವಯಂ ಪ್ರೇರಿತವಾಗಿ ತಮ್ಮಿಂದ ಸಾಧ್ಯವಾದಷ್ಟು ದೇಣಿಗೆಯೊಂದಿಗೆ ಕೈಜೋಡಿಸಬೇಕು . ಪುತ್ಥಳಿ ಸುತ್ತಲೂ ಅಭಿವೃದ್ದಿ ಕಾಮಗಾರಿಗೆ ವೈಯಕ್ತಿಕವಾಗಿ ದಲಿತ ಮುಖಂಡರಿಗೆ ₹50000 ನಗದು ದೇಣಿಗೆ ವಿತರಿಸಲು ಮುಂದಾದ ಶಾಸಕರು ಈ ವೇಳೆ ಸಮಾಜದ ಮುಖಂಡ ಜಿ ಎಚ್ ಶಂಭುಲಿಂಗಪ್ಪರವರು ಕಾಮಗಾರಿ ನೀಲಿ ನಕ್ಷೆ ತಯಾರಿಸಿ ನಿಮ್ಮ ಸಹಕಾರದಿಂದ ಅಂಬೇಡ್ಕರ್ ಪುತ್ಥಳಿ ಸುತ್ತ ಕಾಂಪೌಂಡ್ ಸೇರಿದಂತೆ ಅಭಿವೃದ್ಧಿಯಾಗಲಿ ನಮಗೆ ಹಣ ಬೇಡ ಎಂದು ಸಮಾಜದವರು ಮನವಿ ಮಾಡಿಕೊಂಡರು . .
ಇದೇ ವೇಳೆ ಕೆಇಬಿ ಇಲಾಖೆ ಹಳೇ ಕಟ್ಟಡ ತೆರವುಗೊಳಿಸಿರುವುದನ್ನು ವೀಕ್ಷಿಸಿ ನೂತನ ಕಟ್ಟಡದ ನಿರ್ಮಾಣ ಕಾರ್ಯವಾಗಲಿದೆ ಎಂದರು
ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕಾನನಕಟ್ಟೆ ಪ್ರಭಣ್ಣ. ದಲಿತ ಮುಖಂಡರಾದ ಶಂಭುಲಿಂಗಪ್ಪ,ಹಟ್ಟಿ ತಿಪ್ಪೇಸ್ವಾಮಿ,ಪಲ್ಲಾಗಟ್ಟೆ ಶೇಖರಪ್ಪ,ಪಾಪಣ್ಣ,ಸಿ.ತಿಪ್ಪೇಸ್ವಾಮಿ,ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ,ಮಂಜುನಾಥ್,ಹಾಲೇಶ್,ಗ್ಯಾಸ್ ಅಂಗಡಿ ಮಾಲಿಕ ಓಬಣ್ಣ,ಕೇಶವಮೂರ್ತಿ,ಕುಬೇಂದ್ರಪ್ಪ,ಗುತ್ತಿದುರ್ಗ ರುದ್ರೇಶ್,ಕುಮಾರ್,ಬಸವರಾಜ್,ಚಂದ್ರಪ್ಪ,ಸೇರಿದಂತೆ ಇದ್ದರು.