Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಜನವರಿ 24‌

ಸುದ್ದಿ ಜಗಳೂರು

:ವಿಧಾನಸಭಾ ಕ್ಷೇತ್ರವ್ಯಾಪ್ತಿಯ ನನ್ನ ಆಡಳಿತಾವಧಿಯಲ್ಲಿ  ಶಾಂತಿ ಸುವ್ಯವಸ್ಥೆ,ಸಾಮರಸ್ಯತೆ  ಕಾಪಾಡುವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಠಾಣೆ ನವೀಕರಣ  ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಉದ್ದೇಶಿ ಮಾತನಾಡಿದರು‌.

ಸಾರ್ವಜನಿಕರು ಸರ್ಕಾರಿ ಕಟ್ಟಡಗಳನ್ನು  ತಮ್ಮ ಆಸ್ತಿಯಂತೆ ಕಾಪಾಡಬೇಕು.ತಾಲೂಕಿನಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳ ನಿಷ್ಠೆ,ಕರ್ತವ್ಯಪಾಲನೆಯಿಂದ ಶಾಂತಿ ನೆಮ್ಮದಿಯಿಂದ ಸಾರ್ವಜನಿಕರು ಜೀವನ ಸಾಗಿಸುತ್ತಿದ್ದಾರೆ.
ನಾನು ಶಾಸಕನಾಗಿ ಆಯ್ಕೆಯಾಗಿ ಇದೀಗ 8 ತಿಂಗಳು ಕಳೆದಿವೆ.ತಾಲೂಕಿನಲ್ಲಿ ಗಂಭೀರ ಸಮಸ್ಯೆಗಳನ್ನು ಹೊರತುಪಡಿಸಿದರೆ,ಚಿಕ್ಕಪುಟ್ಟ ಪ್ರಕರಣಗಳಿಗೆ ಎಫ್ ಐ ಆರ್ ಗೆ ಅವಕಾಶ ನೀಡದೆ.ರಾಜಿ ಸಂಧಾನ,ಶಾಂತಿ ಸಭೆಯ ಮೂಲಕ ದೂರು ಅರ್ಜಿಗಳ ವಿಲೆವಾರಿ ಮಾಡಲು ಸೂಚಿಸಿರುವೆ.ಕ್ಷೇತ್ರದಲ್ಲಿ ಜಾತ್ಯಾತೀತ,ಧರ್ಮಾತೀತ,ಪಕ್ಷಾತೀತವಾಗಿ ಸಾಮರಸ್ಯ ಜೀವನಕ್ಕೆ ಅವಕಾಶ ಕಲ್ಪಿಸುವೆ ಎಂದು ತಿಳಿಸಿದರು..

ಸಾರ್ವಜನಿಕರು ಸಮಾಜದಲ್ಲಿ ಅಶಾಂತಿ,ಕೃತ್ಯ,ಅಪರಾಧಗಳಿಂದ ದೂರವಿದ್ದು.ಮಹಾತ್ಮ ಗಾಂಧಿಜಿ  ಕಂಡ ರಾಮರಾಜ್ಯದ ಕನಸ್ಸು ನನಸು ಮಾಡಬೇಕು.ಕ್ಷೇತ್ರದ ಅಭಿವೃದ್ದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹25 ಕೋಟಿ ಅನುದಾನ ಬಿಡುಗಡೆಮಾಡಿದ್ದು.ಅದರಲ್ಲಿ ಪೊಲೀಸ್ ಇಲಾಖೆಯ ಹಳೇಯ ವಸತಿಗೃಹಗಳನ್ನು ದುರಸ್ಥಿಗೊಳಿಸುವೆ ಎಂದು ಭರವಸೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ,ಠಾಣಾಧಿಕಾರಿಯ ಇಚ್ಛಾಶಕ್ತಿಯಿಂದ  ಇಂದು ಪೊಲೀಸ್ ಠಾಣೆ ದುರಸ್ಥಿಗೊಂಡು ಸುಂದರ ವಿನ್ಯಾಸದಲ್ಲಿ ಕಂಗೊಳಿಸುತ್ತಿದೆ.ಪೊಲೀಸ್ ಎಂದರೆ ಭಯ ಅಲ್ಲ ಭರವಸೆ ಅನ್ನೋದು ಸಾರ್ವಜನಿಕರು ಮನಗಂಡು ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಜನಸ್ನೇಹಿ ಪೊಲೀಸ್ ಆಗಲು ಸಾಧ್ಯ ಇದಕ್ಕೆ ಜಗಳೂರು ಒಂದು ನಿದರ್ಶನವಾಗಿದೆ ಎಂದು ಪ್ರಶಂಸಿದರು.

ಇಂದು ವಿಶ್ವ ಹೆಣ್ಣುಮಕ್ಕಳ ದಿನಾಚರಣೆಯಾಗಿದ್ದು.ಪೋಷಕರು ಹೆಣ್ಣು ಮತ್ತು ಗಂಡು ಮಕ್ಕಳ  ಮಧ್ಯೆ  ತಾರತಮ್ಯ ತೊರೆದು ಸಮಾನ ಶಿಕ್ಷಣಕ್ಕೆ ಒತ್ತು ಕೊಡಿ.ಹೆಚ್ಚುತ್ತಿರುವ ಫೊಕ್ಸೋ ಪ್ರಕರಣಗಳು.ಬಾಲ್ಯ ವಿವಾಹದಂತ ಅನಿಷ್ಠಗಳಿಗೆ ತಿಲಾಂಜಲಿ ,ಮಹಿಳೆಯರ ಮೇಲಿನ ದೌರ್ಜನ್ಯಗಳು ಕೊನೆಯಾಗಬೇಕು.ಮಹಿಳೆಯರನ್ನು ಗೌರವಿಸಬೇಕು.ಪೊಲೀಸ್ ಇಲಾಖೆಯ ಅಧಿಕಾರಿಗಳು ದೂರುಗಳಿಗೆ ತಕ್ಷಣ ಸ್ಪಂದಿಸದಿದ್ದರೆ.ಲೋಕಸ್ಪಂದನಾ,ಇಆರ್ ಎಸ್ ಎಸ್ ಸಹಾಯವಾಣಿಗೆ ಕರೆ ಮಾಡಿ ಎಂದು ಸಲಹೆ ನೀಡಿದರು.

ಇದೇ ವೇಳೆ ಕಳವಾಗಿದ್ದ ಮೊಬೈಲ್ ಗಳನ್ನು  ವಾರಸುದಾರರಿಗೆ ಮರಳಿ ಒದಗಿಸಿದರು.

ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ  ವಿಜಯಕುಮಾರ್, ಮಂಜುನಾಥ್,

ಡಿ ವೈ .ಎಸ್ ಪಿ ಬಸವರಾಜ್,ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ,ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ರಾವ್,ಪಿಎಸ್ ಐ ಸಾಗರ್,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಬಿ‌.ಮಹೇಶ್ವರಪ್ಪ,ಸಿ.ಲಕ್ಷ್ಮಣ,ಮಂಜುನಾಥ್,ಅನೂಪ್ ರೆಡ್ಡಿ,ಶಂಭುಲಿಂಗಪ್ಪ,ಹಟ್ಟಿ ತಿಪ್ಪೇಸ್ವಾಮಿ,ತಿಮ್ಮಣ್ಣ,ಷಂಷುದ್ದೀನ್,ಸೇರಿದಂತೆ ,ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!