Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಪ್ರೇಬ್ರವರಿ 5

ಸುದ್ದಿ ಜಗಳೂರು.

. ಜಗಳೂರು ಪಟ್ಟಣದ .ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆದಿಜಾಂಬವ ಮಾದಿಗ ಸಮುದಾಯದ ವತಿಯಿಂದ ಸೋಮವಾರ  ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪರವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.  ಕಾರ್ಯಕ್ರಮದಲ್ಲಿ  ಕೋಡಿಹಳ್ಳಿ  ಆದಿಜಾಂಬವ ಮಠದ ಶ್ರೀ ಶ್ರೀ ಷಡಕ್ಷರಿಮುನಿ ದೇಶಿ ಕೇಂದ್ರ ದಿವ್ಯ ಸಾನಿದ್ಯದಲ್ಲಿ ಕ್ಷೇತ್ರದ ಶಾಸಕರು    ಡಾ.ಬಿ ಆರ್  ಅಂಬೇಡ್ಕರ್ ಹಾಗೂ.ಬಾಬು ಜಗಜೀವನ್ ರಾಮ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ  ವೇದಿಕೆ ಕಾರ್ಯಕ್ರಮವನ್ನು ಉದ್ಗಾಟಿಸಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ನಂತರ  ಮಾತನಾಡಿದರು.

ಮುಂಬರುವ ದಿನಮಾನಗಳಲ್ಲಿ ಸಂವಿಧಾನ ರಕ್ಷಣೆ ಮಾಡುವ ಪಕ್ಷಕ್ಕೆ     ನಿಮ್ಮ ಅಮೂಲ್ಯ ಮತಗಳನ್ನು ನೀಡಿದರೆ ದೇಶದ ನಿಜವಾದ  ಸಂವಿಧಾನವೆಂಬ ಮಹಾ ಗ್ರಂಥ   ಉಳಿಸಿಕೊಳ್ಳುವ ಅನಿವಾರ್ಯತೆಯಿದೆ.ಈಗಾಗಲೇ ಮೀಸಲಾತಿ ಕಬಳಿಸುವವರ ಸಂಖ್ಯೆ ಮಿತಿಮೀರಿ ಎಸ್ಸಿ.ಎಸ್ಟಿ. ಹಕ್ಕಿನ ಸೌಲಭ್ಯಗಳನ್ನು ವಂಚಿಸಿ ಮೀಸಲಾತಿಯನ್ನು ತೆಗೆದು ಹಾಕುವ ಒಳ ಸಂಚಿನ ಹುನ್ನಾರವಿದೆ. ಕೊಮುವಾದ ಪಕ್ಷಗಳು ದೇವರ ಹೆಸರಿನಲ್ಲಿ ಮೌಡ್ಯತೆ ಬಿತ್ತಿ ಶೋಷಿತರನ್ನು ಮೊಡರನ್ನಾಗಿಸಿ ಹಿಂದೂಳಿದ ದಲಿತ ಸದಮುದಾಯಗಳ ಹಕ್ಕುಗಳಿಗೆ ಕೊಡಲಿ ಪೆಟ್ಟು ನೀಡಿ  ನಮ್ಮ ಆಹಾರ ಹಕ್ಕಿನ ಮೇಲೆ ದಬ್ಬಾಳಿಕೆ ನಡೆಸುತ್ತಿವೆ .ದೇಶದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ .ಆರ್. ಅಂಬೇಡ್ಕರ್ ರವರ ಸಂವಿಧಾನದ ಮೀಸಲಾತಿಡಿಯಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿದ್ದು ಶೋಷಿತ ಸಮುದಾಯಗಳ ಬಗ್ಗೆ ಆಪಾರ ಕಾಳಜಿಯಿಟ್ಟುಕೊಂಡು ಅತ್ಯಂತ ತಳಸಮುದಾಯಗಳ ಅಭಿವೃದ್ಧಿಗೆ ಒತ್ತು ನೀಡುವೆ. ಅಂಬೇಡ್ಕರ್ ರವರ ತತ್ವಸಿದ್ದಾಂತಗಳುನ್ನು ಸಂಘಟಕರು ಮತ್ತು ಸಮಾಜದವರು ಮೈಗೂಡಿಸಿಕೊಂಡು ಎಲ್ಲಾ ಸಮುದಾಯಗಳ ಪ್ರಿತಿ ವಿಶ್ವಾಸ ಗಳಿಸುವ ಮೂಲಕ ರಾಜಕೀಯ ನಾಯಕತ್ವ ಬೆಳೆಸಿಕೊಳ್ಳುವಂತೆ ಕಿವಿ ಮಾತು ಹೇಳಿದರು .

ರಾಜ್ಯ ಸರ್ಕಾರದಿಂದ ಬಹುಪಾಲು ತೆರಿಗೆ ಹಣ ಕೇಂದ್ರಕ್ಕೆ ನೀಡುತ್ತಿದ್ದು ಆದರೆ ನಮಗೆ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ  ಅನುದಾನ ನೀಡುವಲ್ಲಿ ಮಲತಾಯಿಧೋರಣೆ ಅನುಸರಿಸುತ್ತಿದೆ.ಆದ್ದರಿಂದ  ಕ್ಷೇತ್ರದಲ್ಲಿ ಮಾದಿಗ ಸಮುದಾಯ ಬಹುಸಂಖ್ಯೆಯಲ್ಲಿದ್ದು ಶೊಷಣೆ ಮಾಡುವಂತ ಪಕ್ಷಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.ನಿಮ್ಮ ಮತ್ತು ಕ್ಷೇತ್ರದ ಜನರ ಸಹಕಾರದೊಂದಿಗೆ ಕ್ಷೇತ್ರದಲ್ಲಿ ರಾಜಕೀಯವಾಗಿ.ಅರ್ಥಿಕವಾಗಿ .ಧಾರ್ಮಿಕವಾಗಿ ಸಾಮಾಜಿಕವಾಗಿ ಬದಲಾವಣೆ ತರುವುದೇ ನನ್ನ ಉದ್ದೇಶ ಎಂದರು.

ನಾನು ತುಂಬಾ ಬಡತನ ಬೇಗೆಯಲ್ಲಿ ಬೆಳೆದು ನನ್ನ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೋಡಿಸುವುದರ ಮೂಲಕ  ಉನ್ನತ ಸ್ಥಾನ ಗಳಿಸಿಕೊಂಡಿದ್ದೆನೆ ತಾವುಗಳು ಸಹ ತಮ್ಮ ಮಕ್ಕಳಿಗೆ ಶಿಕ್ಷಣ ಕೋಡಿಸಿ ತಮ್ಮ ಕುಟುಂಬ.ಮತ್ತು ಸಮಾಜದ ಬದಲಾವಣೆಗೆ ಶ್ರಮಿಸುವಂತೆ ಸಲಹೇ ನೀಡಿದರು.

ಶಾಸಕರಿಂದ ವಿನೂತ  ಅಂಬೇಡ್ಕರ್ ನಿಧಿ   ದೇಣಿಗೆ ಪ್ರಾರಂಭ

ಇದೆ ಪ್ರೇಬ್ರವರಿ  ತಿಂಗಳಲ್ಲಿ ನಡೆಯುವ ಶಿವರಾತ್ರಿ ದಿನದಂದು ಪಟ್ಟಣದ ಅಂಬೇಡ್ಕರ್  ವೃತ್ತದಲ್ಲಿ ಅಂಬೇಡ್ಕರ್  ಜಾಗರಣೆ ಮಾಡುವ ಮೂಲಕ ಶೋಷಿತ ಹಿಂದೂಳಿದ ಸಮುದಾಯಗಳ ಜಾಗೃತಿಯಾಗಲೂ ವಿನೂತನ ಕಾರ್ಯಕ್ರಮ ಚಾಲನೆ  ಮಾಡಲಾಗುವುದು.ಹಾಗೂ ಅಂಬೇಡ್ಕರ್ ನಿಧಿ ಸಂಗ್ರಹಣೆ ಬಯಿಸಿದ್ದೆನೆ ಆ ದಿನ ತಾವುಗಳ ದುಚ್ಚಟ ಮುಕ್ತರಾಗಿ ಭಜನೆ ಮಾಡಿ ಅಂಬೇಡ್ಕರ್ ಗೀತೆಗಳ ಮೂಲಕ ಜಾಗರಣೆ ಮಾಡಿ ರಾಜ್ಯಕ್ಕೆ ಒಂದು ವಿನೂತ ಸಂದೇಶ ರವಾನೆಯಾಗಲಿದೆ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲು ವ್ಯವಸ್ಥೆತವಾದ ಗೇಟ್  ಅಭಿವೃದ್ಧಿಗೆ ಒತ್ತು ನೀಡಲಾಗುವುದು‌  .ತಮ್ಮ ಸಮುದಾಯದ ಮಠಗಳುನ್ನು ಸಮಾಜದವರು ತಿರುಗಿ ನೋಡಿ ಬೆಳೆಸಬೇಕು .ಇದೀಗ ಈ ದಿನ ನಾನು ಅಂಬೇಡ್ಕರ್ ನಿಧಿ ಪ್ರಾರಂಭ ಮಾಡಲು ನಾನು ನನ್ನ ಕೈಯಿಂದ ಐದು ಸಾವಿರ ಹಣ ನೀಡುವೆ ತಾವುಗಳು ಅನ್ಯ ಸಮುದಾಯಗಳಂತೆ ಸಂಸ್ಕಾರ ಕಲಿತು ಉತ್ತಮ ಕಾರ್ಯಗಳಿಗೆ ನಿಧಿಯನ್ನ ಬಳಸಿಕೊಳ್ಳಿ ಎಂದರು. 

ಕೋಡಿಹಳ್ಳಿ ಆದಿಜಾಂಬವ ಮಠದ ಶ್ರೀ ಷಡಕ್ಷರಿಮುನಿ ದೇಶಿಕೆಂದ್ರ ಸ್ವಾಮೀಜಿ ಗಳು ಅಶಿರ್ವಾಚನ ನೀಡಿದರು  ಮಾದಿಗ ಸಮುದಾಯದ ಬಂಧುಗಳು ಸಮಾಜದಲ್ಲಿ ಬದಲಾವಣೆಯಾಗಲು ಸಂಘಟಿತರಾಗಿ ಶೈಕ್ಷಣಿಕವಾಗಿ. ಆರ್ಥಿಕವಾಗಿ ಸಾಮಾಜಿಕವಾಗಿ .   ರಾಜಕೀಯ ಅಸ್ತ್ರಗಳನ್ನು ಹಿಡಿಯಲು ಅನ್ಯ ಸಮಾಜದವರೊಂದಿಗೆ ಪ್ರಿತಿ ವಿಶ್ವಾಸ ಗಳಿಸಿ‌ಕೊಂಡು ಸಹೋದರರಂತೆ ಸಹಬಾಳ್ವೆ ನಡೆಸಿ. ಕ್ಷೇತ್ರದ ಸಜ್ಜನ ರಾಜಕಾರಣಿ ಶಾಸಕ.ಬಿ ದೇವೇಂದ್ರಪ್ಪ ರವರ ಸಹಕಾರದೊಂದಿಗೆ   ರಾಜಕೀಯ ಸ್ಥಾನಮಾನಗಳನ್ನು ಪಡೆಯಬೇಕು. ಕೆಲ ಸಂಘಟಕರಿಂದ  ಜಾತಿನಿಂದನೆ ಪ್ರಕರಣ ದಾಖಲಿಸಿಕೊಂಡು ಸಮಾಜವು ಈಗಾಗಲೇ ಅದಪಥನವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು. ಆದ್ದರಿಂದ ನಿಮ್ಮ ಬಗ್ಗೆ ಕಾಳಜಿಯಿರುವಂತ ನಾಯಕನನ್ನು ಒಪ್ಪಿಕೊಂಡು ಅಪ್ಪಿಕೊಂಡು ಸಂವಿಧಾನಿಕ ಹಕ್ಕು ಸೌಲಭ್ಯಗಳನ್ನು ಪಡೆದು ಸಮಾಜದ ಏಳ್ಗಿಗೆ ಶ್ರಮಿಸುವಂತೆ ತಿಳಿಸಿದರು. ಸಮಾಜದ ಮಠ ಅಭಿವೃದ್ಧಿಯಾದರೆ ಸಮಾಜ  ಅಭಿವೃದ್ಧಿಯಾಗುವುದು ಮುಖಂಡರು ನಮ್ಮ ಮೂಲ ಮಠದ ಅಭಿವೃದ್ಧಿ ಕಡೆ ಗಮನಹರಿಸಿ ಎಂದರು. .

ಸಮಾಜದ ಮುಖಂಡ ಜಿ ಎಚ್ ಶಂಭುಲಿಂಗಪ್ಪ  ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಮಾದಿಗ ಸಮಾಜ ಇನ್ನು ಕೂಡ ತಾಲ್ಲೂಕಿನಲ್ಲಿ ಜಲ್ವಂತ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದೆ.ಸರ್ಕಾರಿ ಸೌಲಭ್ಯಗಳು ಕೆಲವರ ಪಾಲಾಗುತ್ತಿವೆ.ಬಡವರಿಗೆ ಸಿಗುವ ಸೌಲಭ್ಯಗಳು ಸಿಗುತ್ತಿಲ್ಲ  ಜಗಳೂರು ಕ್ಷೇತ್ರದ ಶಾಸಕರು ಅಂತಕರಣದ ಮುತ್ಸದಿ ಶಾಸಕರಿದ್ದು   ನಮ್ಮ ಸಮಾಜದ ಅಭಿವೃದ್ಧಿಗೆ  ಗಮನಹರಿಸಬೇಕು .ಕ್ಷೇತ್ರದಲ್ಲಿ ಮಾದಿಗ ಸಮುದಾಯದ ಬಹುಪಾಲು ನಾಯಕರು ಮಾಜಿ ಸಚಿವ ದಿವಂಗತ ಆಶ್ವತ ರೆಡ್ಡಿ ಕಾಲಾವಧಿಯಿಂದಲೂ   ಕಾಂಗ್ರೆಸ್ ಪಕ್ಷವನ್ನೆ ಬೆಂಬಲಿಸಿಕೊಂಡು ಪ್ರಮಾಣಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು ಕೂಡ  ರಾಜಕೀಯ ಸ್ಥಾನಮಾನಗಳು ನಮಗೆ ದಕ್ಕಿಲ್ಲ.ಬರುವ  ಜಿಪಂ.,ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ  ಟಿಕೆಟ್ ನಮ್ಮ ಸಮಾಜದವರಿಗೆ  ನೀಡುವಂತೆ ಮನವಿ ಮಾಡಿಕೊಂಡರು. 

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾದ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ ದೇಶದಲ್ಲಿ ಸಂವಿಧಾನ ಆಶಯದ ಹೆಸರಿನಲ್ಲಿ  ಅಧಿಕಾರಕ್ಕೆ ಬಂದಿರುವ  ಕೇಂದ್ರ ಸರ್ಕಾರ ಕೋಮುಗಲಬೆ ಸೃಷ್ಠಿಸಿ ದೇವಾ ಮಂದಿರ ಸ್ಥಾಪಿಸುವ ನೆಪದಲ್ಲಿ   ಸಮಾಜವನ್ನ ದಿಕ್ಕುತಪ್ಪಿಸಿ ಮೌಡ್ಯತೆ ಕಂದಚಾರಗಳ ಬಿತ್ತಲು ಹೊರಟಿದೆ  .ನಮ್ಮ ಕಾಂಗ್ರೆಸ್  ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಆ ನಿಟ್ಟಿನಲ್ಲಿ ನಾವು ಕೂಡ ಕ್ಷೇತ್ರದಲ್ಲಿ ಶಾಸಕ ರೊಂದಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸಿ  ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಬದ್ದವಾಗಿದ್ದೆವೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಷಂಷೀರ್ ಆಹಮದ್ . ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯ ಪ್ರಧಾನಕಾರ್ಯಧರ್ಶಿ ಎಂ.ಡಿ ಕೀರ್ತಿಕುಮಾರ್.ಕೆಪಿಸಿಸಿ ಸದಸ್ಯರಾದ ಕಲ್ಲೇಶ್ ರಾಜ್ ಪಟೇಲ್.ದಲಿತ ಮುಖಂಡ ಹನುಮಂತಪುರ ಶಿವಕುಮಾರ್.ಕಾಂಗ್ರೆಸ್ ಮುಖಂಡ ಪಲ್ಲಾಗಟ್ಟೆ ಶೇಖರಪ್ಪ. .ಮಾದಿಗ ಸಮಾಜದ ಮುಖಂಡ ಹಟ್ಟಿ ತಿಪ್ಪೇಸ್ವಾಮಿ.ಪಪಂ ಸದಸ್ಯ ದೇವರಾಜ್. ಸಹೋದರ ಸಮಾಜದ ಮುಖಂಡರಾದ ಬಂಗಾರಪ್ಪ.ಪ್ರಕಾಶರೆಡ್ಡಿ.ಕಾಂಗ್ರೆಸ್ ಪಕ್ಷದ ಮುಖಂಡರಾದ ತಿಪ್ಪೇಸ್ವಾಮಿ. ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್..ಕಾಂಗ್ರೆಸ್ ಪಕ್ಷದ ಯುವ ಮುಖಂಡ ಗುತ್ತಿದುರ್ಗ ರುದ್ರೇಶ್.ಪಪಂ.ಸದಸ್ಯೆ ನಿರ್ಮಲ. ದಸಂಸ ಮಾಜಿ ಸಂಚಾಲಕ  ಸಿದ್ದಮ್ಮನಹಳ್ಳಿ ವೆಂಕಟೇಶ. .ಪಪಂ ಮಾಜಿ ಅಧ್ಯಕ್ಷ ಮಂಜಣ್ಣ . ಕಾಂಗ್ರೆಸ್ ಎಸ್ಸಿ ಘಟಕದ ಅದ್ಯಕ್ಷ ಮಾಳಮ್ಮನಹಳ್ಳಿ ವೆಂಕಟೇಶ. ಮುಖಂಡ ಗ್ಯಾಸ್ ಒಬಪ್ಪ. .ದೋಣಿಹಳ್ಳಿ ಗ್ರಾಪಂ ಅದ್ಯಕ್ಷ ತಿಪ್ಪೇಸ್ವಾಮಿ.  ಅಂಬೇಡ್ಕರ್  ಪುತ್ಥಳಿ ಸಮಿತಿ ಅಧ್ಯಕ್ಷ ಪೂಜಾರ್ ಸಿದ್ದಪ್ಪ. ಕಾಂಗ್ರೆಸ್ ಮುಖಂಡ ಚಿಕ್ಕಮಲ್ಲನಹೊಳೆ  ಮಾರುತಿ.ಕ್ಯಾಂಪ್ ಶಿವಣ್ಣ.ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಮುಖಂಡ ಮಹಮದ್ ಅಲಿ.ಡಿ ಎಸ್ ಎಸ್ ಸಂಚಾಲಕ ಕುಬೇರಪ್ಪ. ಸತೀಶ್ ಸೇರಿದಂತೆ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!