ದಾವಣಗೆರೆ: ಗ್ರಾಪಂ ಸದಸ್ಯನ ಜನಸೇವೆ ಪರಿಗಣಿಸಿ ಕನ್ಯೆ ಹುಡುಕಿ ಮದುವೆ ಮಾಡಿದ ಗ್ರಾಮಸ್ಥರ ಕಾರ್ಯ ಶ್ಲಾಘನೀಯ ದಲಿತ ಮುಖಂಡ ಆಲೂರು ನಿಂಗರಾಜ್
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಪ್ರೆಬ್ರವರಿ 3
ದಾವಣಗೆರೆ
ಗ್ರಾಮ ಪಂಚಾಯ್ತಿ ಸದಸ್ಯನ ಜನಸೇವೆಯನ್ನು ಪರಿಗಣಿಸಿ ಗ್ರಾಮಸ್ಥರು ಕನ್ಯೆ ಹುಡುಕಿ ವಿವಾಹ ಮಾಡಿದ ಅತ್ಯಂತ ಅಚ್ಚರಿಕರ ಘಟನೆಗೆ ಸಾಕ್ಷಿಯಾದ ಗ್ರಾಮಸ್ಥರ ಕಾರ್ಯ ಶ್ಲಾಘನೀಯ
ದಾವಣಗೆರೆ : ಅವರೊಬ್ಬ ಜನ ಸೇವಕ. ಜನರ ಸೇವೆ ಮಾಡಲು ಗ್ರಾ ಪಂ ಸದಸ್ಯನಾಗಿ ಆಯ್ಕೆಯಾದ್ರು. ತನ್ನ ಕ್ಷೇತ್ರದ ಜನರಿಗೆ ಚಿಕ್ಕ ಸಮಸ್ಯೆ ಎದುರಾದರೂ ತಡಮಾಡದೇ ಧಾವಿಸಿ ಸಮಸ್ಯೆ ಬಗೆಹರಿಸುತ್ತಾ ಗ್ರಾಮದ ಪ್ರತಿಯೊಬ್ಬ ಜನರ ಒತ್ತಾಸೆಗೆ ಮನಮಿಡಿಯುವ ಕಣ್ಮಣಿ ಆಗಿರುವ ಗ್ರಾಪಂ ಸದಸ್ಯ ಆ ಗ್ರಾಮದಲ್ಲಿ ಕಷ್ಟ ಸುಖದಲ್ಲಿ ಅಲ್ಲಿನ ಜನರ ನೋವಿಗೆ ಸದಾ ಧ್ವನಿಯಾಗಿ ನಿಲ್ಲುತ್ತಾ ಸದ್ದಿಲ್ಲದೆ ತಮ್ಮ ಕೈಲಾದಷ್ಟು ಸೇವೆ ಸಲ್ಲಿಸುತ್ತಿರುವ ಜನಸೇವಕ .ಸದಸ್ಯನ ಸ್ಪಂದನೆಯಿಂದಲೆ ಜನರಿಗೆ ಹತ್ತಿರವಾಗಿದ್ದ ಗ್ರಾಮ ಪಂಚಾಯ್ತಿ ಸದಸ್ಯನಿಗೆ ಇಡೀ ಗ್ರಾಮಸ್ಥರು ಸೇರಿ ಕನ್ಯೆ ನೋಡಿ, ಮದುವೆ ಮಾಡಿಸಿ ಹರಸಿ ಹಾರೈಸಿರುವ ಗ್ರಾಮಸ್ಥರು ಕಂಕಣಬಾಗ್ಯಕ್ಕೆ ಸಾಕ್ಷಿಯಾಗಿರುವುದು ಸಮಾಜದಲ್ಲಿ ಜನರ ಮತ್ತು ಸದಸ್ಯನ ನಡುವೆ ಪ್ರಿತಿ ವಿಶ್ವಾಸಗಳಿಗೆ ಬೆಲೆ ಕಟ್ಟಲು ಸಾದ್ಯವಿಲ್ಲ. ಏಕೆಂದರೆ ಪ್ರಸ್ತುತದಲ್ಲಿ ಒಡಹುಟ್ಟಿದವರೆ ಕೆಲ ಸಂದರ್ಭಗಳಲ್ಲಿ ಇಂತ ಘನಕಾರ್ಯ ಮಾಡುವುದಿಲ್ಲ ಆದರೆ ಇದೀಗ ಗ್ರಾಮವೆ ಸದಸ್ಯನ ಕುಟುಂಬವಿದ್ದಂತೆ ತನ್ನ ನಡೆ ನುಡಿ ಕರ್ತವ್ಯದ ಮೂಲಕ ಜನರ ಮನಸ್ಸು ಗೆದ್ದ ಸೇವಕ ಗ್ರಾಪಂ ಸದಸ್ಯನ ಕಾರ್ಯಕ್ಕೂ ಗ್ರಾಮಸ್ಥರ ಕಲ್ಯಾಣ ಬಾಗ್ಯಕ್ಕೂ ಒಂದು ಸಲಾಮ್ ಗುಡಾಳ್ ಗ್ರಾಮದಲ್ಲಿರುವ ವಾತಾವರಣ ರಾಜ್ಯದಲ್ಲೂ ಪಸರಿಸಲಿ: ಜಾತಿ ಭೇದ ಇಲ್ಲದೇ ಒಬ್ಬ ದಲಿತ ಯುವಕನ ಮದುವೆ ಮಾಡಿದ್ದಾರೆ. ಜಾತಿ ಭೇದ ಎಂಬುದು ತೊಲಗಲಿ. ಈ ರೀತಿಯ ವಾತಾವರಣ ರಾಜ್ಯದಲ್ಲಿ ಪಸರಿಸಲಿ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ದಲಿತ ಮುಖಂಡ ಆಲೂರು ನಿಂಗರಾಜ್
ದಾವಣಗೆರೆ ತಾಲೂಕಿನ ಗುಡಾಳ್ ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಒಬ್ಬ ದಲಿತ ಗ್ರಾ ಪಂ ಸದಸ್ಯನಿಗೆ ಜಾತಿ ವೈಮನಸ್ಸು ಬದಿಗೊತ್ತಿ ವಿಶೇಷವಾದ ಮದುವೆ ಮಾಡಿಸಿದ್ದಾರೆ. ಗುಡಾಳ್ ಗ್ರಾಮ ಪಂಚಾಯ್ತಿ ಸದಸ್ಯನಾಗಿರುವ ಅಂಜಿನಪ್ಪ ಗ್ರಾಮದ ಅದೆಷ್ಟೋ ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದಾರೆ. ಅಲ್ಲದೇ ಈ ದಲಿತ ಗ್ರಾಪಂ ಸದಸ್ಯನ ಕಂಡ್ರೆ ಗುಡಾಳ್ ಗ್ರಾಮದಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ಆ ಊರಿನ ಜನರಿಗೆ ಆರೋಗ್ಯ ಸೇರಿದಂತೆ ಏನೇ ಸಮಸ್ಯೆ ಎದುರಾದ್ರೂ ಅಲ್ಲಿ 108 ಆಂಬ್ಯುಲೆನ್ಸ್ ರೂಪದಲ್ಲಿ ತನ್ನ ಬಳಿ ಇರುವ ಓಮಿನಿಯಲ್ಲಿ ತುರ್ತು ಸೇವೆ ನೀಡುತ್ತಿದ್ದಾರೆ.
ಇದರಿಂದ ಗ್ರಾಮದಲ್ಲಿ ಎಲ್ಲರಿಗೂ ಅಂಜಿನಪ್ಪ ಎಂದರೆ ಬಲು ಪ್ರೀತಿ. ಆ ಪ್ರೀತಿ ಮತವಾಗಿ ಸತತ ಮೂರನೇ ಬಾರಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದಾರೆ. ಗ್ರಾಮ ಪಂಚಾಯ್ತಿ ಸದಸ್ಯನಾಗಿರುವ ಅಂಜಿನಪ್ಪರ ಜನ ಸೇವೆ ಪರಿಗಣಿಸಿದ ಗ್ರಾಮಸ್ಥರು ಕನ್ಯೆ ಹುಡುಕಿ ಬದುಕು ಕಟ್ಟಿಕೊಟ್ಟಿದ್ದಾರೆ. 45 ವರ್ಷ ವಯಸ್ಸಿನ ಅಂಜಿನಪ್ಪ ತನ್ನ ತಂಗಿಯರಿಗೆ ಒಂದು ನೆಲೆ ಒದಗಿಸಬೇಕೆಂದು ಮದುವೆಯಾಗದೇ ವೈವಾಹಿಕ ಜೀವನಕ್ಕೆ ಅಲ್ಪವಿರಾಮ ನೀಡಿದ್ದರು. ಗ್ರಾಮಸ್ಥರಿಗೆ ಹತ್ತಿರವಾಗಿದ್ದ ಅಂಜಿನಪ್ಪ ಊರಿನ ಗ್ರಾಮಸ್ಥರ ಬಲವಂತ ಮತ್ತು ಅವರ ಮಾತಿಗೆ ಬೆಲೆ ನೀಡಿ ಹರಪನಹಳ್ಳಿ ತಾಲೂಕಿನ ಪಲ್ಲವಿ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ದಂಪತಿಗಳಿಗೆ ಇಡೀ ಊರಿನ ಜನ ಶುಭಾಶಯ ಕೋರಿದ್ದಾರೆ.
ಮದುವೆಯ ಎಲ್ಲ ಖರ್ಚನ್ನು ನೋಡಿಕೊಂಡ ಗ್ರಾಮಸ್ಥರು : ಈ ವೇಳೆ ಪ್ರತಿಕ್ರಿಯಿಸಿದ ಗ್ರಾಮಸ್ಥರಾದ ಪ್ರಕಾಶ್ ಅವರು, ಅಂಜಿನಪ್ಪ ಅವರು ಗುಡಾಳ್ ಗ್ರಾಮ ಪಂಚಾಯತ್ಗೆ ಮೂರು ಬಾರಿ ಆಯ್ಕೆಯಾಗಿ ಜನಮೆಚ್ಚುವ ಕೆಲಸ ಮಾಡಿದ್ದಾರೆ. ಕೆಳವರ್ಗದಿಂದ ಬಂದ ವ್ಯಕ್ತಿ ಅಂಜಿನಪ್ಪ ಅವರ ಮದುವೆ ಸಮಾರಂಭವನ್ನು ಜಾತಿಭೇದ ಇಲ್ಲದೇ ಗ್ರಾಮದ ಎಲ್ಲರೂ ನಿಂತು ಮಾಡ್ತಿದ್ದೇವೆ. ಎಲ್ಲಾ ವರ್ಗದವರು ಸೇರಿ ಈ ಪುಣ್ಯಕಾರ್ಯ ಮಾಡ್ತಿದ್ದೇವೆ. ಮದುವೆಯಲ್ಲಿ ಹಣವನ್ನು ಹೊರತು ಪಡಿಸಿ ನೀರಿನ ವ್ಯವಸ್ಥೆ, ಶಾಮಿಯಾನ, ಊಟದ ವ್ಯವಸ್ಥೆ, ಚೇರ್ ವ್ಯವಸ್ಥೆ ಎಲ್ಲ ಖರ್ಚು ಗ್ರಾಮಸ್ಥರೇ ನೋಡಿಕೊಂಡಿದ್ದಾರೆ ಎಂದಿದ್ದಾರೆ.
ಎಲ್ಲರೂ ಐಕ್ಯತೆಯಿಂದ ಈ ಕೆಲಸ ಮಾಡಿದ್ದೇವೆ. ಅವರು ಗ್ರಾಪಂ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ದೇವಾಲಯ, ಆಶ್ರಯ ಮನೆ ಬಡವರಿಗೆ ಕೊಡಿಸಿದ್ದು, ಜಮೀನು ಮಂಜೂರು ಮಾಡುವುದು, ಹೊಲ ಇಲ್ಲದವರಿಗೆ ಹೊಲ ಕೊಡಿಸುವ ಸಾಮಾಜಿಕ ಬದಲಾವಣೆ ಮಾಡಿದ್ದಾರೆ. ಎರಡು ಬಾರಿ ಅಧ್ಯಕ್ಷರಾಗಿ ಉನ್ನತ ಕೆಲಸ ಮಾಡಿದ್ದಾರೆಂದು ಇಲ್ಲಿನ ಜನರು ತಿಳಿಸಿದ್ದಾರೆ.
.