Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಜನವರಿ 9

“ಅತ್ತೆ – ಸೊಸೆ ತಾಯಿ _________________________

ಮಗಳಂತೆ ಇರುವ ಮನೆಯೆ

_________________________

 ಸ್ವರ್ಗ “

_______

ವಿಜಯಪುರ — ಮಹಿಳೆಯರಿಗೆ ವರದಕ್ಷಿಣೆ.ಅತಿಯಾದ ದುಡಿಮೆ.ಕಿರುಕುಳ.ಮಾನಸಿಕ ಹಿಂಸೆ. ಕೌಟುಂಬಿಕ ದೌರ್ಜನ್ಯ ಹೆಚ್ಚಾಗುತ್ತಿದ್ದು.ಮನೆಯಲ್ಲಿ ಆತ್ತೆ – ಸೊಸೆ ಪರಸ್ಪರ ಅರ್ಥ ಮಾಡಿಕೊಂಡು ತಾಯಿ – ಮಗಳಂತೆ ಜೀವನ ಸಾಗಿಸಿದರೆ ಆ ಮನೆ ಸ್ವರ್ಗದಂತಾಗುತ್ತದೆ ಎಂದು ನ್ಯಾಯವಾದಿ ದಾನೇಶ ಅವಟಿ ನುಡಿದರು.

ನಗರದ ರೈಲು ನಿಲ್ದಾಣ ಹಿಂದೆ ಭಾರತ ನಗರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸ್ಲಂ ಅಭಿವೃದ್ದಿ ಸಮಿತಿ ಮಹಿಳಾ ಒಕ್ಕೂಟದ ಸದಸ್ಯರಿಗೆ ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು.

 ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅರಿವು ಮೂಡಿಸಿದರು  ಮಹಿಳೆ ಎಲ್ಲಿ ಸಂತೋಷದಿಂದ ಇರುತ್ತಾಳೆ ಆ ಮನೆಯಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಮಾತು ಹಿಂದಿನ ಕಾಲದಿಂದಲೂ ಜನಜನಿತವಾಗಿದೆ. ಅತಿ ಕಠಿಣ ಕಾನೂನು ಕ್ರಮವಿದ್ದರೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹೆಚ್ಚಾಗುತ್ತಿದ್ದು.ಜನತೆಗೆ ಕಾನೂನಿನ ಭಯ ಇಲ್ಲವಾಗಿದೆ. ನಿತ್ಯ ಮಹಿಳೆಯರ ಹಕ್ಕುಗಳ ಉಲ್ಲಂಘನೆ ಎಲ್ಲೆಂದರಲ್ಲಿ ನಡೆದಿದೆ.ಕಾರಣ ಮಹಿಳೆಯರು ಸಂಘಟಿತರಾಗಿ ಕಾನೂನುಗಳನ್ನು ಅರಿತುಕೊಂಡು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಉದ್ದಿಮೆದಾರ ಪಂಡಿತ ಖಂಡಾರೆ ಮಹಿಳೆಯರು ತಾವು ಅಭಲರು ಶಕ್ತಿಹೀನರು ಎಂಬ ಕೀಳರಿಮೆ ಬಿಟ್ಟು ಹೊರ ಬಂದು.ತಮ್ಮ ಹಕ್ಕುಗಳನ್ನು ಅರಿತುಕೊಳ್ಳಬೇಕು.ಶಿಕ್ಷಣ ವಂತರಾಗಬೇಕು. ಅವರ ಹಕ್ಕುಗಳ ಉಲ್ಲಂಘನೆ ಒಂದೇ ಕಡೆ ಒಂದೇ ರೀತಿ ಆಗುತ್ತದೆ ಎಂದು ಭಾವಿಸಲಾಗದು. ಅವರಿಗೆ ಗರ್ಭದಲ್ಲಿ ಇರುವಾಗಿನಿಂದ.ಗೋರಿಗೆ ಹೋಗುವವರೆಗೆ ನಡದೆ ಇರುತ್ತದೆ. ಮನೆ ಒಳಗೆ ಹೊರಗೆ. ಕೆಲಸದ ಸ್ಥಳದಲ್ಲಿ ಹೀಗೆ ಎಲ್ಲೆಂದರಲ್ಲಿ ಹಲವು ಹತ್ತು ರೀತಿ ನಡೆಯುತ್ತಿದೆ. ಕಾರಣ ಮಹಿಳೆಯರು ಶಿಕ್ಷಣ ಸಂಘಟನೆ ಹೋರಾಟಕ್ಕೆ ಸಿದ್ಧರಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಖತಿಜಾ ಹೆಬ್ಬಾಳ.ಫಾತೀಮಾ ಶೇಖ.ಮುಂತಾದವರಿದ್ದರು.

ರಾಮಕೃಷ್ಣ ಘೋಡಕೆ ಪ್ರಾರ್ಥಿಸಿದರು.ನಂದಿನಿ ಆಲಮೇಲಕರ  ಸಂವಿಧಾನದ ಪೂರ್ವ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಿದರು.

ಸಿ ಎನ್ ಎಫ್ ಈ ಸಂಸ್ಥೆಯ ಕಾಮಿನಿ ಕಸಬೇ ಕಾರ್ಯಕ್ರಮ ಆಯೋಜಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೀನಾಕ್ಷಿ ಕಾಲೆಭಾಗ ನಿರೂಪಿಸಿದರು. ಆರ್ಯನ್ ಆಲಮೆಲಕರ ವಂದಿಸಿದರು.

ಕಾಮಿನಿ ಕಸಬೇ

ಸಿ ಎನ್ ಎಫ ಈ ಸಂಸ್ತೆಯ ಸಂಯೋಜಕರು.

ಮೋ 9535390588

ವಿಶೇಷ ಸೂಚನೆ https://shukradeshenews.com/?p=3595.  ಈ ನಮ್ಮ ಶುಕ್ರದೆಸೆನ್ಯೂಸ್ ಪಾಕ್ಷಿಕ ಪತ್ರಿಕೆ ಹಾಗೂ ಶುಕ್ರದೆಸೆನ್ಯೂಸ್ ಯುಟುಬ್ ಚಾನಲ್ ವೆಬ್ ಮೀಡಿಯಾ ಮೂರು ಆಯಮಗಳಲ್ಲಿ ಮೂಡಿ ಬರುತ್ತಿರುವ ನಮ್ಮ ಮೀಡಿಯಾದಲ್ಲಿ  ಕೆಲಸ ಮಾಡಲು ರಾಜ್ಯದ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ವರದಿಗಾರರು ಬೇಕಾಗಿದ್ದಾರೆ, ಆಸಕ್ತಿಯಿದ್ದವರು ಸಂಪರ್ಕಿಸಿ 9902997378 ಶುಕ್ರದೆಸೆನ್ಯೂಸ್   ಸಂಪಾದಕರು###|** 👆👆👆👆

Leave a Reply

Your email address will not be published. Required fields are marked *

You missed

error: Content is protected !!