Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಜನವರಿ 9

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ಬಿದರಕೆರೆ ಗುರುಸಿದ್ದೇಶ್ವರ್ ಪ್ರೌಢಶಾಲಾ ಅಂಗಳದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು

ವಿಧ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಭಾಗವಹಿಸಿದ ಪ್ರಥಮ ವಿಜೇತರಿಗೆ ಪ್ರಶಸ್ತಿ ಸೂಕ್ತಬಹುಮಾನ ವಿತರಣೆ

12 ನೇ ಶತಮಾನದ ವಚನ ಸಾಹಿತ್ಯದ  ಮೌಲ್ಯ ಸರ್ವಕಾಲಕ್ಕು ಶ್ರೇಷ್ಠವಾಗಿದೆ‌ ಪ್ರಸ್ತುತದಲ್ಲಿ ಆಳವಡಿಕೆ ಮಾಡಿಕೊಳ್ಳುವುದು ಅತ್ಯವಶ್ಯಕ ಎಂದು ಹಿರಿಯ ಸಾಹಿತಿ‌ ಎಂ ಎನ್ ರವಿಕುಮಾರ್ ಹೇಳಿದರು.

ಅಂದಿನ ಕಾಲದ ಸಾಹಿತ್ಯಕ್ಕೂ ಆಧುನಿಕ ಕಾಲದ ಸಾಹಿತ್ಯದ ಪ್ರಕಾರಗಳನ್ನ ನಾವು ಅತ್ಮವಲೋಕನ ಮಾಡಿಕೊಳ್ಳುವ ಅನಿವಾರ್ಯತೆಯಿದೆ. ಈಗಿನ ಸಾಹಿತ್ಯ ಕೆಲ ಸಿನಿಮಾ ಹಾಡುಗಳು ಯುವ ಸಮಾಜವನ್ನ  ದಿಕ್ಕು ತಪ್ಪಿಸುತ್ತಿವೆ. ಎಂದು ಕಳವಳ ವ್ಯಕ್ತಪಡಿಸಿದ್ದರು.

 12 ನೇ ಶತಮಾನದ ಸಮಗ್ರ ವಚನ  ಸಾಹಿತ್ಯ ಕನ್ನಡದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದು. ೧೧ನೇ ಶತಮಾನದಿಂದ ೧೨ನೇ ಶತಮಾನದವರೆಗೂ ಕ್ರಾಂತಿಕಾರಿ ಬಸವಣ್ಣನವರು ಜನಸಾಮಾನ್ಯರ ಆಂದೋಲನದ ಭಾಗವಾಗಿ ಬೆಳೆದು ಬಂದ ಮಹತ್ವದ ವಿಶಿಷ್ಟ ಸಾಹಿತ್ಯ .ಅಂದಿನ ಸಾಹಿತ್ಯ   ಕಾವ್ಯ. ಹಾಡಿದರೆ ಹಾಡಾಗುವುದು, ಓದಿದರೆ ಗದ್ಯವಾಗುವ ಕನ್ನಡದ ವಿಶೇಷ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅದ್ಯಕ್ಷೆ ಸುಜಾತಮ್ಮ ಮಾತನಾಡಿ ಬಿದರಕೆರೆ ಶಾಲಾಂಗಳದಲ್ಲಿ ದತ್ತಿ ಉಪಾನ್ಯಾಸ ಏರ್ಪಡಿಸಲು ಇದೇ ಊರಿನ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರ ತಂದೆ ತಾಯಿಯವರ ಸವಿ ನೆನಪಿಗಾಗಿ ಈ ಒಂದು ಕಾರ್ಯಕ್ರಮ ಆಯೋಜನೆಯಾಗಿದ್ದು ಈ ರಸಪ್ರಶ್ನೆಯಲ್ಲಿ ಪಾಲ್ಗೊಂಡ ವಿಜೇತ ವಿದ್ಯಾರ್ಥಿಗಳಿಗೆ ಸೂಕ್ತ ಪ್ರಶಸ್ತಿ ಬಹುಮಾನ ವಿತರಿಸಲಾಗುವುದು ಎಂದರು.

ಬಿದರಕೆರೆ ಗುರುಸಿದ್ದೇಶ್ವರ್ ಪ್ರೌಡಶಾಲಾ ಮುಖ್ಯಶಿಕ್ಷಕ ಗಣೇಶ್ ಮಾತನಾಡಿದರು ಜಗಳೂರು ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಬಳಗದವರು ಸ್ಥಳಿಯವಾಗಿ ಶ್ರೀ ಕೊಣಚಗಲ್ ಬೆಟ್ಟದ ಮೇಲಿರುವ ಅನುಭವಿಕವಿ ಮಹಾಲಿಂಗ ರಂಗ ಸಮಾಧಿಯನ್ನು ಜೀರ್ಣೋದ್ಧಾರ ಮಾಡಬೇಕು. ಅಂದಿನ ಕಾಲಘಟ್ಟದ ಕವಿ  ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದಾರೆ ವಿದ್ಯಾರ್ಥಿಗಳು ಇಲ್ಲಿರುವ ಇತಿಹಾಸ ತಿಳಿಯಬೇಕೆಂದರು. 

ಜನಪದ ಸಂಶೋಧಕ ನಿಬಗೂರು ರಾಜಣ್ಣ ಮಾತನಾಡಿ ಜನಪದ ಸಾಹಿತ್ಯದಲ್ಲೂ ಸಹ ಅನೇಕ ಪ್ರಕಾರಗಳಿದ್ದು ಬಹುಮುಖ್ಯವಾಗಿ ಜನರ ಬಾಯಿಂದ ಬಾಯಿಗೆ ಪೀಳಿಗೆಯಿಂದ ಪೀಳಿಗೆಗೆ ಜನಪದರ ಕುರುಹುಗಳು ಹಾಡುಭಾಷೆ ಕಲಾಪ್ರಕಾರಗಳು ಜನಪದ ಸೋಬಾನೆ ಅನೇಕ ಕಲೆಗಳು ಇಂದಿಗೂ ಜೀವಂತವಾಗಿವೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ .ಶಾಲಾ ಮುಖ್ಯ ಶಿಕ್ಷಕರಾದ ಗಣೇಶ್. ಶಾಲಾ  ಎಸ್ ಡಿ ಎಂ ಸಿ ಅದ್ಯಕ್ಷ ಬೋರಪ್ಪನಾಯಕ. ಉಪನ್ಯಾಸಕ ಬಸವಕುಮಾರ್ ಜನಪದ ಕಲಾವಿದ ನಿಬಗೂರು ರಾಜಣ್ಣ. ಮಹಾಮತೇಶ್.ಕಸಾಪ ಬಳದ ಬಡಪ್ಪ.ಕ.ಸಾ.ಪ ಹೊಬಳಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ. ಕ.ಸಾ.ಪ.ಬಿಳಿಚೋಡು ಹೊಬಳಿ ಘಟಕದ ಅಧ್ಯಕ್ಷ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ. ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!