ಸೂರಡ್ಡಿಹಳ್ಳಿ ಯಲ್ಲಿ ಮಾ.2 ರಂದು ಡಿಎಸ್ ಎಸ್ ಗ್ರಾಮಶಾಖೆ ನಾಮಫಲಕ ಉದ್ಘಾಟನೆ.

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಪ್ರೇಬ್ರವರಿ 28

ಜಗಳೂರು ಸುದ್ದಿ:ತಾಲೂಕಿನ ಸೂರಡ್ಡಿಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಕೃಷ್ಣಪ್ಪ ಸ್ಥಾಪಿತ) ಗ್ರಾಮ ಶಾಖೆ ಮಾರ್ಚ್ 2 ಶನಿವಾರದಂದು ನಾಮಫಲಕ ಉದ್ಘಾಟನೆ ಗೊಳ್ಳಲಿದೆ ಎಂದು ಅಂಬೇಡ್ಕರ್ ಪುತ್ಥಳಿ ಸಮಿತಿ ಅಧ್ಯಕ್ಷ ತುಪ್ಪದಹಳ್ಳಿ ಪೂಜಾರ್ ಸಿದ್ದಪ್ಪ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿಯಿಂದ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಶಾಸಕ ಬಿ‌.ದೇವೇಂದ್ರಪ್ಪ ಅವರು ಉದ್ಘಾಟಿಸಲಿದ್ದು.ಹಿರಿಯೂರು ಆದಿಜಾಂಭವ ಮಹಾಸಂಸ್ಥಾನ ಕೋಡಿಹಳ್ಳಿ ಪೀಠದ ಶ್ರೀ.ಷಡಕ್ಷರಿ ಮುನಿಸ್ವಾಮೀಜಿ,‌ಚಿತ್ರದುರ್ಗದ ಮಾದರ ಗುರುಪೀಠ ಶ್ರೀ.ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ದಿವ್ಯಸಾನಿಧ್ಯವಹಿಸಲಿದ್ದಾರೆ.ಸಂಸದ ಜಿ.ಎಂ.ಸಿದ್ದೇಶ್ವರ್,ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರಪ್ಪ ನಾಮಫಲಕ ಅನಾವರಣಗೊಳಿಸಲಿದ್ದಾರೆ.ಭಾವಚಿತ್ರಕ್ಕೆ ಎಚ್.ಪಿ.ರಾಜೇಶ್,ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.ಕಾಂಗ್ರೆಸ್ ಪಕ್ಷದ ಲೋಕಸಭಾ ಟಿಕೇಟ್ ಆಕಾಂಕ್ಷಿಗಳಾದ ವಿನಯ್ ಕುಮಾರ್ ಬಿ.ಕಕ್ಕರಗೊಳ್ಳ,ಕಲ್ಲೇಶ್ ರಾಜ್ ಪಟೇಲ್,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಅವರು ಉಪಸ್ಥಿತರಿರುತ್ತಾರೆ.ಡಿಎಸ್ ಎಸ್ ತಾಲೂಕು ಸಂಚಾಲಕ ಕುಬೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಬಿಜೆಪಿ ಮುಖಂಡ ಕೊಟ್ರೇಶ್,ಡಿಎಸ್ ಎಸ್ ಜಿಲ್ಲಾ ಸಂಚಾಲಕರಾದ ಕುಂದುವಾಡ ಮಂಜುನಾಥ್,ಮುಖಂಡರಾದ ಶಂಭುಲಿಂಗಪ್ಪ,ಕಲ್ಲೇರುದ್ರೇಶ್,ಬಿಸ್ತುವಳ್ಳಿ ಬಾಬು,ಪಲ್ಲಾಗಟ್ಟೆ ಮಹೇಶ್,ಅನಿತ್ ಕುಮಾರ್,ವಕೀಲ ಹನುಮಂತಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಬಸವಾಪುರ ರವಿಚಂದ್ರ,ಎ.ಎಂ.ಮರುಳಾರಾಧ್ಯ,ಗ್ಯಾಸ್ ಏಜೆನ್ಸಿ ಮಾಲಿಕ ಓಬಣ್ಣ,ಪ.ಪಂ ಸದಸ್ಯರಾದ ದೇವರಾಜ್,ನಿರ್ಮಲ ಕುಮಾರಿ,ಸೇರಿದಂತೆ ವಿವಿಧ ಗಣ್ಯರು,ಗ್ರಾ.ಪಂ ಅಧ್ಯಕ್ಷರು,ಸದಸ್ಯರುಗಳು ಗ್ರಾಮಸ್ಥರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕುಬೇಂದ್ರಪ್ಪ,ಸದಸ್ಯರಾದ ಪಲ್ಲಾಗಟ್ಟೆ ರಂಗಪ್ಪ,ನಿಂಗರಾಜ್,ವ್ಯಾಸಗೊಂಡನಹಳ್ಳಿ ಪಾಂಡು,ಮನು,ಬಸಣ್ಣ,ನಾಗರಾಜ್ ಕೊರಟಕೆರೆ,ಪ್ರದೀಪ್ ಮಡ್ರಹಳ್ಳಿ,ಸೇರಿದಂತೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!