ನನಗೆ ದಾವಣಗೆರೆ ಲೋಕಸಭಾ ಚುನಾವಣೆ ಟಿಕೆಟ್ ಸಿಗುವ ಸಂಪೂರ್ಣ ಆತ್ಮವಿಶ್ವಾಸವಿದೆ ಕಾರ್ಯಕರ್ತರಿಗೆ ಅತಂಕ ಬೇಡ . ಜಿ.ಬಿ ವಿನಯಕುಮಾರ್ ಕಾರ್ಯಕರ್ತರ ಸಭೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಪ್ರೇಬ್ರವರಿ 27
ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಾವಣಗೆರೆ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಐ.ಎ.ಎಸ್ ಇನ್ಸೈಟ್ ಸಂಸ್ಥೆ ಜಿ.ಬಿ ವಿನಯಕುಮಾರ್ ರವರ ಕಾಂಗ್ರೆಸ್ ಅಭಿಮಾನಿ ಬಳಗದ ವತಿಯಿಂದ ಕರೆಯಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಸಭೆಯನ್ನುದ್ದೇಶಿಸಿ ಕಾರ್ಯಕರ್ತರೊಂದಿಗೆ ಮಾತನಾಡಿದರು
ನಾನು ನಿಮ್ಮ ಸೇವೆ ಮಾಡಲು ಬಂದಿರುವ ಸೇವಕ. ದಾವಣಗೆರೆ ಕ್ಷೇತ್ರದಲ್ಲಿ ಜನತೆ ಈ ಬಾರಿ ಬದಲಾವಣೆ ಬಯಿಸಿದ್ದು ನಾನು ಕೇಂದ್ರ ಮತ್ತು ರಾಜ್ಯ ವರೀಷ್ಟರಲ್ಲಿ ಮನವಿ ಮಾಡಿಕೊಂಡಿರುವೆ ನನಗೆ ಟಿಕೆಟ್ ನೀಡಿ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಬಹುಮತದಿಂದ ಗೆದ್ದು ಬರುವೆ ನನಗೆ ಗೆಲ್ಲುವ ಸಾಮರ್ಥ್ಯವಿದೆ ಅತಿ ಕಡಿಮೆ ಅವಧಿಯಲ್ಲಿ ನಾನು ಕ್ಷೇತ್ರದಲ್ಲಿ ನಮ್ಮ ನಡೆ ಹಳ್ಳಿ ಕಡೆ ಪಾದಯಾತ್ರೆ ನಡೆಸಿ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಅರಿತಿರುವೆ. ಶೈಕ್ಷಣಿಕವಾಗಿ .ಸಾಮಾಜಿಕವಾಗಿ .ಆರ್ಥಿಕವಾಗಿ ಜನಸಾಮಾನ್ಯರ ಅಭಿವೃದ್ಧಿಯಾಗಬೇಕು .ಸಮಾಜದಲ್ಲಿರುವ ಅಸಮಾನತೆ ಹೋಗಲಾಡಿಸಬೇಕು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರಿಕರಣವಾಗಬೇಕು ಕೇವಲ ದಾವಣಗೆರೆ ಸ್ಮಾರ್ಟ್ ಸಿಟಿ ಮಾಡಿದರೆ ಸಾಲದು ಜನಸಾಮಾನ್ಯರ ಅಭಿವೃದ್ಧಿ ಬಹುಮಖ್ಯ .
ಕಾಂಗ್ರೆಸ್ ವರೀಷ್ಠರಲ್ಲಿ ವಿನಂತಿ ಮಾಡಿಕೊಳ್ಳುವೆ ಕೆಲಸ ಮಾಡುವಂತ ನಾಯಕನಿಗೆ ಟಿಕೆಟ್ ಕೋಡಿ.
ತಾರತಮ್ಯಧೋರಣೆ ಹೋಗಲಾಡಿಸುವ ಚಿಂತನೆಯಿದೆ. ಹಲವು ಸಮಸ್ಯೆಗಳ ಸುಳಿಯಲ್ಲಿ ರೈತರು ದಲಿತರು ಬಡವರು ಸಂಕಷ್ಟ ದಲ್ಲಿ ಜೀವನ ಸಾಗಿಸುತ್ತಿದ್ದಾರೆ ಆದರೆ ನಮ್ಮ ದೇಶದಲ್ಲಿ ಜ್ವಲಂತ ಸಮಸ್ಯೆಗಳ ಸುಳಿಯಲ್ಲಿದ್ದೆವೆ
ಭಾರತ ದೇಶದ 6 .50 ಲಕ್ಷ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳಿವೆ.
ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ಅವಶ್ಯವಾಗಿವೆ
.ಅದ್ದರಿಂದ ಕಾರ್ಯಕರ್ತರಲ್ಲಿ ಅನುಮಾನ ಬೇಡ ನಾನು ಸದಾ ನಿಮ್ಮೊಂದಿಗೆ ಸೇವೆ ಬಯಿಸುವ ಸೇವಕ ಅತಂಕ ಬೇಡ ನನಗೆ ಕೇಂದ್ರದ ಹೈಕಮಾಂಡ ವರೀಷ್ಠರು ನನ್ನ ಹೆಸರು ಸೂಚನೆ ಮಾಡಲು ಈಗಾಗಲೆ ಚರ್ಚೆ ಮಾಡಿದ್ದು ನನಗೆ ಆತ್ಮವಿಶ್ವಾಸವಿದೆ ಟಿಕೆಟ್ ಆರ್ಹನಾದ ನನಗೆ ನೀಡುವರು ಎಂಬ ಭರವಸೆಯಿದೆ ಕಾರ್ಯಕರ್ತರು ನಿಮ್ಮ ಊರುಗಳಲ್ಲಿ ಇದ್ದು ಸಾಮಾಜಿಕ ಜಾಲತಾಣಗಳಲ್ಲಿ ನನಗೆ ಟಿಕೆಟ್ ನೀಡಲು ಒತ್ತಡ ಹೇರಿ ನನಗೆ ಟಿಕೆಟ್ ನೀಡುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಆಗ್ರಹಿಸುವಂತೆ ತಿಳಿಸಿದರು
ದಾವಣಗೆರೆ ಕ್ಷೇತ್ರದ ಲೋಕಸಭಾ ಚುನಾವಣೆ ಸಮೀಪ ಬರುತ್ತಿದ್ದು ಕ್ಷೇತ್ರದಲ್ಲಿ ಬದಲಾವಣೆ ಬಯಿಸುವ ಎಲ್ಲಾ ಮನಸ್ಸುಗಳ ಮತದಾರರರಲ್ಲಿ ಮನವಿ ಮಾಡಿಕೊಳ್ಳುವೆ ನಮ್ಮ ಅಭಿಮಾನಿ ಕಾರ್ಯಕರ್ತರು ನಮ್ಮ ಪರವಾಗಿ ದ್ವನಿ ಎತ್ತಿ ನನಗೆ ಟಿಕೆಟ್ ಸಿಕ್ಕು ನಾನು ಸಂಸದನಾದರೆ ನಿಮ್ಮ ಪರವಾಗಿ ದ್ವನಿ ಎತ್ತುವೆ ಚುರುಕಿನಿಂದ ಕಾರ್ಯಕರ್ತರು ಕೆಲಸ ಮಾಡಿ ನಾನು ಅರ್ಹನಿದ್ದು ನನಗೆ ಟಿಕೆಟ್ ನೀಡಬೇಕು ಜನಾಭಿಪ್ರಾಯದ ಮೂಲಕ ಟಿಕೆಟ್ ನೀಡಲು ಸಮೀಕ್ಷೆ ನಡೆಸುವರು
ಎಂದು ಮನವಿ ಮಾಡಿಕೊಂಡರು.
ಕ್ಷೇತ್ರದಲ್ಲಿ ನಾನು ಅತ್ಯಂತ ಇಷ್ಟಪಡುವ ತಾಲೂಕು ಎಂದರೆ ಅದು ಜಗಳೂರು ಇಲ್ಲಿನ ಜನತೆ ನನಗೆ ಪ್ರೀತಿ ವಿಶ್ವಾಸ ತೋರಿಸಿ ನನ್ನ ಬೆಂಬಲಕ್ಕೆ ನಿಂತು ಪ್ರಥಮವಾಗಿ ಪಾದಯಾತ್ರೆ ಪ್ರಾರಂಭಿಸಿದ್ದು ಈ ಬಾಗದಿಂದಲೆ ಎಂದು ಸ್ಮರಿಸಿಕೊಂಡರು.
ಜಗಳೂರಿನಲ್ಲಿ ಕಾಂಗ್ರೆಸ್ ಅಧಿಕೃತ ಸಭೆ ಕರೆದಿದ್ದೆನೆ ಆದರೆ ಕೆಲವರು ನನ್ನ ವಿರುದ್ದ ಷಡ್ಯಂತ್ರ ಮಾಡಿ ಕಾಂಗ್ರೆಸ್ ಕಾರ್ಯಕರ್ತರು ಯಾರು ಸಭೆಗೆ ಹೋಗಬೇಡಿ ಅದು ಅಧಿಕೃತ ಸಭೆಯಲ್ಲ ಎಂದು ಮೆಸೇಜ್ ಹಾಕಿ ನನ್ನ ಪ್ರಬಲ ಲೋಕಸಭಾ ಆಕಾಂಕ್ಷಿ ಹೋರಾಟಕ್ಕೆ ಕುಂದುಂಟು ಮಾಡಲು ಹೊರಟ್ಟಿದ್ದಾರೆ ಆದರೆ ಅದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸುಮಾರು ನನ್ನ ಕರೆ ಮೇರೆಗೆ 200 ಕ್ಕೂ ಹೆಚ್ಚು ಕಾರ್ಯಕರ್ತರು ಸಭೆಗೆ ಬಂದಿರುವುದು ಸಂತೋಷದಾಯಕ ಒಟ್ಟಾರೆ ನಾನು ನಿಮ್ಮೊಂದಿಗೆ ಸದಾ ಇರುವ ಸೇವಕ ಎಂದು ತಿಳಿಸಿದರು.
ವಿನಯಕುಮಾರ್ ಅಭಿಮಾನಿ ಬಳಗ ಯುವ ಮುಖಂಡ ರಘುದೊಡ್ಡಮನಿ ಮಾತನಾಡಿ ಅಂದಾಭಿಮಾನದಿಂದ ಹೊರಗೆ ಬನ್ನಿ ಸಂವಿಧಾನ ಆಶಯಗಳಿಗೆ ತಕ್ಕಂತೆ ಅಧಿಕಾರ ನಡೆಸುವಂತ ನಾಯಕನಿಗೆ ಬೆಂಬಲಿಸಿ ಲೋಕಸಭಾ ಚುನಾವಣೆ ಅತ್ತಿರವಾಗುತ್ತಿದ್ದು ಕಾರ್ಯಕರ್ತರು ಎಲ್ಲಾರು ಚುನಾವಣೆ ಎದುರಿಸಲು ಸನ್ನದರಾಗೊಣ ಜಿ.ಬಿ ವಿನಯಕುಮಾರ್ ರವರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡೋಣ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.
ಮುಖಂಡ ಪ್ರಕಾಶ್ ರೆಡ್ಡಿ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲ ನಾಯಕತ್ವದ ಗುಣಗಳು ಹೊಂದಿರುವ ವಿನಯಕುಮಾರ್ ಒಬ್ಬ ಬುದ್ದಿವಂತ.ವಿದ್ಯಾವಂತ ಐ.ಎ.ಎಸ್ ಇನ್ಸ್ಟಿಟ್ಯೂಟ್ ಮೂಲಕ ಸಾವಿರಾರು ಉನ್ನತ ಅಧಿಕಾರಿಗಳ ಸೃಷ್ಠಿಕರ್ತರಾದ ವಿನಯಕುಮಾರ್ ಸಮರ್ಥ ರಾಜಕಾರಣೆ ಯುವ ನಾಯಕ ಕ್ಷೇತ್ರದಲ್ಲಿ ಉತ್ತಮ ಆಡಳಿತಕ್ಕಾಗಿ ಕ್ರೀಯಶೀಲ ವ್ಯಕ್ತಿತ್ವದ ನಾಯಕ ಜಿ ಬಿ ವಿನಯಕುಮಾರ್ ಟಿಕೆಟ್ ನೀಡುವಂತೆ ನಾವುಗಳು ಹೈಕಮಾಂಡ್ ಗೆ ಗಮನಹರಿಸುವಂತೆ ಹೋರಾಟ ಮಾಡೋಣ ಎಂದರು.
ಕಾಂಗ್ರೆಸ್ ಮುಖಂಡ ಯು.ಜಿ ಶಿವಕುಮಾರ್ ಮಾತನಾಡಿ ವಿನಯಕುಮಾರ್ ಒಂದು ಶಕ್ತಿ
ರೈತರ ಸಮಸ್ಯೆ ನಿರುದ್ಯೋಗ .ಮಹಿಳಾ ಸಮಸ್ಯೆಗಳನ್ನು ನಿವಾರಣೆ ಮಾಡುವ ಸಂಕಲ್ಪ ಅವರದಾಗಿದೆ ಆದ್ದರಿಂದ ವಿನಯಕುಮಾರ್ ಗೆ ಟಿಕೆಟ್ ನೀಡಬೇಕು ಎಂದರು.
ಯಾದವ ಸಮಾಜದ ಮುಖಂಡ ಕೃಷ್ಣ ಮೂರ್ತಿ ಮಾತನಾಡಿದರು
ಈ ಸಂದರ್ಭದಲ್ಲಿ ಮುಖಂಡ ಮರೆನಹಳ್ಳಿ ನಾಗರಾಜ್.ರಂಗನಾಥರೆಡ್ಡಿ.ವಕೀಲರಾದ ಪ್ರಕಾಶ್.ಮರೆನಹಳ್ಳಿ ಬಸವರಾಜ್.ಒಬಣ್ಣ.ಮುಖಂಡರಾದ ನಂಜುಂಡುಸ್ವಾಮಿ.ಕುಮಾರನಾಯ್ಕ್.ಸತೀಶ್.ಚಿಕ್ಕ ಉಜ್ಜಿನಿ ನಾಗರಾಜ್.ಮುಖಂಡ ಬರಕತ್ ಆಲಿ.ಮಹಾಬಜ್ಜ.ನಿಂಗನಹಳ್ಳಿನಾಗರಾಜ್. ಸೇರಿದಂತೆ ನೂರಾರು ಕಾರ್ಯಕರ್ತರು ಹಾಜುರಿದ್ದರು.