ಜಗಳೂರು ತಾಲ್ಲೂಕಿನ ಮಾದನಹಳ್ಳಿ ಗ್ರಾಮದ ವಸತಿರಹಿತರಿಗೆ ನಿವೇಶನ ಹಕ್ಕುಪತ್ರ ನೀಡುವಂತೆ ನಿವೇಶನ ರಹಿತ ಕುಟುಂಬದವರು ಗ್ರಾ ಕೂ ಸ ಸಂಘದ ವತಿಯಿಂದ ಮನವಿ ಸಲ್ಲಿಸಿ ಶೀಘ್ರವೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿದರು ಬಿಳಿಚೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದನಹಳ್ಳಿ ಗ್ರಾಮದ ಬಡ ನಿವೇಶನ ವಸತಿ ರಹಿತರು ಸುಮಾರು ವರ್ಷಗಳಿಂದ ನಿವೇಶನ ನೀಡುವಂತೆ ಸಂಬಂಧಿಸಿದ ಗ್ರಾಪಂ ಕಛೇರಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರಿಗು ಸುಮಾರು ಬಾರಿ ಮನವಿ ಸಲ್ಲಿಸಿದರು ಸಹ ನಿವೇಶನ ಹಕ್ಕು ಪತ್ರ ನೀಡಿರುವುದಿಲ್ಲ ಶೀಘ್ರವೆ ಹಕ್ಕುಪತ್ರ ವಿತರಿಸಿ ಎಂದು ಪ್ರತಿಭಟನಾಕಾರರು ಆರೋಪಿಸಿ ಗ್ರಾಪಂ ಅಧ್ಯಕ್ಷರಿಗೆ ಸೋಮವಾರ ಮನವಿ ಸಲ್ಲಿಸಿ ಒತ್ತಾಯಿಸಿದರು . ಈ ಸಂದರ್ಭದಲ್ಲಿ ಗ್ರಾಕೂಸ ಸಂಘದ ಸಂಚಾಲಕಿ ಪಲ್ಲಾಗಟ್ಟೆ ಸುಧಾ ಮಾತನಾಡಿ ಸುಮಾರು ವರ್ಷಗಳಿಂದ ಮಾದನಹಳ್ಳಿ ಗ್ರಾಮದ ಕೂಲಿಕಾರರು ವಸತಿ ರಹಿತ ಬಡವರು ಸರ್ಕಾರಿ ಸೆಂದಿವನ ರಿ ಸ 34 ರಲ್ಲಿ ನಿವೇಶನ ಕಾಯ್ದಿರಿಸಿ ಹಕ್ಕುಪತ್ರ ನೀಡಲು ಗ್ರಾಮದ ಸುಮಾರು 50 ಕುಟುಂಬದ ಬಡಜನರು ನಿವೇಶನಕ್ಕಾಗಿ ಈ ಹಿಂದೆ ಅರ್ಜಿ ಸಲ್ಲಿಸಿದ್ದರು ಸಂಬಂಧಿಸಿದ ಪಿ ಡಿ ಓ ಅಧಿಕಾರಿ ಇದುವರೆಗೂ ಆರ್ಹರಿಗೆ ನಿವೇಶನ ನೀಡದೆ ನಿರ್ಲಕ್ಷ್ಯ ಮಾಡಿರುವುದು ಸರಿಯಲ್ಲ. ಬಡವರು ಸುಮಾರು ವರ್ಷದಿಂದ ನಿವೇಶನ ವಸತಿಗಾಗಿ ಗ್ರಾಪಂ ಅಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ ಆದ್ದರಿಂದ ಶೀಘ್ರವೆ ನಿವೇಶನ ಹಕ್ಕು ಪತ್ರ ನೀಡುವಂತೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ . ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸು) ಗ್ರಾಮದ ಕೂಲಿ ಕಾರ್ಮಿಕರು ಅನಸೂಯಮ್ಮ ನಾಗರಾಜ್ ಗಂಗಮ್ಮ ಲಕ್ಷ್ಮಮ್ಮ ಕಲ್ಯಾಣಮ್ಮ ಅನಿತಾ ಸುಜಾತ ರೂಪ ಮುಂತಾದವರು ಭಾಗವಹಿಸಿದರು ಗಂಗಮ್ಮ ರಂಗನಾಥ. .