ಬಸವನಕೋಟೆ ಗ್ರಾಮದಲ್ಲಿ ಚರಂಡಿ ಸ್ವಚಗೋಳಿಸುವ ವೇಳೆ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಗ್ರಾಪಂ ಪಿಡಿಓ ಸಂಪೂರ್ಣ ನಿರ್ಲಕ್ಷ್ಯ ಸಾರ್ವಜನಿಕರ ಆರೋಪ . ಜಗಳೂರು ತಾಲ್ಲೂಕಿನ ಬಸವನಕೋಟೆ ಗ್ರಾಮದ. ಮೈಲಪ್ಪ ಸತ್ಯಪ್ಪ ಎಂಬ ಇಬ್ಬರು ಗ್ರಾಮದಲ್ಲಿ ಸಂಬಂಧಿಸಿದ ಗ್ರಾಪಂ ವ್ಯಾಪ್ತಿಗೆ ಸೇರಿದ ಚರಂಡಿ ಸ್ವಚಗೋಳಿಸಲು ಪಿಡಿಓ ಶಶಿಧರ ಪಾಟೇಲ್ ಹಾಗೂ ಅದ್ಯಕ್ಷರು ಯುಗಾದಿ ಪ್ರಯುಕ್ತ ಚರಂಡಿ ಸ್ವಚಗೋಳಿಸುವಂತೆ ಕಾರ್ಮಿಕರಿಗೆ ತಿಳಿಸಿದ ಹಿನ್ನಲೆಯಲ್ಲಿ ಗ್ರಾಮದ ಸತ್ಯಪ್ಪ.ಮೈಲಪ್ಪ ಎಂಬ ಇಬ್ಬರು ಕಾರ್ಮಿಕರು ಸೋಮವಾರ ಬೆಳಿಗ್ಗೆ 11 ಗಂಟೆಗೆ ಗ್ರಾಮದ ದೊಡ್ಡದಾದ ಚರಂಡಿ ಸ್ವಚತೆಗೆ ಮುಂದಾಗಿದ್ದರು ಸ್ವಚತೆ ವೇಳೆ ತುಂಬಾ ಕಲುಷಿತ ನೀರು ತುಂಬಿ ಗಬ್ಬೆದ್ದ ಚರಂಡಿ ದುರ್ವಾಸನೆ ಗಾಳಿ ಸೇವನೆಯಿಂದ ಸ್ವಚಗಾರರು ಅಸ್ಥವ್ಯಸ್ಥರಾಗಿದ್ದಾರೆ ಇದನ್ನು ಗಮನಿಸಿದ ಸಾರ್ವಜನಿಕರು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ .ಚಿಕಿತ್ಸೆ ಫಲಕಾರಿಯಾಗದೆ ಕಾರ್ಮಿಕರು ಸಾವನ್ನಪಿರುವುದು ಬೆಳಕಿಗೆ ಬಂದಿದೆ . ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಇಬರು ಕಾರ್ಮಿಕರ ಸಾವಿನಿಂದ ಅವರ ಕುಟುಂಬಕ್ಕೆ ತುಂಬಾಲಾರದ ನಷ್ಠವಾಗಿದ್ದು ಕುಟುಂಬದವರಿಗೆ ಪರಿಹಾರ ನೀಡಿ ಸರ್ಕಾರಿ ನೌಕರಿ ನೀಡಬೇಕೆಂದು ಗ್ರಾಮದ ನೊಂದ ಕುಟುಂಬ ವರ್ಗದವರು ಹಾಗೂ ದಸಂಸ ಪದಾಧಿಕಾರಿಗಳು ಸಾರ್ವಜನಿಕರು ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಇಂದು ಬೆಳಿಗ್ಗೆ ಶವವಿಟ್ಟು ಪ್ರತಿಭಟನೆ ಮಾಡಿ ಆಗ್ರಹಿಸಿದ್ದಾರೆ. ಸಂಬಂಧಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಯಾವುದೇ ರೀತಿಯಾದ ಕಾರ್ಮಿಕರಿಗೆ ಸೇಪ್ಟಿ ಕಿಟ್ ನೀಡದೇಯಿರುವುದು ಇವರ ಸಾವಿಗೆ ಕಾರಣರಾಗಿದೆ ಎಂದು ಪ್ರತಿಭಟನೆಕಾರರು ಆರೋಪಿಸಿದ್ದಾರೆ.. ಬಾಯಿಗೆ .ಕೈಗಳಿಗೆ ಸೇಪ್ಟಿ ರಕ್ಷಣೆ ಕವಚಗಳು ವಿತರಿಸದೆ ಕಾಲಿಗೆ ಶೂಗಳು ಸೇರಿದಂತೆ ರಕ್ಷಕವಚಗಳುನ್ನು ಕಾರ್ಮಿಕರಿಗೆ ನೀಡಿ ಅವರ ಆರೋಗ್ಯ ಕಾಪಾಡಬೇಕಾದ ಪಿಡಿಓ ಮುಂಜಾಗ್ರತೆ ಜ್ಘಾನವಿಲ್ಲ ಸರ್ಕಾರಿ ನೀಯಮ ಪಾಲಿಸಬೇಕಾದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವಾಗಿದೆ. ಅದರಲ್ಲೂ ತಂತ್ರಜ್ಞಾನ ಕಾಲಘಟ್ಟದಲ್ಲಿ ಅತ್ಯಧುನಿಕ ತಂತ್ರಜ್ಞಾನ ಬಳಸಿ ಮಲ ತೆಗೆಯುವುದು ಕಲುಷಿತ ಚರಂಡಿ ಸ್ವಚಗೋಳಿಸುವ ನೀಯಮವಿದ್ದರು ಸಹ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ದೋರಣೆಯಿಂದ ಇಂತ ಅವಘಡ ನಡೆದಿದೆ ಎನ್ನಲಾಗಿದೆ.. ಅತ್ತಿರದ ಬಿಳಿಚೋಡು ಪೋಲಿಸ ಠಾಣೆ ಪಿ ಎಸ್ ಐ ಸೇರಿದಂತೆ .ಜಗಳೂರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ ತಾಪಂ ಇಓ ಚಂದ್ರಶೇಖರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ್ದರು ಕಾರ್ಮಿಕರ ಕುಟುಂಬಸ್ಥರ ಗೋಳಿನ ಆಕ್ರಂದನ ಮುಗಿಲು ಮುಟ್ಟಿತ್ತು. ತಾಪಂ. ಇಓ .ಹಾಗೂಗ್ರಾಪಂ ಅಧ್ಯಕ್ಷ ಅಭಿವೃದ್ದಿ ಅಧಿಕಾರಿಗಳು ಕುಟುಂಬದವರ ನೆರವಿಗೆ ಧಾವಿಸಿ ಪರಿಹಾರ ನೀಡಲು ಒಪ್ಪಿದ ಅಧಿಕಾರಿಗಳು … ಪ್ರತಿಭಟನೆ ಹಿಂಪಡೆದು ಶವ ಸಂಸ್ಕಾರಕ್ಕೆ ಮುಂದಾದ ಕುಟುಂಬಸ್ಥರು ………ದಸಂಸ ಪದಾಧಿಕಾರಿಗಳಿಂದ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಭದ್ರತೆ ನೀಡಿ ಅವರ ಕುಟುಂಬದವರಿಗೆ ಗ್ರಾಪಂ ಕಛೇರಿಯಲ್ಲಿ ಉದ್ಯೋಗ ನೀಡಿ ಅವರ ಕುಟುಂಬಕ್ಕೆ ತಲಾ 10 ಲಕ್ಷ ತಲಾ 10 ಲಕ್ಷ ಪರಿಹಾರ ನೀಡುವಂತೆ ದಸಂಸ ಪದಾಧಿಕಾರಿಗಳು ಬೇತೂರು ಮಂಜುನಾಥ.ಸತಿಶ್ ಮಲೆಮಾಚಿಕೆರೆ .ಪುಣಬಗಟ್ಟೆ ವಕೀಲರಾದ ನಿಂಗಪ್ಪ.ಹನುಮಂತಪ್ಪ.ವಕೀಲರಾದ ಹನುಮಂತಪ್ಪ ಇನ್ನು ಮುಂತಾದವರು ಆಗ್ರಹಿಸಿದ್ದಾರೆ. … ದೇಶಿಯ ಯುಗಾದಿ ಹಬ್ಬದ ವೇಳೆಯಲ್ಲಿ ಕಾರ್ಮಿಕರ ಸಾವು ನೋವಿನ ಸಂಗತಿಯಾಗಿದ್ದು ಇಂತ ದುರ್ಘಟನೆ ನಡೆಯಬಾರದಿತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಯೊಂದಿಗೆ ಪರಿಶೀಲನೆ ನಡೆಸಿ ಕಾರ್ಮಿಕರ ಕುಟುಂಬದವರಿಗೆ ಭದ್ರತೆ ಸೇರಿದಂತೆ ಸೂಕ್ತ ಪರಿಹಾರ ನೀಡಲು ಕ್ರಮಕೈಗೊಂಡು ನೀಯಮವಳಿ ಉಲ್ಲಂಘನೆ ಮಾಡಿರುವ ಪಿಡಿಓ ಅಧಿಕಾರಿ ಶಶಿಧರ್ ಪಾಟೇಲ್ ಗೆ ಕ್ರಮಕೈಗೊಳ್ಳವೆ. ಜಿಪಂ ಸಿಇಓ ಚನ್ನಪ್ಪ.