ಲೇಖಕ ಎನ್.ಟಿ.ಎರ್ರಿಸ್ವಾಮಿ ಅವರು ರಚಿಸಿರುವ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ಜೀವನಚರಿತ್ರೆ ಮತ್ತು ಕ್ಷೇತ್ರ ದರ್ಶನ ಪುಸ್ತಕವನ್ನು ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಶನಿವಾರ ಬಿಡುಗಡೆಗೊಳಿಸಿದರು.

ಶ್ರೀಗುರುತಿಪ್ಪೇರುದ್ರಸ್ವಾಮಿ ಜೀವನಚರಿತ್ರೆ ಮತ್ತು ಕ್ಷೇತ್ರ ದರ್ಶನ ಪುಸ್ತಕ ಬಿಡುಗಡೆ 

ಧಾರ್ಮಿಕ ಕೃತಿಗಳು ಜ್ಞಾನ ವಿಸ್ತರಣೆಗೆ ಸಹಕಾರಿ

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on march 2

ಚಿತ್ರದುರ್ಗ ಜಿಲ್ಲಾ

ನಾಯಕನಹಟ್ಟಿ ಸುದ್ದಿ : ಸಾತ್ವಿಕ ಮತ್ತು ಧಾರ್ಮಿಕ ಕೃತಿಗಳು ಶ್ರೀಸಾಮಾನ್ಯರ ಜ್ಞಾನ ವಿಸ್ತರಣೆಗೆ ಸಹಕಾರಿಯಾಗಲಿದೆ ಎಂದು ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಸಮುದಾಯ ಭವನದ ಆವರಣದಲ್ಲಿ ಶನಿವಾರ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು, ಹಟ್ಟಿಮಲ್ಲಪ್ಪ ನಾಯಕ ಸಂಘದ ಸಹಯೋಗದಲ್ಲಿ ಲೇಖಕ ಎನ್.ಟಿ.ಎರ್ರಿಸ್ವಾಮಿ ಅವರು ರಚಿಸಿರುವ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ಜೀವನಚರಿತ್ರೆ ಮತ್ತು ಕ್ಷೇತ್ರ ದರ್ಶನ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಶತಮಾನಗಳಿಂದ ನೂರಾರು ಪುಣ್ಯಪುರುಷರು ಲೋಕಕಲ್ಯಾಣಕ್ಕಾಗಿ ತಮ್ಮ ಅಮೂಲ್ಯವಾದ ಸಲಹೆ ಸೂಚನೆ ಮಾರ್ಗದರ್ಶನಗಳನ್ನು ನೀಡಿದ್ದಾರೆ. ಅದೇ ರೀತಿ ನಾಯಕನಹಟ್ಟಿಯ ಅವಧೂತ ಗುರುತಿಪ್ಪೇರುದ್ರಸ್ವಾಮಿಗಳು ಮಧ್ಯಕರ್ನಾಟಕದಲ್ಲಿ ನೆಲೆನಿಂತು ತಮ್ಮ ಕಾಯಕ ತತ್ವದ ಮೂಲಕ ಸಮಸಮಾಜದ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತಂದು ಸರ್ವ ಜನಾಂಗದ ಏಳ್ಗೆಯನ್ನು ಬಯಸಿದರು. ಅಂತಹ ಸಿದ್ಧಿಯೋಗಿಯ ಜೀವನ ಸಾಧನೆ ಮತ್ತು ವರು ನೆಲೆ ಕಂಡುಕೊಂಡ ನಾಯಕನಹಟ್ಟಿ ಪುಣ್ಯಕ್ಷೇತ್ರದ ಕ್ಷೇತ್ರದರ್ಶನವನ್ನು ಶ್ರೀಸಾಮಾನ್ಯರಿಗೆ ಸರಳವಾದ ಭಾಷೆಯಲ್ಲಿ ತಿಳಿಸುವ ಸಲುವಾಗಿ ಈ ಪುಸ್ತಕದ ಮೂಲಕ ಲೇಖಕ ಎನ್.ಟಿ.ಎರ್ರಿಸ್ವಾಮಿ ಯಶಸ್ವಿಯಾಗಿದ್ದಾರೆ.

 ಇಂತಹ ಹಲವು ಧಾರ್ಮಿಕ ಕೃತಿಗಳು ಮನುಷ್ಯರ ಜ್ಞಾನ ಪರಿಧಿಯನ್ನು ವಿಸ್ತರಿಸಲು ಸಹಕಾರಿಯಾಗಿ ಸ್ವಭಾವತಃ ಮನುಷ್ಯನು ಸಾತ್ವಿಕ ಗುಣಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್‍ಕುಮಾರ್ ಎಸ್.ಹೊಸಮನಿ, “ ಮಾಡಿದಷ್ಟು ನೀಡುಭಿಕ್ಷೆ ಎಂಬ ನಾಣ್ನುಡಿಯ ಮೂಲಕ ಕಾಯಕ ತತ್ವ ಮತ್ತು ನಿರಂತರ ಅನ್ನ ದಾಸೋಹಕ್ಕೆ ಹೆಸರಾದ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿಯವರ ಜೀವನ ಚರಿತ್ರೆ ಕುರಿತ ಪುಸ್ತಕವು ಓದುಗ ವರ್ಗಕ್ಕೆ  ಜ್ಞಾನ ದಾಸೋಹವನ್ನು ಒದಗಿಸುತ್ತದೆ. ಹಾಗೇ ಈ ಪುಸ್ತಕವನ್ನು ರಾಜ್ಯದಾಧ್ಯಂತ ಸಾರ್ವಜನಿಕ ಗ್ರಾಂಥಾಲಯಗಳಿಗೆ ನೀಡುವ ಕಾರ್ಯವನ್ನು ಮಾಡಲಾಗುವುದು. ಮತ್ತು ರಾಜ್ಯ ಡಿಜಿಟಲ್ ಗ್ರಂಥಾಲಯಕ್ಕೆ ಪುಸ್ತಕವನ್ನು ಅಳವಡಿಸುವ ಕಾರ್ಯಮಾಡಲಾಗುವುದು. 

ಆ ಮೂಲಕ ಇಡೀ ಜಗತ್ತಿಗೆ ತಿಪ್ಪೇರುದ್ರಸ್ವಾಮಿಯವರನ್ನು ಪರಿಚರಿಯಿಸುವ ಕಾರ್ಯಾ ಮಾಡಲಾಗುವುದು” ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಟ್ಟಿಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಸೊಕ್ಕೆ ಜೆ.ಎಂ.ತಿಪ್ಪೇಸ್ವಾಮಿ, ದಿನೇಶ್‍ಗೌಡಗೆರೆ, ಗೀತಾಂಜಲಿ ಪ್ರಕಾಶನದ ಜಿಬಿಟಿ.ಮೋಹನ್, ಲೇಖಕ ಎನ್.ಟಿ.ಎರ್ರಿಸ್ವಾಮಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಎಂ.ವೈ.ಟಿ.ಸ್ವಾಮಿ, ಗಂಗಾಧರಪ್ಪ, ನಿವೃತ್ತ ಪ್ರಾಂಶುಪಾಲ ಬಸಪ್ಪ.,ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅದಿಕಾರಿ   ಮಹೇಶ್ವರಪ್ಪ,ಚಿದಾನಂದ. ಬಿ.ಕಾಟಯ್ಯ, ಸುಭಾಶ್ಚಂದ್ರಬೋಸ್, ಕಸಾಪ.ಅದ್ಯಕ್ಷೆ ಕೆ.ಸುಜಾತ,ಜಳೂರು , ಚು.ಸಾ.ಪ.ಗೀತಾಮಂಜು. ಜಿ.ವೈ.ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!