ರೈತರ ಹಕ್ಕಿಗಾಗಿ ಹೋರಾಟ ಅನಿವಾರ್ಯ.  ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹ ಕರ್ನಾಟಕ ರೈತ ಸೇನೆ ಸಂಘದ ರಾಜ್ಯಾಧ್ಯಕ್ಷ ಉಜ್ಜಿನಗೌಡ ಆಗ್ರಹಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ಸುದ್ದಿ

shukradeshenews Kannada | online news portal |Kannada news

By online   

By shukradeshenews | published on march 25

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on

ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಚಿತ್ರದುರ್ಗ ಜಿಲ್ಲೆಯ ಇಸಾಮುದ್ರ ಹೊಸಹಟ್ಟಿ ಗ್ರಾಮದಲ್ಲಿ ನಡೆದ ನೂತನ ಗ್ರಾಮ ಶಾಖೆ ನಾಮಫಲಕ ಉದ್ಗಾಟನೆ ಮಾಡಿ 

ಮಂಗಳವಾರ ನಡೆದ ನೂತನ ಕರ್ನಾಟಕ ರೈತ ಸೇನೆ ಸಂಘದ ನಾಮಫಲಕ ಅನಾವರಣಗೋಳಿಸುವ ಕಾರ್ಯಕ್ರಮದಲ್ಲಿ  ಅನಾವರಣಗೋಳಿಸಿ   ಮಾತನಾಡಿದರು 

ಈ ಬಾರಿ ಕರ್ನಾಟಕದಲ್ಲಿ ಕಂಡರಿಯದ ಬರಗಾಲ ಆವರಿಸಿದೆ ರೈತರು ಸಂಕಷ್ಟ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದು  ಜಾನುವಾರುಗಳಿಗೆ ಅವಶ್ಯಕತೆ ಇರುವ ಕಡೆ ಗೋವುಗಳಿಗೆ ಗೋಶಾಲೆ ತೆರೆದು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು 

ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳ , ಕೈಗಾರಿಕಾ ಉದ್ಯಮಿಗಳಿಗೆ ನೆರವು ನೀಡಿ   ಕೋಟಿಗಟ್ಟಲೆ ಸಾಲ ಮನ್ನಾ ಮಾಡಿರುವಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

 . ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ. ರಾಜ್ಯ ಸರ್ಕಾರ ₹2 ಸಾವಿರ ಮಾತ್ರ ಪರಿಹಾರ ನೀಡುವುದು ಸರಿಯಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ರಾಜಕೀಯ ಚೆಲ್ಲಾಟ ಆಡುತ್ತಿವೆ. ಪ್ರತಿ ಎಕರೆಗೆ ಕನಿಷ್ಠ ₹25 ಸಾವಿರ ಬರ ಪರಿಹಾರ ಬಿಡುಗಡೆ ಮಾಡಬೇಕು ಎಂದರು

ಕೃಷಿ ಪಂಪ್‍ಸೆಟ್‍ಗಳಿಗೆ ನೀಡುವ ಉಚಿತ ವಿದ್ಯುತ್ ತಪ್ಪಿಸಲು ವಿದ್ಯುತ್ ಖಾಸಗೀಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಕೃಷಿ ಪಂಪ್‍ಸೆಟ್‍ಗಳಿಗೆ ಹಗಲು ವೇಳೆ ನಿರಂತರ 10 ತಾಸು ವಿದ್ಯುತ್‍ ನೀಡಬೇಕು. ರೈತರ ಮದುವೆಯಾಗುವ ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ನೀತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಘಟಕದ ಅದ್ಯಕ್ಷೆ ಸುಧಾವೇದಮೂರ್ತಿ.ದಾವಣಗೆರೆ ರಾಜ್ಯ ಪ್ರಧಾನಕಾರ್ಯಧರ್ಶಿ ಪದ್ಮಶ್ರೀ. ಚಿತ್ರದುರ್ಗ ತಾಲ್ಲೂಕು ಅದ್ಯಕ್ಷ ಮಂಜಣ್ಣ.ಜಗಳೂರು ತಾಲ್ಲೂಕು ಅದ್ಯಕ್ಷೆ ಚೌಡಮ್ಮ ನಿಬಗೂರು ರಾಜಣ್ಣ.ಹರಿಹರ ತಾಲ್ಲೂಕು ಅದ್ಯಕ್ಷರು ಸೇರಿದಂತೆ ಆಪಾರ ರೈತರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. .

Leave a Reply

Your email address will not be published. Required fields are marked *

You missed

error: Content is protected !!