ದೊಣೆಹಳ್ಳಿಯಲ್ಲಿ ಮಾ.25ರಿಂದ 29 ರವರೆಗೆ ‘ದಾಸೋಹ ಸಂಸ್ಕೃತಿ ಉತ್ಸವ’‌ ಜರುಗಲಿದೆ: ದೊಣೆಹಳ್ಳಿ ಗುರುಮೂರ್ತಿ.

ಜಗಳೂರು ಸುದ್ದಿ:ತಾಲೂಕಿನ ದೊಣೆಹಳ್ಳಿ ಶ್ರೀ ಶರಣ ಬಸವೇಶ್ವರ ದಾಸೋಹ ಮಠದಿಂದ ಪ್ರಪ್ರಥಮ ಬಾರಿಗೆ ಮಾರ್ಚ್ 25‌ರಿಂದ 29‌ ರವರೆಗೆ ‘ದಾಸೋಹ ಸಂಸ್ಕೃತಿ ಉತ್ಸವ’ ಜರುಗಲಿದ್ದು ಸಕಲ ಭಕ್ತ ಸಮೂಹ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಎಂದು ಉತ್ಸವದ ಮುಖ್ಯ ಸಂಚಾಲಕ ಹಾಗೂ ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಕರೆ ನೀಡಿದರು.

ಪಟ್ಟಣದ ಎಂ.ಆರ್.ಕಂಫರ್ಟ್ಸ್ ನಲ್ಲಿ ದಾಸೋಹ ಸಂಸ್ಕೃತಿ ಉತ್ಸವ ಸಮಿತಿವತಿಯಿಂದ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಗ್ರಾಮದ ಹಳೇ ಮಠದ ಆವರಣದಲ್ಲಿ ಹೊಸಮಠ( ದೇವಸ್ಥಾನ),ಮಹಾದ್ವಾರ,ದಾಸೋಹ ಭವನ ಮತ್ತು ಶಿಥಿಲ ಗೊಂಡಿರುವ ಕಲ್ಯಾಣಿಯ ಪುನರುಜ್ಜೀವನ ಅಭಿವೃದ್ದಿ ಕಾಮಗಾರಿ ಶೇ.60ರಷ್ಟು ಪ್ರಗತಿಯಲ್ಲಿದ್ದು.ಶೀಘ್ರ ಪೂರ್ಣಗೊಳ್ಳಲಿದೆ.ಹೀಗಾಗಿ ಹಳೇಯ ಮಠದೊಂದಿಗೆ ಹೊಸ ಮಠಕ್ಕೆ ಹೊಸ ಪರಂಪರೆಯನ್ನು ಕಟ್ಟಿ ಕೊಡುವ ಬಹುತ್ವದ ಜೀವ ಪರಂಪರೆಯ ಆಶಯದೊಂದಿಗೆ ಈ ಉತ್ಸವವನ್ನು 5 ದಿನಗಳಕಾಲ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಮಾರ್ಚ್ 25 ರಂದು ಉತ್ಸವದಲ್ಲಿ ಬೆಂಗಳೂರು ಸರ್ಪಭೂಷಣ ಶಿವಯೋಗಿಗಳ ಮಠದ ಪಟ್ಟಾಧ್ಯಕ್ಷ ಶ್ರೀ.ಮಲ್ಲಿಕಾರ್ಜುನ ದೇವರ ದಿವ್ಯಸಾನಿಧ್ಯವಹಿಸಲಿದ್ದಾರೆ.ಷಟಸ್ಥಲ ಧ್ವಜಾರೋಹಣದೊಂದಿಗೆ ಚಿತ್ರದುರ್ಗದ ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಅವರು ಉದ್ಘಾಟಿಸಲಿದ್ದಾರೆ.ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಲಿರುವರು.ಮಾರ್ಚ್.26 ಎರಡನೇ ದಿನ ಚಿತ್ರದುರ್ಗದ ಹಿರಿಯ ಮಠಾಧೀಶರಾದ ಶ್ರೀಕಬೀರಾನಂದ ಆಶ್ರಮದ ಶ್ರೀ.ಶಿವಲಿಂಗಾನಂದ ಮಹಾಸ್ವಾಮಿಜಿಯವರ ಅಧ್ಯಕ್ಷತೆಯಲ್ಲಿ ಶರಣ ತತ್ವ ಚಿಂತನಾ ಸಮಾವೇಶ ನಡೆಯಲಿದೆ.ಮಾರ್ಚ್.27 ಮೂರನೇ ದಿನ ಭದ್ರಾಮೇಲ್ದಂಡೆ ನೀರಾವರಿ ಯೋಜನೆ ಶೀಘ್ರ ಅನುಷ್ಠಾನ ಮತ್ತು 57 ಕೆರೆಗಳ ನೀರು ತುಂಬಿಸುವ ಯೋಜನೆ ಕುರಿತು ಹಕ್ಕೊತ್ತಾಯಕ್ಕಾಗಿ ಜಾಗೃತಿ ರೈತ ಸಮಾವೇಶವನ್ನು ಏರ್ಪಡಿಸಲಾಗಿದೆ.ಸಮಾವೇಶದಲ್ಲಿ ನೀರಾವರಿ ಹೊರಾಟಗಾರ ತೋರಣಗಟ್ಟೆ ತಿಪ್ಪೇಸ್ವಾಮಿ ಅಧ್ಯಕ್ಷತೆವಹಿಸಲಿದ್ದಾರೆ.ಹಾಗೂ ಚಿತ್ರದುರ್ಗ,ದಾವಣಗೆರೆ,ವಿಜಯನಗರ,ಜಿಲ್ಲೆಗಳ ಪ್ರಮು ರೈತ ಹೋರಾಟಗಾರರು,ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮಾರ್ಚ್.28 ನಾಲ್ಕನೇ ದಿನ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಆಯೋಜಿಸಲಾಗಿದ್ದು.ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯ ವೈದ್ಯರ ತಂಡ ಆಗಮಿಸಲಿದೆ.ಮಾರ್ಚ್.29 ಕೊನೆಯ ದಿನದಂದು ಉತ್ತರ ಕರ್ನಾಟಕದ ಇಳಕಲ್ ಚಿತ್ತರಗಿ ಮಹಾಸಂಸ್ಥಾನದ ಬಸವದಾಸೋಹಿ ಮಠದ ಶ್ರೀ.ಗುರು ಮಹಾಂತ ಸ್ವಾಮೀಜಿಯವರು ದಿವ್ಯಸಾನಿಧ್ಯದಲ್ಲಿ ಸರ್ವ ಶರಣರ ಬಹುತ್ವ ಸಮಾವೇಶ ನಡೆಯಲಿದೆ.ಅನ್ನ,ಜ್ಞಾನ,ಅರಿವು-ಆರೋಗ್ಯ ದಾಸೋಹದ ಜೊತೆಗೆ ವಿವಿಧ ಕಲಾತಂಡಗಳಿಂದ ವಚನಗಾಯನ ಜರುಗಲಿವೆ.ಕಾರ್ಯಕ್ರಮದಲ್ಲಿ ಕಾನಮಡಗು ದಾಸೋಹ ಮಠದ ಧರ್ಮಾಧಿಕಾರಿ ಐರ್ಮಡಿ ಶರಣಾರ್ಯರ ಗೌರವ ಉಪಸ್ಥಿತಿ ಇರಲಿದೆ.ಮಠದ ಸದ್ಭಕ್ತರು ಉತ್ಸವಕ್ಕೆ ಹೆಗಲುಕೊಟ್ಟಿದ್ದಾರೆ ಎಂದು ತಿಳಿಸಿದರು.

ಸಂದರ್ಭದಲ್ಲಿ ಉತ್ಸವ ಸಮಿತಿಯ ಮುಖಂಡರುಗಳಾದ ಜಿ ಬಸವರಾಜಪ್ಪ,ಎಳಂಜಿ ನಿಂಗಪ್ಪ,ವೈ ಎಚ್.ಸಂತೋಷ್ ಕುಮಾರ್,ಗಣೇಶ್,ಪ್ರಾಂಶುಪಾಲ‌ ಎ.ಡಿ.ನಾಗಲಿಂಗಪ್ಪ,ಸೇರಿದಂತೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!