ಸಮಾಜದಲ್ಲಿ ಮಹಿಳೆಯರು ಆರ್ಥಿಕವಾಗಿ ಸದೃಡರಾಗಲು ಮಹಿಳಾ ಸ್ವಸಹಾಯ ಸಂಘಗಳು ಅತ್ಯಂತ ಸಹಕಾರಿಯಾಗಿವೆ ಮೈರಾಡ ಸಂಸ್ಥೆ ಪ್ರೊಗ್ರಾಮ್ ಅಧಿಕಾರಿ ಸಿ ಎಸ್ ಗೌಡ್ರು ಅಭಿಪ್ರಾಯಪಟ್ಟರು.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on march 22
ಸುದ್ದಿ ಜಗಳೂರು
ಪಟ್ಟಣದ ದೇವೆಗೌಡ ಬಡಾವಣೆಯಲ್ಲಿ ಮೈರಾಡ್ ಸಂಸ್ಥೆ ಕಛೇರಿ ಆವರಣದಲ್ಲಿ ವಿವಿಧ ಸ್ವಸಹಾಯ ಸಂಘಗಳ ಒಕ್ಕೂಟ ದ ಸಹಯೋಗದಲ್ಲಿ ವಿಶ್ವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಈ ವೇಳೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನ ಉದ್ಗಾಟಿಸಿ ಅವರು ಮಾತನಾಡಿದರು ಮಹಿಳೆಯರು ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳಲು ಸ್ವಸಹಾಯ ಸಂಘಗಳು ಅತ್ಯಂತ ಪ್ರಯೋಜನಕಾರಿಯಾಗಿದೆ. ಮಹಿಳೆಯರು ಹತ್ತಾರು ಸಂಘಗಳಲ್ಲಿ ಸದಸ್ಯರಾಗಬೇಡಿ ಒಂದು ಸಂಘದಲ್ಲಿ ಸದಸ್ಯರಾಗಿ ಸರ್ಕಾರಿ ಸೌಲಭ್ಯಗಳ ಜೊತೆಗೆ ಸಂಘ ಸಂಸ್ಥೆಗಳ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಬಲತೆಯಿಂದ ತನ್ನ ಕುಟುಂಬ ನಿರ್ವಹಣೆ ಜೊತೆಗೆ ಉತ್ತಮ ಸಾಧನೆ ಮಾಡಲು ಸಮಾಜದಲ್ಲಿ SHG ಮಹಿಳಾ ಸ್ವಸಹಾಯ ಸಂಘಗಳ ಪಾತ್ರ ಬಹುಮುಖ್ಯ .ಸ್ವಸಹಾಯ ಸಂಘಗಳು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಮಹಿಳೆಯರಿಗೆ ಸಾಮಾಜಿಕ ಬಂಡವಾಳವನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತವೆ .ಮಹಿಳೆಯರು ನಿಮ್ಮಲ್ಲಿ ಇರುವ ಕೌಶಲ್ಯಗಳ ಮೂಲಕ ವಿವಿಧ ಜನೋಪಯೋಗಿ ವಸ್ತುಗಳನ್ನು ಉತ್ಪಾದನೆ ಹೆಚ್ಚಿಸಿಕೊಂಡು ಆರ್ಥಿಕವಾಗಿ ಸದೃಡರಾಗುವಂತೆ ಸಲಹೇ ನೀಡಿದರು.
ಜ್ಞಾನ ತರಂಗಿಣಿ ವಿದ್ಯಾ ಸಂಸ್ಥೆ ಕಾರ್ಯಧರ್ಶಿ ಪಿ ಎಸ್ ಅರವಿಂದನ್ ಮಾತನಾಡಿ ಮಾರ್ಚ್ 8 ರಂದು ಪ್ರತಿ ವರ್ಷ ನಡೆಯುವ ವಿಶ್ವ ಮಹಿಳಾ ದಿನಾಚರಣೆ ಆಚರಣೆ ಮಾಡುತ್ತಿದ್ದು ಮಹಿಳೆಯರ ಸಂತೋಷ ಸಂಭ್ರಮ ಹಬ್ಬವಾಗಿದ್ದು ನಿಮ್ಮ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ.ಮಹಿಳೆಯರು ಇತ್ತೀಚಿನ ದಿನಮಾನಗಳಲ್ಲಿ ಪ್ರಗತಿಯತ್ತ ಸಾಗುತ್ತಿದ್ದು ಆರ್ಥಿಕ ನಿರ್ವಹಣೆಯ ಜೊತೆಗೆ ಮನೆಯ ಪ್ರತಿನಿಧಿಯಾಗಿ ಸಮಾಜದಲ್ಲಿ ತನ್ನದೆಯಾದ ಛಾಪು ಮೂಡಿಸುತ್ತಿದ್ದು ಹಕ್ಕುಭಾದ್ಯತೆಗಳುನ್ನು ಪ್ರಶ್ನತೀತಾವಾಗಿ ಪುರಷರಷ್ಟೆ ಸಮಾನಳು ಆದ್ದರಿಂದ ಹೆಣ್ಣುಮಕ್ಕಳ ಕಲ್ಯಾಣ ಕಾರ್ಯಗಳು ಮನೆಯಿಂದಲೇ ತನ್ನ ಪ್ರತಿಭೆ ಕೌಶಲ್ಯಗಳನ್ನು ಬಳಸಿ ಆದಾಯ ಗಳಿಸಿ ಆರ್ಥಿಕ ಸ್ವಾವಲಂಬಿ ಯಾಗಲು ಅನೇಕ ಸಂಘ ಸಂಸ್ಥೆಗಳ ಸಹಕಾರ ಅನನ್ಯವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಹಿಳೆಯರು ತಮ್ಮಗಳ ಆರೋಗ್ಯದತ್ತ ಹೆಚ್ಚಿನ ಗಮನಹರಿಸಬೇಕು ಕಿವಿ ಮಾತು ಹೇಳಿದರು.
ಪತ್ರಕರ್ತ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ ಅಂತ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂದು ಮಾರ್ಚ 8 ರಂದು 1975 ರಲ್ಲಿ ಕೆಲ ಸೀಮಿತ ಮಹಿಳಾ ಸಂಘಟನೆಯಿಂದ ಪ್ರಾರಂಭವಾದ ಅಚರಣೆ ಇಂದು ವಿಶ್ವಾದ್ಯಂತ ಮಹಿಳೆಯರ ಸಡಗರ ಸಂಭ್ರಮದಿಂದ ಆಚರಣೆಯಾಗುತ್ತಿದೆ . ಸಮಾಜದಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ .
. ಪ್ರಾಚೀನ ಕಾಲದಲ್ಲಿ ಮಹಿಳೆಯರು ಶೋಷಣೆಯಂತ ಅನೇಕ ಕಷ್ಟ ಸಂಕೋಲೆಗಳುನ್ನು ಅನುಭವಿಸಿ ಸ್ತ್ರೀ ಕೂಲವೆ ನಲುಗಿತ್ತು.ಕೇವಲ ಮಕ್ಕಳುನ್ನು ಹೇರುವ ಯಂತ್ರದಂತೆ ಪುರಷ ಪ್ರದಾನ ರಾಷ್ಟ್ರದಲ್ಲಿ ಲೈಂಗಿಕ ಕಾಮ ತೃಷೆಗಾಗಿ ಬಳಸಿಕೊಂಡು ಹಲವು ಹೆಣ್ಣು ಶೋಷಣೆ ಒಳಗಾಗಿದ್ದಳು . ಆದರೆ ದೇಶದಲ್ಲಿ ಸ್ವಾತಂತ್ರ್ಯ ಸಂವಿಧಾನ ಜಾರಿಗೆ ಬಂದ ನಂತರ ಮಹಿಳೆಯರು ತಮ್ಮ ಹಕ್ಕುಗಳುನ್ನು ಪ್ರತಿಪಾದಿಸಲು ಸಹಕಾರಿಯಾಗಿ ಮಹಿಳಾ ಸಾಧಕರು ಪುರುಷರಷ್ಟೆ ಸಮಾನ ಹಕ್ಕುಗಳಿಂದ ಅಂದಿನ ಶೋಷಣೆ ಮುಕ್ತವಾದರು ಸಹ ಪ್ರಸ್ತುತ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹತ್ಯೆಚಾರಗಳು ವರದಕ್ಷಿಣೆ ಪಿಡುಗುಗಳು ತೋಲಗದೆಯಿರುವುದು ಬೇಸರ ಸಂಗತಿ .ಮಹಿಳಾ ಸಂಘದ ಪ್ರತಿನಿಧಿಗಳು ಅನ್ಯಾಯದ ವಿರುದ್ದ ಪ್ರತಿಭಟಿಸುವ ಮನೋಬಾವನೆ ಬೆಳೆಸಿಕೊಳ್ಳಬೇಕು ಎಂದರು.
ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಅದ್ಯಕ್ಷೆ ಚೌಡಮ್ಮ ಸ್ವಸಹಾಯ ಸಂಘಗಳು ಬೆಳೆದು ಬಂದ ಹಾದಿಯನ್ನು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಕಾವೇರಿ ಸಂಸ್ಥೆ ಅಧ್ಯಕ್ಷರು ಬಸಮ್ಮ.ಕಾರ್ಯಧರ್ಶಿ ರವಿಕುಮಾರ್. ಜ್ಞಾನಜ್ಯೋತಿ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟ ಕಾರ್ಯದರ್ಶಿ ವಾಮದೇವ.
ವಿನಾಯಕ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟ ಕಾರ್ಯಧರ್ಶಿ ಜಿ ರಾಜು
.ಶರಣಬಸವೇಶ್ವರ ಮಹಿಳಪ್ರಯೋಜನಕಾರಿಯಾಗಿದೆ ಒಕ್ಕೂಟ ಜಿ ಸಿ ಬಾಲರಾಜ್ ಸೇರಿದಂತೆ ಮುಂತಾದವರು ಹಾಜರಿದ್ದರು.