Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಮಾರ್ಚ್ 26
ಕುಡಿಯುವ ನೀರಿಗಾಗಿ ಜನರ ಪರದಾಟ ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಕೆಲಹೊತ್ತು ಪ್ರತಿಭಟನೆ ನಡೆಸಿ ಪಿಡಿಓ ವಿರುದ್ದ ಘೋಷಣೆ ಕೂಗಿದರು
ಸುದ್ದಿ ಜಗಳೂರು
ತಾಲೂಕಿನ ಅಣಬೂರು ಗ್ರಾಮ ಪಂಚಾಯಿತಿ ಕೂಗಳತೆ ದೂರದಲ್ಲಿರುವ ಅಣಬೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಸರಿಸುಮಾರು ಎರಡು ಸಾವಿರ ಜನ ಸಂಖ್ಯೆಯಿದ್ದು ಕೇವಲ ಒಂದೆ ಒಂದು ಬೋರ್ ವೆಲ್ ನಿಂದ ಬರುವ ನೀಎಉ ಸಾಕಾಗುತ್ತಿಲ್ಲ ಜನರು ಕುಡಿಯುವ ನೀರಿಗಾಗಿ ಪ್ರತಿದಿನ ಸರದಿ ಸಾಲಿನಲ್ಲಿ ನಿಂತು ನೀರು ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೆ ಗ್ರಾಮದಲ್ಲಿ ಎರಡು ಬೋರ್ ವೆಲ್ ಇದ್ದು ಅದರಲ್ಲಿ ಒಂದು ಬೋರ್ ವೆಲ್ ಮಾತ್ರ ಚಾಲ್ತಿಯಲ್ಲಿದೆ ಇನ್ನೊಂದು ಬೋರ್ ವೆಲ್ ಉತ್ತಮವಾದ ನೀರು ಇದ್ದರು ಸಹ ಅದಕ್ಕೆ ಬೇಕಾದ ಆರ್ ಆರ್ ನಂಬರ್ ಪಡೆಯೆದೆ ವಿದ್ಯುತ್ ವ್ಯವಸ್ಥೆ ಮಾಡದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಪ್ರತಿಭಟನೆಯಲ್ಲಿ ಕರುನಾಡ ನವ ನಿರ್ಮಾಣ ವೇಧಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಜೆ ಎಚ್ ಎಮ್ ಹೊಳೆ ಆಕ್ರೋಶ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಸಣ್ಣ ಬಾಲಪ್ಪ ನಮ್ಮ ಗ್ರಾಮದಲ್ಲಿ ಇರುವ ಕೊಳವೆಬಾವಿಯಲ್ಲಿ ಬರುವಂತಹ ನೀರು ತುಂಬ ಕಲುಷಿತಗೊಂಡಿದೆ ನಮ್ಮ ಗ್ರಾಮದಿಂದ ಹೊರಹೊಗುವ ಚರಂಡಿ ನೀರು ಕೊಳವೆಬಾವಿ ಸೇರಿ ನೀರು ಮಣ್ಣು ಮಿಶ್ರೀತವಾಗಿ ಹೋರಬರುತ್ತಿದೆ ಈ ನೀರು ಕುಡಿಯುವುದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾದ್ಯತೆ ಇದೆ ಗ್ರಾಮದಲ್ಲಿ ಈಗಾಗಲೆ ಶುದ್ದ ಕುಡಿಯುವ ನೀರಿನ ಘಟಕ ಇದ್ದು ಅದು ದುರಸ್ತಿಗೆ ಬಂದು ಒಂದು ತಿಂಗಳು ಕಳೆದರು ಸಹ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಸ್ಯರುಗಳು ಯಾವುದೆ ಕ್ರಮಕೈಗೊಂಡಿಲ್ಲ ಇನ್ನಾದರು ಕುಡಿಯಲು ಶುದ್ದ ನೀರು ಒದಗಿಸದಿದ್ದರೆ ತಾಲೂಕು ಪಂಚಾಯಿತಿಯ ಮುಂದೆ ಧರಣಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮುದಿಯಪ್ಪ ಗುಡ್ಡಪ್ಪ ವಿ ಎಸ್ ಎಸ್ ಎನ್ ಸದಸ್ಯ ಗುಡ್ಡಪ್ಪ ಹೆಚ್ ಜಿ ಸಣ್ಣಕಾಟಪ್ಪ ಸಣ್ಣಬಾಲಪ್ಪ ಬಾಲಪ್ಪ ಈರಮ್ಮ ಕಾಟಮ್ಮ ನಾಗೇಂದ್ರಪ್ಪ ಬಾಲರಾಜ್ ಕುಮಾರ್ ಚೇತನ್ ಕಾಂತರಾಜ್ ಮಂಜುನಾಥ ನಾಗರಾಜ್ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು