ಮಾರ್ಚ್ 24 ರಂದು ತಾಲ್ಲೂಕಿನ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರಿ ನೌಕರರ ವಿಚಾರ ಸಂಕೀರಣ ಸಮಾರಂಭ
ಜಗಳೂರು : ತಾಲ್ಲೂಕಿನ ಇತಿಹಾಸದಲ್ಲಿ ಮೊದಲಬಾರಿಗೆ ಸರ್ಕಾರಿ ನೌಕರರ ವಿಚಾರ ಸಂಕೀರಣವನ್ನ ಇದೇ 24 ರಂದು ಪಟ್ಟಣ ತರಳುಬಾಳು ಸಮುದಾಯ ಭವನದಲ್ಲಿ ನೆಡೆಸ ಲಾಗುವುದು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಆರ್.ಚಂದ್ರಪ್ಪ ಹೇಳಿದರು
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತ ನಾಡಿದರು ಅಂದು ನೆಡೆಯಲಿರುವ ವಿಚಾರ ಸಂಕೀರಣ ದಲ್ಲಿ ನಾಲ್ಕು ಕಾರ್ಯಕ್ರಮಗಳನ್ನ ನೆಡೆಸಲಾಗುವುದು ಕ್ಷೇತ್ರದ ಶಾಸಕರು ಎಸ್.ವಿ.ರಾಮಚಂದ್ರ ಅವರು ಸರ್ಕಾರಿ ನೌಕರರ ಸಂಘದ ವಾಣಿಜ್ಯ ಮಳಿಗೆಗಳ ಶಂಕುಸ್ಥಾಪನೆ ನೆರೆ ವೇರಿಸುವರು
ಬೆಸ್ಕಾ ವ್ಯವಸ್ಥಾಪಕ ನಿರ್ದೇಶಕರು ಮಹಾಂತೇಶ್ ಬೀಳಗಿ ಅವರು ಸರ್ಕಾರಿ ನೌಕರರ ಕುರಿತು ವಿಶೇಷ ಉಪನ್ಯಾಸ ನೀಡುವರು ಇದರ ಜೊತೆಗೆ ಮಹಿಳಾ ದಿನಾಚರಣೆ , ಉತ್ತಮ ಸೇವೆ ಮಾಡಿದ ನೌಕರರಿಗೆ ಸೇವಾ ರತ್ನ ಪುರಸ್ಕಾರ ಪ್ರಧಾನ ಸಮಾರಂಭ ಸಹ ನೆಡೆಯಲಿದೆ ಎಂದರು
ಈ ಹಿಂದೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು ತಾಂತ್ರಿಕ ಕಾರಣಗಳಿಂದ ಅನುದಾನ ವಾಪಾಸಾಗಿದೆ ಮುಂದಿನ ದಿನಗಳಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಜನಪ್ರತಿನಿಧಿಗಳ ಗಮನ ಸೆಳೆಯಲಾಗು ವುದು ಎಂದು ತಿಳಿಸಿದರು
ಈ ಕಾರ್ಯಕ್ರಮಕ್ಕೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಜಿಲ್ಲಾಧಿಕಾರಿ ಗಳು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗು ಸರ್ವ ನೌಕರರು ಆಗಮಿಸಲಿದ್ದಾರೆ ನೌಕರರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಸಿ.ಬಿ.ನಾಗರಾಜ್ , ರಾಜ್ಯ ಪರಿಷತ್ ಸದಸ್ಯ ಡಿ.ಎಸ್.ಬಣಕಾರ್ ,ಮಾಜಿ ಕಾರ್ಯದರ್ಶಿ ಗಳಾದ ಲಕ್ಚ್ಮಿಕಾಂತ್ , ವೀರೇಶ್ , ಪಧಾದಿಕಾರಿಗಳಾದ ಗೋಡೆ ಬಸವರಾಜ್ , ಕಲ್ಲೀನಾಥ್ ಅನಿಲ್ ಕುಮಾರ್.ರುದ್ರೇಶ್. ಉಮೇಶ್. ಸೇರಿದಂತೆ ಇತರರು ಇದ್ದರು