ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023 ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ 1,56,944 ಮೌಲ್ಯದ ಅಕ್ರಮ ಮಧ್ಯ, ಬಿಯರ್ ಹಾಗೂ ದ್ವಿಚಕ್ರ ವಾಹನವನ್ನು ಅಬಕಾರಿ ಇಲಾಖೆಯಿಂದ ಜಪ್ತು ಪಡಿಸಿಕೊಂಡು 108 ಮೊಕದ್ದಮೆಗಳನ್ನು ದಾಖಲಿಸಿಕೊಳ್ಳಲಾಗಿದೆ.
ಚುನಾವಣಾ ಹಿನ್ನಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿ ಕೆಗಳನ್ನು ತಡೆಗಟ್ಟುವ ಸಲುವಾಗಿ ಜಾರಿ ಮತ್ತು ತನಿಖಾ ಕಾರ್ಯ ಗಳನ್ನು ಚುರುಕುಗೊಳಿಸಿ ದಾಳಿಯನ್ನು ನಡೆಸಿದ್ದು, ಅದರಂತೆ ಮಾರ್ಚ್ 1 ರಿಂದ 20 ರವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ 186.090 ಲೀ. ಮದ್ಯ, 63.160.ಲೀ. ಬಿಯರ್ ಹಾಗೂ 2 ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ರೂ. 1,56,944 ಮೊತ್ತದ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದ್ದು, ಮದ್ಯ ಸಾಗಾಣಿಕೆ/ದಾಸ್ತಾನು ಕುರಿತಂತೆ 13 ಘೋರ ಮೊಕದ್ದಮೆಗಳು, ಸಾರ್ವಜನಿಕ ಸ್ಥಳಗಳಲ್ಲಿ ವiದ್ಯ ಮಾರಾಟ ಕುರಿತು 65 15(ಎ) ಮೊಕದ್ದಮೆಗಳು ಹಾಗೂ ಮದ್ಯದಂಗಡಿಗಳಲ್ಲಿನ ಆಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಶಿವಪ್ರಸಾದ್ ತಿಳಿಸಿದ್ದಾರೆ.