ಶುಕ್ರದೆಸೆ ನ್ಯೂಸ್ : ಜಗಳೂರು ತಾಲ್ಲೂಕಿನ ಮಲ್ಲಾಪುರ ಗ್ರಾಮದ ವ್ಯಕ್ತಿಯೊಬ್ಬ ಯುಗಾದಿ ಹಬ್ಬಕ್ಕೆ ಇಸ್ಪೀಟ್ ಜೂಜು ಆಡಲು ಹಣ ಕೊಡುವಂತೆ ಪೀಡಿಸಿ ಪತ್ನಿಯನ್ನೆ ಕೊಲಗೈದ ಪಾಪಿ ಪತಿರಾಯ. ತಾಲ್ಲೂಕಿನ ಮಲ್ಲಾಪುರ ಗ್ರಾಮದ ತ್ರಿವೇಣಿ ಎಂಬುವ ಗೃಹಣಿಯನ್ನ ಬುಧವಾರ ರಾತ್ರಿ ವೇಲ್ ನಿಂದ ನೇಣು ಹಾಕಿ ಕೊಲೆಗೈದ ಪತಿರಾಯ ಯುಗಾದಿ ಹಬ್ಬದಲ್ಲಿ ಇಸ್ಪೀಟ್ ಆಡಲು ಹಣ ನೀಡದಿದ್ದಕ್ಕೆ ತನ್ನ ಹೆಂಡತಿ ತ್ರಿವೇಣಿಯನ್ನೆ ಗಂಡ ಯನ್ನಪ್ಪ ಆಕೆಯ ವೇಲ್ ಬಳಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ವಾಹನ ಚಾಲಕನಾಗಿದ್ದ ಯನ್ನಪ್ಪ ಎಂದಿನಂತೆ ಮದ್ಯಸೇವಿಸಿ ಮನೆಗೆ ಬಂದಿದ್ದ ಈತ ತನ್ನ ಹೆಂಡತಿ ತ್ರಿವೇಣಿಗೆ ಇಸ್ಪೀಟ್ ಆಡಲು ಹಣ ಕೊಡುವಂತೆ ಪೀಡಿಸಿದ್ದಾನೆ ನನ್ನ ಬಳಿ ಹಣವಿಲ್ಲ ಎಲ್ಲಿಂದ ತರಲಿ ಹಣ ಎಂದ ಹೇಳಿದ ಹೆಂಡತಿ ಮೇಲೆ ಜಗಳ ಮಾಡಿ ವೇಲ್ ನಿಂದಲೆ ಕೊಲೆ ಮಾಡಿ ಅಂತ್ಯವಾಡಿದ ನತದೃಷ್ಠ ಪಾಪಿ ಗಂಡ .ಯನ್ನಪ್ಪ ಇವನು ನಿತ್ಯ ತವರು ಮನೆಗೆ ಹೋಗಿ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದ ಇತ್ತೀಚಿಗೆ ತ್ರಿವೇಣಿ ಅವರ ತಾಯಿ ಮನೆ ಚಳಕೆರೆ ತಾಲ್ಲೂಕಿನ ಜೋಗಿಹಟ್ಟಿಗೆ ಹೋಗಿ ತವರು ಮನೆಯವರು ಸಾಲ ಸೂಲ ಮಾಡಿ ಒಂದು ಲಕ್ಷ ಹಣ ತಂದುಕೊಟ್ಟಿದ್ದಳು ಸಾಲದು ಎಂದು ಪುನ ಪೀಡಿಸುತ್ತಿದ್ದ ಪುನ ಹೆಂಡತಿಯನ್ನೆ ಹನುಮಾನಸ್ಪದದಿಂದ ನೋಡುತ್ತಿದ್ದ ಎಂದು ತ್ರಿವೇಣಿ ತಾಯಿ ಶಾಂತಮ್ಮರವರು ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಒಟ್ಟಾರೆ ಎಲ್ಲಾರಂತೆ ಯುಗಾದಿ ಹಬ್ಬದಲ್ಲಿ ಸಂಭ್ರಮಿಸಬೇಕಾದ ಗೃಹಿಣಿ ಮಸಣ ಸೇರಿದಳು. ಇದೆಂತ ಘೋರ ಅನ್ಯಾಯ ಇವರಿಗೆ 5 ವರ್ಷದ ಮುಗು ಕೂಡ ಇದ್ದು ಮಗುವಿನ ಗೋಳು ಮತ್ತು ಸಂಬಂಧಿಕರ ಗೋಳಿನ ರೋಧನ ಮುಗಿಲು ಮುಟ್ಟುವಂತಿತ್ತು.ನನ್ನ ಮಗಳ ಸಾವಿಗೆ ಕಾರಣರಾದ ಯನ್ನಪ್ಪ ಹಾಗೂ ಅವರ ಕುಟುಂಬದವರೆ ಕೊಲೆಗೆ ಕಾರಣರಾಗಿದ್ದಾರೆ ಎಂದು ಗೃಹಿಣಿ ತ್ರಿವೇಣಿ ತಾಯಿ ಶಾಂತಮ್ಮ ದೂರು ದಾಖಲಿಸಿದ್ದಾರೆ .ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಇಲಾಖೆ ಸಿಪಿಐ .ಶ್ರೀನಿವಾಸ್ ರಾವ್ ಹಾಗೂ ಪಿ ಎಸ್ ಐ. ಎಸ್ ಡಿ ಸಾಗರ್ ರವರು ಆರೋಪಿ ಯನ್ನಪ್ಪನನ್ನು ಹಾಗೂ ಅವರ ತಂದೆ ತಾಯಿಯನ್ನು ಬಂಧಿಸಿ ತನಿಖೆ ಪ್ರಾಂಭಿಸಿದ್ದಾರೆ ಎಂದು ತಿಳಿದು ಬಂದಿದೆ.