• ಜಗಳೂರು ತಾಲ್ಲೂಕಿನ ದೋಣಿಹಳ್ಳಿ‌ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ ಮುಖ್ಯಮಂತ್ರಿಗಳಿಂದ ಅಭಿನಂದನ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗಿದೆ. ಜಗಳೂರು ತಾಲ್ಲೂಕಿನ ದೋಣಿಹಳ್ಳಿ‌ ಗ್ರಾಮ ಪಂಚಾಯತಿಗೆ 2021_2022 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ದೋಣಿಹಳ್ಳಿ‌ ಗ್ರಾಮ ಪಂಚಾಯಿತಿ ಆಯ್ಕೆ ಮಾಡಲಾಗಿತ್ತು. ಇಂದು ನಡೆದ ಬೆಂಗಳೂರು ಆರಮನೆ ಮೈದಾನದಲ್ಲಿ ರಾಜ್ಯದ 176 ಗ್ರಾಮ ಪಂಚಾಯತಿ ಗಾಂಧಿ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಂದ ರಾಜ್ಯದ ನಾನಾ ಜಿಲ್ಲೆಯ ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ಗಾಂಧಿ ಪುರಸ್ಕಾರ ಅಭಿನಂದನೆ ಭಾಜನರಾಗಿ ಗೌರವ ಸಮರ್ಪಣೆ ಸ್ವಿಕರಿಸಿದರು. .ಜಗಳೂರು ತಾಲ್ಲೂಕಿನ ದೋಣಿಹಳ್ಳಿ‌ ಗ್ರಾಪಂ ಅಧ್ಯಕ್ಷೆ ಶ್ವೇತ ಬಸವರಾಜ ರವರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಾಂಧಿ ಗ್ರಾಮ ಪುರಸ್ಕಾರದ ಅಭಿನಂದನ ಪ್ರಶಸ್ತಿ ಫಲಕ ಸ್ವಿಕರಿಸಿದರು. ದೋಣಿಹಳ್ಳಿ ಗ್ರಾಪಂ ಅದ್ಯಕ್ಷೆ ಶ್ವೇತ ರವರ ಅಧ್ಯಕ್ಷತೆಯಲ್ಲಿ ಹಾಗೂ ಪಿಡಿಓ ಹನುಮಂತಪ್ಪ ಮತ್ತು ಪಂಚಾಯಿತಿ ಉಪಾಧ್ಯಕ್ಷೆ ಬಸವ ರಾಜೇಶ್ವರಿ ಹಾಗೂ ಸರ್ವ ಸಿಬ್ಬಂಧಿಗಳ ಸಹಕಾರದಿಂದ ಗ್ರಾಮದಲ್ಲಿ ಚರಂಡಿ ಸ್ವಚತೆ ಸೇರಿದಂತೆ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಜನ ವಸತಿ ಪ್ರದೇಶಗಳಲ್ಲಿ ಉತ್ತಮ ಗ್ರಾಪಂ ಸೇವಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಅಗತ್ಯ ಸೇವೆ ನೀಡಿರುವ ಹಿನ್ನಲೆಯಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನರಾಗಿ ಇಂದು ಬೆಂಗಳೂರು ಆರಮನೆ ಮೈದಾನದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಅಭಿನಂಧನ ಪ್ರಶಸ್ತಿ ಫಲಕ ಗೌರವ ಸಮಪರ್ಣೆ ಸ್ವಿಕರಿಸಿದ್ದಾರೆ.ನಮ್ಮ ಸೇವೆಯನ್ನು ಗುರುತಿಸಿದ ಸರ್ಕಾರ ನಮಗೆ ಮಹಾತ್ಮ ಗಾಂಧಿಜಿ ಹೆಸರಿನ ಪುರಸ್ಕಾರ ಅತ್ಯಂತ ಸಂತೋಷ ತಂದಿದೆ ಎಂದು ಗ್ರಾಪಂ ಅಧ್ಯಕ್ಷೆ ಶ್ವೇತರವರು ಮನದಾಳದ ಮಾತು ಬಿಚ್ಚಿಟ್ಟರು .ಈ ಸಂದರ್ಭದಲ್ಲಿ ಗ್ರಾಪಂ ಅದ್ಯಕ್ಷೆ ಶ್ವೇತರವರ ಪತಿ ಹಾಗೂ ಕಾಂಗ್ರೆಸ್ ಮುಖಂಡ ಮರೆನಹಳ್ಳಿ ಬಸವರಾಜ್.ಗ್ರಾಪಂ ಉಪಾಧ್ಯಕ್ಷೆ ಬಸವರಾಜೇಶ್ವರಿ .ಗ್ರಾಪಂ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ. ಗ್ರಾಪಂ ಸದಸ್ಯರಾದ ಹೊನ್ನಮರಡಿ ಜೆಯ್ಯಣ್ಣ. ರೋಜಮ್ಮ.ಮುಖಂಡರಾದ ಮೊಹನ್ ಕುಮಾರ್.ಸದಸ್ಯರಾದ ಬಂಗಾರಿಗುಡ್ಡದ ಹಚ್ಚಮ್ಮ.ಗುಂಡಪ್ಪ.ಪಂಚಾಯತಿ ಸಿಬ್ಬಂದಿ ಕಾರ್ಯದರ್ಶಿ ಉಮೇಶ್. ಕರ ವಸೂಲಿಗಾರರಾದ ಮೆಹಬೂಬ್. ಮುಖಮಡರಾದ ರಂಗಣ್ಣ.ಗುಂಡಣ್ಣ ಸೇರಿದಂತೆ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!