ದಿ 27 ರಂದು ನಾಳೆ ಬೆಳಿಗ್ಗೆ ಜಗಳೂರು ಪಟ್ಟಣಕ್ಕೆ ಮಾಜಿ ಸಚಿವ ಹೆಚ್ ಆಂಜನೇಯ ಆಗಮಿಸಲಿದ್ದಾರೆ ಕಾಂಗ್ರೆಸ್ ಲೋಕಸಭಾ ಚುನಾವಣೆ ಅಭ್ಯರ್ಥಿ ಪ್ರಭಾಮಲ್ಲಿಕಾರ್ಜನ್ ರವರ ಪರವಾಗಿ ಮತಯಾಚನೆ ಕುರಿತು ಸಭೆ ನಡೆಸಲಿದ್ದಾರೆ ಎಂದು ಶಾಸಕ ಬಿ ದೇವೇಂದ್ರಪ್ಪ ತಿಳಿಸಿದ್ದಾರೆ.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಏಪ್ರಿಲ್ 26
ಕಾಂಗ್ರೆಸ್ ಮುಖಂಡ ಸುದೀರಣ್ಣರವರ ನಿವಾಸದ ಆವರಣದಲ್ಲಿ ಬೆಳಿಗ್ಗೆ 11 ಗಂಟೆಗೆ ಮಾಜಿ ಸಚಿವ ಹೆಚ್ ಆಂಜನೇಯ ಆಗಮಿಸಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ದಲಿತ ಬಂಧುಗಳು ಅತ್ಯಂತ ಹೆಚ್ಚಿನ ಮತ ನೀಡುವಂತೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವರು ದಾವಣಗೆರೆ ಲೋಕಸಭಾ ಚುನಾವಣೆ ಅಭ್ಯರ್ಥಿ ಪ್ರಭಾಮಲ್ಲಿಕಾರ್ಜನ್ ರವರ ಗೆಲುವಿಗೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿಂದೂಳಿದ ದಲಿತ ಸಮುದಾಯದ ನಾಯಕರು ಶ್ರಮಿಸುವಂತೆ ಕರೆ ನೀಡಲಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ನಾಳೆ ನಡೆಯುವಂತ ಸಭೆಗೆ ನಮ್ಮ ಕಾಂಗ್ರೆಸ್ ಎಸ್ಸಿ ಘಟಕದ ಪದಾಧಿಕಾರಿಗಳು ಹಾಗೂ ದಲಿತ ಸಮುದಾಯದ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಹಾಜರಾಗಿ ಹಿರಿಯರು ಮಾಜಿ ಸಚಿವರಾದ ಹೆಚ್ ಆಂಜನೇಯ ರವರ ಮಾರ್ಗದರ್ಶನದ ಮೂಲಕ ಲೋಕಸಭಾ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ರವರ ಗೆಲುವಿಗೆ ಶ್ರಮಿಸಲು ಸಲಹೆ ಸೂಚನೆ ನೀಡುವರು ಎಂದು ಕಾಂಗ್ರೆಸ್ ಎಸ್ ಸಿ ಘಟಕದ ತಾಲ್ಲೂಕು ಅಧ್ಯಕ್ಷ ಬಿ ಮಹೇಶ್ ತಿಳಿಸಿದ್ದಾರೆ.
ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಬಂಧುಗಳು ಭಾಗವಹಿಸಿ ಸಭೆ ಯಶಸ್ವಿ ಮಾಡುವಂತೆ ಕಾರ್ಮಿಕ ಸಂಘಟನೆ ಕಾರ್ಯಧರ್ಶಿ ಗುತ್ತಿದುರ್ಗ ರುದ್ರೇಶ್ ಮನವಿ ಮಾಡಿಕೊಂಡಿದ್ದಾರೆ.