filter: 0; fileterIntensity: 0.0; filterMask: 0; captureOrientation: 90; module: photo; hw-remosaic: false; touch: (-1.0, -1.0); modeInfo: ; sceneMode: 32768; cct_value: 5705; AI_Scene: (-1, -1); aec_lux: 129.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 42;

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಏಪ್ರಿಲ್ 24

ದಾವಣಗೆರೆ ಕ್ಷೇತ್ರದಲ್ಲಿ ಬದಲಾವಣೆ ರಾಜಕೀಯ ಪರ್ವ ಸೃಷ್ಠಿಯಾಗಲಿದೆ ನನ್ನ ಗೆಲುವು ಖಚಿತ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ದ ಪಕ್ಷತೇರ ಅಭ್ಯರ್ಥಿ ಜಿ.ಬಿ ವಿನಯಕುಮಾರ್ ವಿಶ್ವಾಸ.

ರಾಜ್ಯದ ಮುಖಮಂತ್ರಿಗಳೆ ಇಲ್ಲಿ ಬಂದು ಪ್ರಚಾರ ಮಾಡಿ ಕಾಂಗ್ರೆಸ್ ಗೆ ಮತ‌ ನೀಡಿ ಎಂದರು ಮತ ಹಾಕಬೇಡಿ ನಿಮ್ಮ‌ ಅಮೂಲ್ಯವಾದ ಮತ ಸ್ವಾಭಿಮಾನಿ ಪಕ್ಷತೇರ ಸಿಲಿಂಡರ್ ಗುರುತಿಗೆ ಮತ ನೀಡುವಂತೆ ಪಟ್ಟಣದ ತರಳಬಾಳು ಸಮುದಾಯ ಭವನದಲ್ಲಿ ನಡೆದ ಬೂತ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ರವರ ಮನೆಗೆ ಎಲ್ಲಾ ಅಧಿಕಾರ ಸೀಮಿತವಾಗಿದೆ . ರಾಷ್ಟ್ರೀಯ ಪಕ್ಷಗಳ ಟಿಕೆಟ್
ಬಲಿಷ್ಠ ಕುಟುಂಬಗಳ ಪಾಲಾಗಿ ಜಿಲ್ಲಾ ರಾಜಕಾರಣ ಒಂದು ವರ್ಗದ ಕುಟುಂಬಗಳಿಗೆ ಸೀಮಿತವಾಗಿದೆ .ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿರಂಕುಶ ಆಡಳಿತಕ್ಕೆ ಸಾಕ್ಷಿಯಾಗಿದೆ.ಈ ಭ್ರಷ್ಟ ವ್ಯವಸ್ಥೆ ವಿರುದ್ದ ಜನಜಾಗೃತಿ ಅಗತ್ಯವಾಗಿದೆ . ಸುಮಾರು 30 ವರ್ಷಗಳಿಂದ ಜಿಲ್ಲೆಯ ಮತದಾರರುನ್ನು ಶೋಷಣೆಗೋಳಪಡಿಸಿ ತಮ್ಮ ಸ್ವಾರ್ಥ ರಾಜಕಾರಣ ಲಾಲಸೆಗೆ ತಕ್ಕಂತೆ ಸ್ವ ಅಭಿವೃದ್ಧಿ ಮಾಡಿಕೊಂಡು ಜಿಲ್ಲೆಯಲ್ಲಿ ಯಾವುದೇ ಗುರುತರವಾದ ಕೆಲಸ ಮಾಡಿರುವುದಿಲ್ಲ ಎಂದು ಆರೋಪಿಸಿದರು.ಆದ್ದರಿಂದ ಸ್ವಾಭಿಮಾನಿ ಪಕ್ಷತೇರ ಅಭ್ಯರ್ಥಿ ನಮ್ಮ ಸಿಲಿಂಡರ್ ಗುರುತಿಗೆ ಮತ ಹಾಕಿ ಗೆಲುವು ಸಾಧಿಸಿದರೆ .ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ. ಆರೋಗ್ಯ ದುಡಿಯುವ ಕೈಗಳಿಗೆ. ಕೈಗಾರಿಕರಣ.ಐ ಎ. ಎಸ್.ಸಂಸ್ಥೆಗಳಂತ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಿ
ಸಮಾಜದಲ್ಲಿ ಶೋಷಣೆ ಒಳಾಗದವರ ಪರವಾಗಿ ನಿಲ್ಲುವೆ ದ್ವನಿ ಇಲ್ಲದವರ.ಶೋಷಿತರ ಪರವಾಗಿ ನಿಲ್ಲುವೆ . ಡಾ ಬಿ ಆರ್ ಅಂಬೇಡ್ಕರ್ ರವರ ಮೂಲ ಆಶಯಗಳನ್ನು ಹಿಡೇರಿಸುವೆ. ರಾಜಕೀಯ ಅಧಿಕಾರವೆ ಜನರ ಉದ್ದಾರ ಶೋಷಣೆ ವಿರುದ್ದ ಬಂಡೆದ್ದು ಪ್ರತಿ ಬಡವರಿಗೆ ಶಿಕ್ಷಣ ಜನಸಾಮಾನ್ಯರ ಸೇವೆ ಮಾಡಲು ನನ್ನ ಮೂಲ ಉದ್ದೇಶ ಎಂದರು.

ಯಾದವ ಸಮುದಾಯದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿದರು.

ಸ್ವಾಭಿಮಾನಿ ಪಕ್ಷತೇರ ಅಭ್ಯರ್ಥಿ ಜಿ ಬಿ ವಿನಯಕುಮಾರ್ ಮುಂದೆ ಬಿ ಜೆ ಪಿ .ಕಾಂಗ್ರೆಸ್ ಪಕ್ಷಗಳಿಗೆ ತಳಮಳ ಶುರುವಾಗಿದೆ ಬರುವ ಮೆ 7 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜಿ.ಬಿ ವಿನಯಕುಮಾರ್ ರವರಿಗೆ ಅತ್ಯಂತ ಬಹುಮತಗಳಿಂದ ಅವರ ಗೆಲುವಿಗೆ ಸಹಕರಿಸಿ ಮತ ನೀಡುವಂತೆ ಮನವಿ ಮಾಡಿಕೊಂಡರು. ಅವರ ಸ್ವಾಭಿಮಾನಕ್ಕೆ ದಕ್ಕೆಯಾಗದಂತೆ ವಿನಯಕುಮಾರ್ ಅಭಿಮಾನಿಗಳು ಚುನಾವಣೆಯಲ್ಲಿ ಪ್ರಮಾಣಿಕವಾಗಿ ಸಿಲಿಂಡರ್ ಗುರುತಿಗೆ ಮತ ನೀಡಬೇಕೆಂದು ಮನವಿ ಮಾಡಿಕೊಂಡರು.

ನಾಯಕ ಸಮಾಜದ ಯುವ ಮುಖಂಡ ಪ್ರಸನ್ನಕುಮಾರ್ ಮಾತನಾಡಿದರು ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಜಿ ಬಿ ವಿನಯಕುಮಾರ್ ರವರ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ವಂದಿಸುವ ಯುವ ನಾಯಕನಿಗೆ ಮತ ನೀಡಿ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದರು ಸಹ ದಾವಣಗೆರೆ ಜಿಲ್ಲೆ ರಾಜಕಾರಣದಲ್ಲಿ ಪ್ರಜಾಪ್ರಭುತ್ವ ನಶಿಸಿ ರಾಜಪ್ರಭುತ್ವದ ರಾಜಕಾರಣಕ್ಕೆ ಸೀಮಿತವಾಗಿ ಪಟ್ಟಭದ್ರ ಕುಟುಂಬಗಳೆರಡರ ಪಾಲಾಗಿದೆ ಈ ವ್ಯವಸ್ಥೆಯನ್ನ ಬುಡಮೇಲು ಮಾಡಿ ಈ ಬಾರಿ ಸಾಮಾನ್ಯ ಕುಟುಂಬದಿಂದ ಬಂದ ಪಕ್ಷತೇರ ಅಭ್ಯರ್ಥಿ ಜಿ ಬಿ. ವಿನಯಕುಮಾರ್ ರವರ ಗೆಲುವಿಗೆ ತಮ್ಮ ಅಮೂಲ್ಯವಾದ ಮತ ನೀಡುವಂತೆ ಹೇಳಿದರು.
ಉಳ್ಳವರು ಮತ್ತು ಬಡವರ ಮದ್ಯದಲ್ಲಿ ನಡೆಯುವಂತ ಬರುವ ಲೋಕಸಭಾ ಚುನಾವಣೆಯಲ್ಲಿ ಧರ್ಮಯುದ್ದ ಎಂದರು.

ನಾಯಕ ಸಮಾಜದ ಉಪಾಧ್ಯಕ್ಷರಾದ ವಕೀಲರಾದ ಮರೆನಹಳ್ಳಿ ಬಸವರಾಜ ಮಾತನಾಡಿ ಜಗಳೂರು ತಾಲೂಕಿಗೆ ಸಂಸದ ಜಿ ಎಂ ಸಿದ್ದೇಶ್ವರ ರವರ ಕೊಡುಗೆ ಶೊನ್ಯ ಎಂದು ಆರೋಪಿಸಿದರು

ಮುಖಂಡ ಮಹಾಲಿಂಗಪ್ಪ ಮಾತನಾಡಿ ಜಿ .ಬಿ ವಿನಯಕುಮಾರ್ ರವರನ್ನ ಬೆಂಬಲಿಸೊಣ ಎಂದರು

.ಪಟ್ಟಣದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತದವರೆಗೂ ರೋಡ ಶೋ ನಡೆಸಿದರು

ಈ ಸಂದರ್ಭದಲ್ಲಿ
ಮರೆನಹಳ್ಳಿ ನಾಗರಾಜ್‌ ಮುಖಂಡರಾದ ನಜೀರ್ ಆಹಮದ್ .ವಕೀಲರಾದ ಮರೆನಹಳ್ಳಿ ಬಸವರಾಜ.ಚಂದ್ರಣ್ಣ.ವಕೀಲರಾದ ರಂಗಸ್ವಾಮಿ.ಹೊನ್ನಮರಡಿ ಜೈಯ್ಯಣ್ಣ.ಎಪಿ ಎಂ ಸಿ ಮಾಜಿ ಉಪಾದ್ಯಕ್ಷ ಗುರುಮೂರ್ತಿ.ಕುಬೇರಪ್ಪ ವ್ಯಾಸಗೊಂಡನಹಳ್ಳಿ.ಸೇರಿದಂತೆ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!