ಲೋಕಸಭಾ ಚುನಾವಣೆ ಸಜ್ಜನರ ಮತ್ತು ದುರ್ಜನರ ನಡುವೆ ನಡೆಯುವಂತ ಯುದ್ದ ಸಂವಿಧಾನ ಕಾಪಾಡುವಂತ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಮಾಜಿ ಸಚಿವ ಹೆಚ್ ಆಂಜನೇಯ ಪ್ರಭಾ ಮಲ್ಲಿಕಾರ್ಜುನ ಪರ ಮತ ಬೇಟೆ
ತಾಲೂಕಿನಲ್ಲಿ ಡಾ.ಪ್ರಭಾಮಲ್ಲಿಕಾರ್ಜುನ್ ಗೆ 30 ಸಾವಿರ ಅಂತರದ ಮತನೀಡಿ:ಎಚ್.ಆಂಜನೇಯ ಕರೆ ನೀಡಿದರು
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಏಪ್ರಿಲ್ 27
ಜಗಳೂರು ಸುದ್ದಿ:”
ಪಟ್ಟಣದ ಸುಧೀರ್ ರೆಡ್ಡಿ ನಿವಾಸದ ಆವರಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಕರೆಯಲಾಗಿದ್ದ ಮಾದಿಗ ಸಮಾಜ ಮುಖಂಡರುಗಳ ಸಭೆಯನ್ನು ಉದ್ಘಾಟಿಸಿ ದಾವಣಗೆರೆ ಲೋಕಸಭಾ ಚುನಾವಣೆ ಅಭ್ಯರ್ಥಿ ಪರ ಮತಯಾಚನೆ ಸಭೆ ಕುರಿತು ಮಾತನಾಡಿದರು.
ದೇಶದ ಪ್ರಸ್ತುತ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಕೊಮುವಾದಿ ಸರ್ಕಾರ ದೇಶದಲ್ಲಿ ಅರಾಜಕತೆ ಸೃಷ್ಠಿಸಿ ಪುನ ಸ್ವಾತಂತ್ರ್ಯ ಪೂರ್ವದಲ್ಲಿಯಿದ್ದಂತ ಗೊಡ್ಡು ಆಚರಣೆಗಳನ್ನು ಜಾರಿಗೆ ತಂದು ಸಂವಿಧಾನ ವಿರೋಧಿ ಹೇಳಿಕೆಯಿಂದ ಈ ದೇಶದ ಜನರುನ್ನು ದಿಕ್ಕುತಪ್ಪಿಸುತ್ತಿದ್ದಾರೆ.ಈ ಲೋಕಸಭಾ ಚುನಾವಣೆ ಸಜ್ಜರ ಮತ್ತು ದುರ್ಜನರ ನಡುವೆ ನಡೆಯುವ ಯುದ್ದ ಯುದ್ದದಲ್ಲಿ ನಾವೆ ಜಯಗಳಿಸುವುದು ಖಚಿತ
ಪ್ರಜಾಪ್ರಭುತ್ವ ಸಂವಿಧಾನ ಉಳಿವಿಗೆ ಕಾಂಗ್ರೆಸ್ ಪಕ್ಷ ಅನಿವಾರ್ಯ ಹಿಂದೂತ್ವದ ಹೆಸರಿನಲ್ಲಿ ಮತ ಕೇಳಲು ಹೊರಟಿರುವ ಬಿಜೆಪಿಯವರಿಗೆ ನೈತಿಕತೆಯಿಲ್ಲ ನಾವುಗಳು ಸಹ ಹಿಂದುಗಳೆ ಹಿಂದುತ್ವ ಹೆಸರಿನಲ್ಲಿ ತಮ್ಮ ಸ್ವಾರ್ಥ ರಾಜಕಾರಣ ನಡೆಯಲಾರದು ಜಗಳೂರು.ಮೊಳಕಾಲ್ಮರು.ಇಂತ ಬರ ಪೀಡಿತ ಪ್ರದೇಶಗಳಿಗೆ ಕೆರೆ ತುಂಬಿಸುವ ಯೋಜನೆಗಳಿಗೆ ನಮ್ಮ ಸರ್ಕಾರವಿದ್ದಾಗ ಅಡಿಪಾಯ ಹಾಕಲಾಗಿತ್ತು .ಈ ಬಾಗದ ಬಹುದಿನದ ಕನಸು ಅಪ್ಪರ್ ಭದ್ರಾ ಯೋಜನೆ ಕಾಮಗಾರಿಗೆ ಕೇಂದ್ರ ಸರ್ಕಾರ ಇದುವರೆಗೂ ನಯಪೈಸೆ ಹಣ ನೀಡಿರುವುದಿಲ್ಲ ಕೇವಲ ರಾಜ್ಯದ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ ಈ ಬಯಲು ನಾಡಿನ ಜನರ ಬಗ್ಗೆ ಕಾಳಜಿಯಿಲ್ಲದ ಸರ್ಕಾರ ದೇಶದಲ್ಲಿ ಮನುಸ್ಮೃತಿ ಬಿತ್ತಲು ಹೊರಟಿರುವ ಕೇಂದ್ರ ಸರ್ಕಾರ ಈ ಬಾರಿ ಪಥನವಾಗಲಿದೆ ಎಂದು ವಾಗ್ದಾಳಿ ನಡೆಸಿದರು.
ದಾವಣಗೆರೆ ಲೋಕಸಭಾ ಚುನಾವಣೆ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ರವರನ್ನು ಗೆಲ್ಲಿಸಿ:- ಚುನಾವಣೆಗೂ ಮುನ್ನವೇ ಟ್ರಸ್ಟ್ ಮೂಲಕ ನಿಸ್ವಾರ್ಥ ಸೇವಾಮನೋಭಾವ ಹೊಂದಿರುವ ಹಣದ ಆಮಿಷೆ ತೊರೆದು ಶೋಷಿತ ಬಡವರ್ಗದ ಜನರಿಗೆ ಸಹಾಯಸ್ತ ಚಾಚುವ ತುಡಿತ ಅವರಲ್ಲಿದ್ದು ಎಲ್ಲಾ ವರ್ಗದ ಬಡವರ ಅಭಿವೃದ್ದಿಗೆ ಧ್ವನಿಯಾಗಲಿರುವ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮಾದಿಗ ಸಮಾಜದ ಕಾರ್ಯಕರ್ತರು ಬೂತ್ ನಲ್ಲಿ ಲೀಡ್ ಮಾಡಿ,ಲೀಡರ್ ಗಳಾಗಿ ತಾಲೂಕಿನಲ್ಲಿ ಕನಿಷ್ಠ 30 ಸಾವಿರ ಅಂತರದ ಮತಗಳನ್ನು ನೀಡಿ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಕೀರ್ತಿ ಹೆಚ್ಚಿಸಬೇಕು’ಎಂದು ಕರೆ ನೀಡಿದರು. .
ಮಾದಿಗ ಸಮಾಜದ ಸಹೋದರರು ಇತರೆ ಸಮಾಜದವರೊಂದಿಗೆ ಸಾಮರಸ್ಯತೆಯೊಂದಿಗೆ ವಿಶ್ವಾಸ ಗಳಿಸಿ ರಾಜಕೀಯ ಸ್ಥಾನಮಾನ ಪಡೆಯಬೇಕು
‘ದೇಶದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಭೂಸುಧಾರಣೆ ಕಾಯ್ದೆ ಜಾರಿಗೊಳಿಸಿದ ಪ್ರತಿಫಲವಾಗಿ ದಲಿತರಿಗೆ ಭೂಮಿ ಹಕ್ಕು ನೀಡಿದ್ದಾರೆ.ಇದರಿಂದ ದಲಿತ ಸಮುದಾಯದವರು ಆರ್ಥಿಕ,ಸಾಮಾಜಿಕ ಸಮಾನತೆಗೆ ಸಾಕ್ಷಿಯಾಗಿದೆ.ಅಂತೆಯೇ ಡಾ.ಬಿ ಆರ್ .ಅಂಬೇಡ್ಕರ್,ಡಾ.ಬಾಬು ಜಗಜೀವನ್ ರಾಂ, ಅವರನ್ನೊಳಗೊಂಡಂತೆ ದಲಿತರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಿದ ಕಾಂಗ್ರೆಸ್ ಪಕ್ಷವನ್ನು ಕೈಬಿಡಬಾರದು’ಎಂದು ಹೇಳಿದರು.
‘ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಎಲ್ಲಾ ವರ್ಗದವರಿಗೂ ತಲುಪುವ ಮೂಲಕ ರಾಜ್ಯದಲ್ಲಿ ಗುಳೆತಪ್ಪಿಸಿದೆ.
ನಾನು ಸಮಾಜಕಲ್ಯಾಣ ಇಲಾಖೆ ಸಚಿವನಾಗಿದ್ದ ವೇಳೆ ಜಾರಿಗೊಳಿಸಿದ ಎಸ್ ಇಪಿ,ಟಿಎಸ್ ಪಿ ಕ್ರಾಂತಿಕಾರಕ ಕಾಯ್ದೆ ದೇಶಕ್ಕೆ ಮಾದರಿಯಾಗಿದೆ.ಪ್ರಸಕ್ತವಾಗಿ ರಾಜ್ಯದಲ್ಲಿ ₹37000 ಅನುದಾನ ಪರಿಶಿಷ್ಠ ಸಮುದಾಯಗಳ ಅಭಿವೃದ್ದಿಗೆ ಮೀಸಲಿದೆ ಎಂದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,’ಕ್ಷೇತ್ರದಲ್ಲಿ ಮಾದಿಗ ಸಮಾಜದವರು ವೈಮನಸ್ಸು ತೊರೆದು ಕಾಂಗ್ರೆಸ್ ಪಕ್ಷದ ಗೆಲುವಿಗೆ ಕೈಜೋಡಿಸಬೇಕು.ನನ್ನ ಆಡಳಿತಾವಧಿಯಲ್ಲಿ ಕ್ಷೇತ್ರದ ಮಾದಿಗ ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಬದ್ದನಾಗಿರುವೆ’ಎಂದು ಭರವಸೆ ನೀಡಿದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್ ಮಾತನಾಡಿ,ಸಚಿವರ ಮೇಲೆ ಜಾತೀಯತೆ ನಡೆಸುವ ಆರ್ ಎಸ್ ಎಸ್ ಸಿದ್ದಾಂತದ ಬಿಜೆಪಿ ಸೋಲಿಸಬೇಕಿದೆ.ಅಹಿಂದ ವರ್ಗದ ಮೇಲಿನ ಶೋಷಣೆ ಮುಕ್ತಗೊಳಿಸಲು ದೇಶದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸೋಣ.ಅಹಿಂದ ವರ್ಗದ ನಾಯಕರಾಗಿದ್ದ ಮಾಜಿ ಸಚಿವ ಆಂಜನೇಯ ಅವರ ಸೋಲು ಅಹಿಂದ ವರ್ಗದ ಬಲಕುಗ್ಗಿಸಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾದಿಗ ಸಮಾಜದ ಮುಖಂಡ ಜಿ.ಹೆಚ್ ಶಂಭುಲಿಂಗಪ್ಪ ಮಾತನಾಡಿ,’ಮತೀಯವಾದಿಗಳಿಂದ ದೇಶವನ್ನು ರಕ್ಷಿಸಲು ಕಾಂಗ್ರೆಸ್ ಅವಶ್ಯಕ,ದಲಿತ ಸಮುದಾಯಗಳು ರಾಜಕೀಯ ಪ್ರಜ್ಞೆ ಹೊಂದುವ ಮೂಲಕ ದೇಶದ ಸಂವಿಧಾನಕ್ಕೆ ದಕ್ಕೆ ತರುವ ನಿಟ್ಟಿನಲ್ಲಿ ಬದಲಾವಣೆಗೊಳಿಸುವ ಕುತಂತ್ರ ನಡೆಸುವ ಬಿಜೆಪಿ ಆಡಳಿತಕ್ಕೆ ಮುಕ್ತಿನೀಡಬೇಕು’ ಎಂದು ತಿಳಿಸಿದರು.
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಎಸ್ ಸಿ ಘಟಕದ ಅಧ್ಯಕ್ಷ ಬಿ.ಮಹೇಶ್ವರಪ್ಪ, ಮಾಜಿ ಜಿ.ಪಂ ಸದಸ್ಯ ನರಸಿಂಹಮೂರ್ತಿ,ಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ,ಸುಧೀರ್ ರೆಡ್ಡಿ,ಹನುಮಂತಾಪುರ ಹೆಚ್ ಎಸ್ .ಶಿವಕುಮಾರ್.ಮುಖಂಡರಾದ ಕಡತಿ ಅಂಜಿನಪ್ಪ,ಅಸಾದುಲ್ಲಾ,ನಿವೃತ್ತ ಉಪನ್ಯಾಸಕ ಚೌಡಪ್ಪ,ಪುರುಷೋತ್ತಮನಾಯ್ಕ,ಗೋಪಲಾಪುರ ಮಹೇಶ್,
ಮಂಜುನಾಥ್ , ರಾಜ್ಯ ಕಾರ್ಮಿಕ ಸಂಘಟನೆ ಕಾರ್ಯಧರ್ಶಿ ಗುತ್ತಿದುರ್ಗ ರುದ್ರೇಶ್ ಮಾರುತಿ,ಪುಣಭಗಟ್ಟ ಹನುಮಂತಪ್ಪ,ವಿಜಯ್ ಕೆಂಚೋಳ್,ರಾಜಶೇಖರ್,ರೇಣುಕೇಶ್,ಗುರುಮೂರ್ತಿ,ಬಸವರಾಜ್,ಸೇರಿದಂತೆ ಇದ್ದರು.