Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಏಪ್ರಿಲ್ 28

ಇಂದು ಮಾದಿಗ ಮುಖಂಡರ ಸಭೆ

ಪ್ರಭಾ ಮಲ್ಲಿಕಾರ್ಜುನ್ ಬೆಂಬಲಿಸಲು ನಿರ್ಧಾರ

ದಾವಣಗೆರೆ: ನಗರದಲ್ಲಿ ಏ.28ರಂದು ಮಧ್ಯಾಹ್ನ 4.30ಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮುಖಂಡರ ಸಭೆ ಕರೆಯಲಾಗಿದೆ.

ನಗರದ ಕಮಲಮ್ಮ ಮಹಿಳಾ ಕಾಲೇಜ್ ಎದುರು, ಅಕ್ಜಮಹಾದೇವಿ ಕಲ್ಯಾಣ ಮಂಟಪದಲ್ಲಿ ಸಭೆ ಆಯೋಜಿದಲಾಗಿದೆ.

ಮಾಜಿ ಸಚಿವ, ದಲಿತ ಸಮುದಾಯದ ಹಿರಿಯ ಮುಖಂಡ ಎಚ್.ಆಂಜನೇಯ ಅಧ್ಯಕ್ಷತೆ ವಹಿಸಲಿದ್ದು, ಮಾದಿಗ ಸಮುದಾಯದ ಮುಖಂಡರು, ಗ್ರಾಪಂ, ತಾಪಂ, ಜಿಪಂ ಹಾಗೂ ವಿವಿಧ ಕ್ಷೇತ್ರದ ಹಾಲಿ-ಮಾಜಿ ಜನಪ್ರತಿನಿಧಿಗಳು, ಸಮಾಜಮುಖಿ ಚಿಂತಕರು ಪಾಲ್ಗೊಳ್ಳಲಿದ್ದಾರೆ.

ಪ್ರಸ್ತುತ ಬಿಜೆಪಿ ಆಡಳಿತದಲ್ಲಿ ಅಹಿಂದ ವರ್ಗದ ಮೀಸಲು ಸೌಲಭ್ಯಕ್ಕೆ ಕುತ್ತು ಎದುರಾಗಿದ್ದು, ಜೊತೆಗೆ ಸಂವಿಧಾನ ಬದಲಾವಣೆ ಮಾತುಗಳು ಹೆಚ್ಚು ಕೇಳಿಬರುತ್ತಿವೆ. ಪ್ರಜಾಪ್ರಭುತ್ವಕ್ಕೆ ಕಂಟಕ ಎದುರಾಗಿದೆ. ಆದ್ದರಿಂದ ನಮ್ಮಗಳ ರಕ್ಷಣೆಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ತರುವ ತುರ್ತು ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಮಹತ್ವದ ಈ ಸಭೆಗೆ ಮಾದಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಯಕೊಂಡ ಶಾಸಕ ಬಸವಂತಪ್ಪ ಕೋರಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!