ರಾಜ್ಯ ಸುದ್ದಿ :-
ಮೃಗಿ ಕೃತ್ಯವೆಸಗಿರುವ ಪ್ರಜ್ವಲ್ ರೇವಣ್ಣನ ಬಗ್ಗೆ ಎಚ್ಚರವಿರಲಿ; ಮಹಿಳೆಯರಿಗೆ ಸಂದೇಶ ನೀಡಿದ ನಟಿ ಪೂನಂ ಕೌರ್
ಮೃಗಗಳು ಸಹ ಅವನ ಹಾಗೆ ವರ್ತಿಸಲಾರವು. ಈ ಹಿನ್ನೆಲೆಯಲ್ಲಿ ಮಹಿಳೆಯರು ಎಚ್ಚೆತ್ತುಕೊಳ್ಳಬೇಕಿದೆ, ಯಾರು ನಿಜ ಅರ್ಥದಲ್ಲಿ ಮಹಿಳಾ ಶಕ್ತಿಯನ್ನು ಗೌರವಿಸುತ್ತಾರೋ ಅವರಿಗೆ ಮಾತ್ರ ವೋಟು ನೀಡಬೇಕೆಂದು ಪೂನಂ ಆಗ್ರಹಿಸುತ್ತಾರೆ. ಇಂಥವರು ನಿಮ್ಮ ವೋಟು ಪಡೆದು ಅಧಿಕಾರಕ್ಕೆ ಬಂದರೆ ನಮ್ಮ ಮನೆ ಹೆಣ್ಣುಮಕ್ಕಳ ಗತಿಯೇನು ಎಂದು ಅವರು ಕೇಳುತ್ತಾರೆ.
ಬೆಂಗಳೂರು: ದಕ್ಷಿಣ ಭಾರತದ ಜನಪ್ರಿಯ ನಟಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯೂ ಆಗಿರುವ ಪೂನಂ ಕೌರ್ (Poonam Kaur) ವಿಡಿಯೋವೊಂದನ್ನು ಬಿಡುಗಡೆ ಮಾಡಿ, ಮಹಿಳೆಯರಿಗೆ ಒಂದು ಸಂದೇಶ ನೀಡಿದ್ದಾರೆ. ಅಧಿಕಾರಲ್ಲಿರುವ ಜನರ ಮಕ್ಕಳು; ಹಣ ಮತ್ತು ಅಧಿಕಾರದ ಮದದಲ್ಲಿ ಮಹಿಳೆಯರ ಶೋಷಣೆ ಮಾಡುತ್ತಾರೆ ಮತ್ತು ಸಲೀಸಾಗಿ ಬಚಾವಾಗುತ್ತಾರೆ. ಅಂಕಿತಾ ಭಂಡಾರಿ ಹೆಸರಿನ ಯುವತಿಯನ್ನು ಮಿನಿಸ್ಟರೊಬ್ಬನ ಮಗ ಬೆಟ್ಟದ ಮೇಲಿಂದ ತಳ್ಳಿ ಹತ್ಯೆ ಮಾಡುತ್ತಾನೆ, ಮತ್ತೊಬ್ಬ ಮಿನಿಸ್ಟರ್ ಮಗ ಬ್ಲ್ಯಾಕ್ ಮೇಲ್ ಮಾಡುತ್ತಾನೆ ಎಂದು ತಮ್ಮ ಮಾತು ಆರಂಭಿಸುವ ಪೂನಂ, ಪ್ರಜ್ವಲ್ ರೇವಣ್ಣನ (Prajwal Revanna) ಬಗ್ಗೆ ಹೇಳುತ್ತಾರೆ. ಪ್ರಜ್ವಲ್ ನನ್ನು ಒಬ್ಬ ಮಿನಿಸ್ಟರ್ ಮಗ ಎಂದು ಹೇಳುವ ಪೂನಂ (ಅವರಿಗೆ ಪ್ರಜ್ವಲ್ ರೇವಣ್ಣ ಒಬ್ಬ ಸಂಸದ ಮತ್ತು ಮಾಜಿ ಪ್ರಧಾನಿಯೊಬ್ಬರ ಮೊಮ್ಮಗ ಅನ್ನೋದು ಗೊತ್ತಿಲ್ಲ ಅನಿಸುತ್ತೆ) ಅವನೊಬ್ಬ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ, 2,800 ಕ್ಕೂ ಹೆಚ್ಚು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ಅವರೆಲ್ಲರ ವಿಡಿಯೋ ಮಾಡುತ್ತಾನೆಂದರೆ ಅವನು ರಾಕ್ಷಸನಲ್ಲದೆ ಮತ್ತೇನು ಎಂದು ಪ್ರಶ್ನಿಸುತ್ತಾರೆ.
ಮೃಗಗಳು ಸಹ ಅವನ ಹಾಗೆ ವರ್ತಿಸಲಾರವು. ಈ ಹಿನ್ನೆಲೆಯಲ್ಲಿ ಮಹಿಳೆಯರು ಎಚ್ಚೆತ್ತುಕೊಳ್ಳಬೇಕಿದೆ, ಯಾರು ನಿಜ ಅರ್ಥದಲ್ಲಿ ಮಹಿಳಾ ಶಕ್ತಿಯನ್ನು ಗೌರವಿಸುತ್ತಾರೋ ಅವರಿಗೆ ಮಾತ್ರ ವೋಟು ನೀಡಬೇಕೆಂದು ಪೂನಂ ಆಗ್ರಹಿಸುತ್ತಾರೆ. ಇಂಥವರು ನಿಮ್ಮ ವೋಟು ಪಡೆದು ಅಧಿಕಾರಕ್ಕೆ ಬಂದರೆ ನಮ್ಮ ಮನೆ ಹೆಣ್ಣುಮಕ್ಕಳ ಗತಿಯೇನು ಎಂದು ಅವರು ಕೇಳುತ್ತಾರೆ. ಹರ್ ಘರ್ ಕೀ ಔರತ್ ಜಾಗೇಗಿ ತೋ ಇಸ್ ದೇಶ್ ಕೀ ಬೇಟಿ ಬಚೇಗಿ ಎಂಬ ಸ್ಲೋಗನ್ ತಾನು ರಚಿಸಿದ್ದು ಅದನ್ನು ನೆನಪಿಟ್ಟುಕೊಳ್ಳಿ ಎಂದು ಅವರು ಹೇಳುತ್ತಾರೆ.
ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್ಗೆ ಬಿಗ್ ಟ್ವಿಸ್ಟ್, ಸಂತ್ರಸ್ತೆಯ ಗಂಡನ ತಾಯಿ ಸ್ಫೋಟಕ ಹೇಳಿಕೆ