ಬಿರುಬಿಸಿಲಿನಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಪರ ಬಿರುಸಿನ ಪ್ರಚಾರ.

ಜಗಳೂರು ಸುದ್ದಿ:ಎರಡು ಕುಟುಂಬ ರಾಜಕೀಯಕ್ಕೆ ಅಂತ್ಯ ಹಾಡಿ,ಸಿಲಿಂಡರ್ ಗುರುತಿನ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಅವರನ್ನು ಅತ್ಯಂತ ಅಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಜಿ.ಬಿ.ವಿನಯ್ ಕುಮಾರ್ ಅಭಿಮಾನಿ ಬಳಗದ‌ ಮುಖಂಡ ಮರೇನಹಳ್ಳಿ ನಾಗರಾಜ್ ಮನವಿಮಾಡಿದರು.

ತಾಲೂಕಿನ ಗಿಡ್ಡನಕಟ್ಟೆ,ಭೈರನಾಯಕನಹಟ್ಟಿ,ಗೋಡೆ,ಪಲ್ಲಾಗಟ್ಟೆ ದಿದ್ದಿಗಿ,ಹುಚ್ಚಂಗಿಪುರ ಗ್ರಾಮಗಳಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಅವರ ಪರ ಮತಯಾಚಿಸಿ ಮಾತನಾಡಿದರು.

‘ಲೋಕಸಭಾ ಕ್ಷೇತ್ರದಲ್ಲಿ ಶಿಕ್ಷಣ,ಉದ್ಯೋಗ,ನೀರಾವರಿ ಕ್ಷೇತ್ರಗಳಿಗೆ ಆದ್ಯತೆ ನೀಡಿ ಸಮಗ್ರ ಅಭಿವೃದ್ದಿ ಸಂಕಲ್ಪ ಹೊಂದಿರುವ ಪಕ್ಷೇತರ ಅಭ್ಯರ್ಥಿ ಜಿ.ಬಿ‌.ವಿನಯ್ ಕುಮಾರ್ ಅವರನ್ನು ಗೆಲ್ಲಿಸಿ ಸಂಸತ್ತಿಗೆ ಕಳಿಸೋಣ’ಎಂದು ಕರೆ ನೀಡಿದರು.

ಮುಖಂಡ ಕಾಮಗೇತನಹಳ್ಳಿ ಹರಿ ಪ್ರಸಾದ್ ಮಾತನಾಡಿ,’ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕೇವಲ ಬಂಡವಾಳಶಾಹಿಗಳಿಗೆ ಹಾಗೂ ಕುಟುಂಬದ ರಾಜಕಾರಣಕ್ಕೆ ಮಣಿಹಾಕಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿಪೆಟ್ಟು ಬಿದ್ದಿದೆ.ಇನ್‌ಸೈಟ್ ಕೋಚಿಂಗ್ ಮುಖಾಂತರ ಸಾಕಷ್ಟು ಬಡನಿರುದ್ಯೋಗಿ ಯುವಕರಿಗೆ ಆಶಾಕಿರಣವಾಗಿರುವ.ಕ್ಷೇತ್ರವ್ಯಾಪಿ ಹಳ್ಳಿಗಳಿಗೆ ಕಾಲ್ನಡಿಗೆಯೊಂದಿಗೆ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಭರವಸೆ ಕೊಟ್ಟಿರುವ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಅವರಿಗೆ ಬೆಂಬಲಿಸಬೇಕು’ ಎಂದು ಹೇಳಿದರು.

ಯುವಮುಖಂಡ ಯು.ಸಿ.ರವಿ ಹುಚ್ಚಂಗಿಪುರ ಮಾತನಾಡಿ,’ಬಂಡವಾಳಶಾಹಿತ್ವದ ಪ್ರಭಾವಿ ರಾಜಕಾರಣಿ ಕುಟುಂಬಗಳಿಂದ ಜನಸಾಮಾನ್ಯರ ಬದುಕು ವಿನಾಶಗೊಳ್ಳುತ್ತಿದೆ.ಸಮಗ್ರ ಅಭಿವೃದ್ದಿ ಮರೀಚಿಕೆಯಾಗಿದೆ.ಸಂವಿಧಾನ ಬದ್ದ ಮತವನ್ನು ಕ್ಷಣಿಕ ಆಮಿಷೆಗಳಿಗೆ ಮಾರಾಟಮಾಡಿಕೊಳ್ಳದೆ.ಸೂಕ್ತ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಅವರನ್ನು ಈ ಬಾರಿ ಸಂಸದರನ್ನಾಗಿಸಿದರೆ.ದಾವಣಗೆರೆ ಕ್ಷೇತ್ರ ಅಭಿವೃದ್ದಿಗೆ ಪೂರಕವಾಗಲಿದೆ’ ಎಂದು ತಿಳಿಸಿದರು.

ಬಿರುಬಿಸಿಲಿನಲ್ಲಿ ಅಭಿಮಾನಿ ಬಳಗದಿಂದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಅವರ ಪರ ಮನೆಬಾಗಿಲಿಗೆ ತೆರಳಿ ಮತಯಾಚಿಸಿದರು.

ಸಂದರ್ಭದಲ್ಲಿ ಮುಖಂಡರಾದ ತಿಮ್ಲಾಪುರ ಪ್ರಸನ್ನಕುಮಾರ್,ಗೌರಿಪುರ ನಾಗರಾಜ್,ಗೌಡಗೊಂಡನಹಳ್ಳಿ ಶಿವು,ಎಸ್.ಪಿ.ನಾಗರಾಜ್,ಹಿರೇಮಲ್ಲನಹೊಳೆ ಹೇಮಾರೆಡ್ಡಿ,ಮರಿಕುಂಟೆ ನೀಲಪ್ಪ,ಶ್ರೀಕಾಂತ್,ಶಾಂತಕುಮಾರ್,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!