ದೇಶದ ಸುಭದ್ರತೆಗೆ ಬಿಜೆಪಿ ಆಡಳಿತ ಅವಶ್ಯಕ:ಗಾಯಿತ್ರಿ ಸಿದ್ದೇಶ್ವರ್
ಜಗಳೂರು ಸುದ್ದಿ:ಸುಭದ್ರತೆಯ ದೇಶಕಟ್ಟಲು ಬಿಜೆಪಿ ಆಡಳಿತದ ಅವಶ್ಯಕತೆಯಿದೆ.ಬಿಜೆಪಿ ಪಕ್ಷ ಗೆಲ್ಲಿಸಿ ಮೋದಿಜಿ ಅವರನ್ನು ಪ್ರಧಾನಿಯನ್ನಾಗಿಸೋಣ ಎಂದು ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಹೇಳಿದರು.
ಪಟ್ಟಣದ ಮಹಾತ್ಮಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರ ಪರ ಮತಯಾಚನಾ ರೋಡ್ ಶೋ ನಡೆಸಿ ಅವರು ಮಾತನಾಡಿದರು.
ದೇಶದ ಭವಿಷ್ಯ ರೂಪಿಸಲು ದಿನಗಣನೆ ಉಳಿದಿದ್ದು.ಸೂಕ್ತ ಅಭ್ಯರ್ಥಿ ಆಯ್ಕೆಯ ನಿರ್ಣಯ ಮತದಾರರ ಕೈಯಲ್ಲಿದೆ.ಪ್ರಧಾನಿ ಮೋದಿಜಿ ಅವರು ಹಗಲಿರುಳು ನಿದ್ರೆಗೆ ಜಾರಿದೆ ದೇಶದ ರೈತರ,ಸೈನಿಕರ,ಮಹಿಳೆಯರ ಜನಪರ ದೇಶದ ಸಮಗ್ರ ಅಭಿವೃದ್ದಿ ಬಗ್ಗೆ ಕಾಳಜಿಹೊಂದಿದ್ದಾರೆ.ದಶಕಗಳಲ್ಲಿ ದೇಶವನ್ನು ಅಭಿವೃದ್ದಿ ಪರ್ವದತ್ತ ಸಾಗುತ್ತಿದೆ.ಅವರ ಕನಸ್ಸನ್ನು ನನಸಾಗಿಸಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,ಬಹಿರಂಗ ಪ್ರಚಾರಕ್ಕೆ ಕೇಲವೇ ಗಂಟೆಗಳು ಬಾಕಿ ಉಳಿದಿದ್ದು ಬೂತ್ ಪ್ರಮುಖರು ಮತದಾರರನ್ನು ಮನವೊಲಿಸಿ ಹೆಚ್ಚು ಹೆಚ್ಚು ಮತಗಳನ್ನು ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರನ್ನು ಗೆಲ್ಲಿಸಿ ಸಂಸತ್ತಿಗೆ ಕಳಿಸೋಣ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ನನ್ನ ಆಡಳಿತಾವಧಿಯಲ್ಲಿ ಭದ್ರಾಮೇಲ್ದಂಡೆ ಹಾಗೂ 57 ಕೆರೆ ತುಂಬಿಸುವ ಯೋಜನೆಗಳು ಸಾಕಾರಗೊಂಡಿವೆ.ತಾಲೂಕಿನ 5 ಕೆರೆಗಳಿಗೆ ನೀರು ಹರಿಸಲಾಗಿದೆ.ನೀರಾವರಿ ಯೋಜನೆ ಬಿಜೆಪಿ ಆಡಳಿತದ ಸಾಧನೆ.ಸಿದ್ದೇಶ್ವರ್ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ್ ಅವರಿಗೆ ಅತ್ಯಂತ ಅಂತರದಲ್ಲಿ ಬೂತ್ ಮಟ್ಟದಲ್ಲಿ ಲೀಡ್
ಕೊಡಬೇಕು ಎಂದು ಕರೆ ನೀಡಿದರು.
‘ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರನ್ನು ಗೆಲ್ಲಿಸಿ ಮತ್ತೊಮ್ಮೆ ನರೇಂದ್ರ ಮೋದಿಜಿ ಅವರನ್ನು ದೇಶದ ಪ್ರಧಾನಿಯನ್ನಾಗಿಸೋಣ.ಒಗ್ಗಟ್ಟಿನಿಂದ ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಅತ್ಯಂತ ಹೆಚ್ಚು ಮತಗಳನ್ನು ಹಾಕಿಸಬೇಕು’ಎಂದು ಜಿ.ಅನಿತ್ ಕುಮಾರ್ ಹೇಳಿದರು.
ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ನವೀನ್ ಕುಮಾರ್,ಕೆ.ಎಸ್.ನರೇಂದ್ರ,ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್ , ಇಂದಿರಾರಾಮಚಂದ್ರ,ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್.ಮಾಜಿ ಪಂ ಸದಸ್ಯರಾದ,ಜಯಲಕ್ಷ್ಮಿಮಹೇಶ್,ಎಸ್.ಕೆ.ಮಂಜುನಾಥ್,ಜೆ.ವಿ.ನಾಗರಾಜ್,ಕಾನನಕಟ್ಟೆ ಪ್ರಭು,ಬಾಲರಾಜ್,ರಮೇಶ್ ,ನವೀನ್ ಕುಮಾರ್,ಸೇರಿದಂತೆ ಇದ್ದರು.