ಲೇಖನ
ಜಗಳೂರು ಎಂದಾಗ ಮೊದಲು ನೆನಪು ಬರುವುದು
ರಂಗಯ್ಯನದುರ್ಗ ಅಥವಾ ಕೊಂಡಕುರಿಯ ಅಭಯಾರಣ್ಯಅಂತಹ ಅರಣ್ಯವು ಪ್ರತಿ ವರ್ಷವು ಯುಗಾದಿಯ ನಂತರ ಚಿಗುರಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಮಲೆನಾಡಿನ ಅನುಭವವ ನೀಡುತ್ತಿತ್ತು, ಹಲವಾರು ಪ್ರಕೃತಿ ಪ್ರೇಮಿಗಳ ಮತ್ತು ಕವಿ ಮನಸ್ಸುಗಳಲ್ಲಿ ಮೂಡಿಬರುತಿತ್ತು. ನಾನಾ ರೀತಿಯ ವಲಸೆ ಹಕ್ಕಿಗಳು ಕಂಡುಬರುವುತ್ತಿದ್ದವು. ಇಂಪಾದ ಹಕ್ಕಿಗಳನಾದ ಮನವನ್ನು ತಣಿಸುತ್ತಿತ್ತು.
ಆದರೆ ಈ ವರ್ಷ ನಿರಂತರ ಮಳೆಯ ಕೊರೆತೆಯಿಂದ ರಂಗಯ್ಯನದುರ್ಗ ಅರಣ್ಯವು ಮರುಭೂಮಿಯ ಅನುಭವ ನೀಡಿದೆ ಮತ್ತು ಬಿಸಿಲಿನ ತಾಪಕ್ಕೆ ಅರಣ್ಯದಲ್ಲಿ ಹಕ್ಕಿ ಪಕ್ಷಿಗಳು ಮೃಗಗಳು ನೊಂದು
ಒಂದು ಹನಿ ನೀರಿಗಾಗಿ ಹಾಹಾಕಾರ ಉಲ್ಬಣಿಸಿದೆ.
ಹಸಿರೇ ಕಳೆದುಕೊಂಡ ಅರಣ್ಯವೂ ಎತ್ತಲು ಮರುಭೂಮಿಯ ಅನುಭವ ನೀಡಿವೆ. ಅಲ್ಲಿ ಇಲ್ಲಿ ಇದ್ದಂತಹ ಸಣ್ಣ ಪುಟ್ಟ ಗುಂಡಿಗಳು ಎಲ್ಲಾ ನೀರಿಲ್ಲದೆ
ಒಣಗಿವೆ.
ಆದ್ದರಿಂದ ನಾವು ಬದುಕೋಣ ಮತ್ತು ಬೆಳೆಸೋಣ
ಎಂದು ಹಕ್ಕಿ ಪಕ್ಷಿಗಳಿಗೆ ಸೀಗುವ ರೀತಿಯ ನೀರು ಇಟ್ಟು
ಅವುಗಳು ನೋವುಗಳನ್ನು ಅರಿತು ನಮ್ಮ ಪುಟ್ಟ ಅಳಿಲು ಸೇವೆ ಮಾಡೋಣ.
ಅಂಜಿನಪ್ಪ ಗೌಡಿಕಟ್ಟೆ ಪದವಿ ವಿಧ್ಯಾರ್ಥಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಗಳೂರು