: ಜಗಳೂರು ತಾಲ್ಲೂಕಿನಲ್ಲಿ ಶಾಂತಿಯುತ ಮತದಾನ ಶೇ. 73 .2 ರಷ್ಟು ಮತದಾನ ನಡೆದಿದೆ ಎಂದು ಸಹಾಯಕ ಚುನಾವಣೆ ಆಹಾರ ನಾಗರೀಕ ಸರಬರಾಜು ಇಲಾಖೆ ಡಿಡಿ ಅಧಿಕಾರಿ ಸಿದ್ದರಾಮ ಮಾರಿಹಾಳ್ ತಿಳಿಸಿದ್ದಾರೆ
2024 ರ ಲೋಕಸಭೆ ಚುನಾವಣೆಯಲ್ಲಿ ತಾಲ್ಲೂಕಿನಾದ್ಯಂತ ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿ ಜರುಗಿತು . ಬೆಳಿಗ್ಗೆ 7 ರಿಂದ ಪ್ರಾರಂಭವಾದ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಿತು ಸಾರ್ವಜನಿಕರು ಬಿರು ಬಿಸಿಲಿನಲ್ಲಿಯೆ ಮತ ಕೇಂದ್ರಕ್ಕೆ ತೆರಳಿ ಮತದಾನ ಮಾಡಿದರು .ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪ್ರಭುಗಳು ತಮ್ಮ ಹಕ್ಕಿನ ಮತ ಚಲಾಯಿಸುವ ಮೂಲಕ ಅಭ್ಯರ್ಥಿಗಳ ಹಣೆ ಬರಹ ಬರೆಯಲಿದ್ದಾರೆ.. ,ಕೆಲ ಸ್ಥಳೀಯ ಸಮಸ್ಯೆಗಳಿಗಾಗಿ ಜನರು ಮತದಾನ ಬಹಿಷ್ಕಾರ ಮಾಡಿರುವುದು ಕಂಡು ಬಂದಿತು ತಾಲ್ಲೂಕಿನ ಗೌರಿಪುರ ಗ್ರಾಮದ ಹೊಸರು ಗ್ರಾಮದಲ್ಲಿ ನಿವೇಶನ ಹಕ್ಕುಪತ್ರ ನೀಡಿರುವುದಿಲ್ಲ ಎಂದು ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಗ್ರಾಮದಲ್ಲಿಯೆ ಪ್ರತಿಭಟನೆ ಮಾಡಿದ ಪ್ರಸಂಗ ಜರುಗಿತು
.,ವಿಷಯ ತಿಳಿಯುತ್ತಿದ್ದಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಂಠದತ್ತ ಅರಸು ಸ್ಥಳಕ್ಕೆ ಆಗಮಿಸಿ ನಿವೇಶನ ಹಕ್ಕುಪತ್ರ ಶೀಘ್ರದಲ್ಲೇಯೆ ನೀಡುವ ಭರವಸೆ .ಪ್ರತಿಭಟನೆ ಕೈ ಬಿಟ್ಟು ಮತದಾನ ಮಾಡಿದ ಗ್ರಾಮಸ್ಥರು. ಇನ್ನು ಹಲವಡೇ ವೃದ್ದರು, ವಿಶೇಷ ಚೇತನರು ಮತಗಟ್ಟೆಗೆ ಆಗಮಿಸಿ ಮತಹಾಕಿ, ಎಲ್ಲರಿಗೂ ಆದರ್ಶವಾದರು.ಲೋಕಸಭಾ ಚುನಾವಣೆಗೆ ಇಂದು(ಮೇ.07)ನಡೆದ ಮತದಾನ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆದಿದೆ ಎನ್ನಲಾಗಿದೆ. ಒಟ್ಟಾರೆ ಅನೇಕ ದಿನಗಳಿಂದ ಅಬ್ಬರದ ಪ್ರಚಾರ ನಡೆಸಿದ್ದ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಹಣೆ ಬರಹ ಬರೆದಿದ್ದಾರೆ. ತಾಲೂಕಿನಲ್ಲಿ 205.
,ವಿಧಾನ ಸಭಾ ಕ್ಷೇತ್ರದ ಅರಸೀಕೆರೆ ಹೋಬಳಿ 58,ಸೇರಿದಂತೆ ಒಟ್ಟು 263 ಮತಗಟ್ಟೆಗಳಿದ್ದು.5 ಸಖಿ,1ವಿಶೇಷ ಚೇತನರ ನಿರ್ವಹಣೆ,1ಧ್ಯೇಯ ಆಧಾರಿತ,1ಯುವಜನ ನಿರ್ವಹಣೆ,1 ಸಾಂಪ್ರದಾಯಿಕ ಮತಗಟ್ಟೆ ಸೇರಿದಂತೆ ಒಟ್ಟು 9 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
ಸಖಿಮತಗಟ್ಟೆಗಳು:ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ (ಮತಗಟ್ಟೆ ಸಂಖ್ಯೆ8),ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೊಕ್ಕೆ (ಮತಗಟ್ಟೆ ಸಂಖ್ಯೆ 20),ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಲ್ಲಾಗಟ್ಟೆ ಮತಗಟ್ಟೆ ಸಂಖ್ಯೆ (90),ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂತೆಪೇಟೆ ಜಗಳೂರು ಟೌನ್ (ಮತಗಟ್ಟೆ ಸಂಖ್ಯೆ 196),ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿದರಕೆರೆ (ಮತಗಟ್ಟೆ ಸಂಖ್ಯೆ 250) ಸಖಿ ಮತಗಟ್ಟೆ ಕೇಂದ್ರಗಳು ಸಿದ್ದತೆಗೊಂಡಿವೆ.5 ಮತಗಟ್ಟೆಗಳಿಗೂ ಮಹಿಳೆಯರೇ ಮತಗಟ್ಟೆ ಅಧಿಕಾರಿಗಳು,ಮಹಿಳಾ ಮತದಾರರನ್ನಾಗಿ ವಿಂಗಡನೆಮಾಡಲಾಗಿತ್ತು
ಇಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನೆ ಭದ್ರತೆಗೆ ನಿಯೋಜಿಸಲಾಗಿತ್ತು ಎಂದು ಚುನಾವಣೆ ಅಧಿಕಾರಿ ತಿಳಿಸಿದರು
ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಹಾಗೂ ಅವರ ಪುತ್ರ ರಾಜ್ಯ ಕಾಂಗ್ರೆಸ್ ಎಸ್ ಟಿ ಘಟಕದ ಪ್ರಧಾನಕಾರ್ಯಧರ್ಶಿ ಕೀರ್ತಿಕುಮಾರ್ ತಮ್ಮ ಸ್ವಗ್ರಾಮವಾದ ಚಿಕ್ಕಮ್ಮನಹಟ್ಟಿ ಗ್ರಾಮಕ್ಕೆ ತೆರಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.ಹಾಗೂ ಬಿಜಿಪಿ ಪಕ್ಷದ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಸ್ವಗ್ರಾಮವಾದ ಬಿದರಕೆರೆ ಗ್ರಾಮದಲ್ಲಿ ತಮ್ಮ ಚಲಾಯಿಸಿದರು ಇನ್ನು ಕಾಂಗ್ರೆಸ್ ಎಸ್ ಟಿ ಘಟಕದ ರಾಜ್ಯಾದ್ಯಕ್ಷ ಕೆಪಿ.ಪಾಲಯ್ಯ ಹಾಗೂ ಕಾಂಗ್ರೆಸ್ ಎಸ್ ಸಿ ಘಟಕದ ತಾಲ್ಲೂಕು ಅಧ್ಯಕ್ಷ ಬಿ ಮಹೇಶ್ ತಮ್ಮ ಹಕ್ಕು ಚಲಾಯಿಸಿ ಕಾಂಗ್ರೆಸ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.