ಜಗಳೂರು ಎಸ್ ಎಸ್ ಎಲ್ ಸಿ ಫಲಿತಾಂಶ ಶೇ 70. 1 ರಷ್ಟು ತೇರ್ಗಡೆ 50 ವಿಧ್ಯಾರ್ಥಿಗಳು ಕನ್ನಡ ಮಾದ್ಯಮದಲ್ಲಿ ಹೆಚ್ಚು ಅಂಕ ಗಳಿಸಿದ್ದಾರೆ
ಕಳೆದ ವರ್ಷ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದ ಜಗಳೂರು ಈ ಬಾರಿ ನಾಲ್ಕನೇ ಸ್ಥಾನಕ್ಕೆ SSLC RESULT: ಪಾತಾಳಕ್ಕೆ ಕುಸಿದ ಜಗಳೂರು ಫಲಿತಾಂಶ
By
Shukradeshenews.com
9 May 2024
ಜಗಳೂರು ತಾಲ್ಲೂಕಿನ ಮುಗ್ಗಿದರಾಗಿಹಳ್ಳಿ ಮೊರಾರ್ಜಿ ವಸತಿ ಶಾಲೆ ಉದ್ಗಾಟ್ಟ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹಾಗೂ ದಿದ್ದಿಗಿ ರೂರಲ್ ಪಬ್ಲಿಕ್ ಶಾಲೆ ಶೇ ನೂರರಷ್ಟು ಎಸ್ ಎಸ್ ಎಲ್ ಸಿ ಪಲಿತಾಂಶ ಕಾಯ್ದುಕೊಂಡಿದೆ :
ತಾಲೂಕಿನಲ್ಲಿ ಶೇ.70 ರಷ್ಟು ಎಸ್ ಎಸ್ ಎಲ್ ಸಿ ಫಲಿತಾಂಶ ಜಿಲ್ಲೆಗೆ 4 ನೇ ಸ್ಥಾನ.
ಜಗಳೂರು ಸುದ್ದಿ:ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು.ತಾಲೂಕಿನಲ್ಲಿ ಶೇ. 70 ಫಲಿತಾಂಶದೊಂದಿಗೆ ಜಿಲ್ಲೆಗೆ 4 ನೇ ಸ್ಥಾನ ಪಡೆದಿದೆ.
ತಾಲೂಕಿನ ವಿವಿಧ ಪ್ರೌಢಶಾಲೆಗಳನ್ನೊಳಗೊಂಡಂತೆ ಗಂಡು 1134 ಹೆಣ್ಣು 1187 ಸೇರಿದಂತೆ ಒಟ್ಟು 2321 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು.ಗಂಡು 699 (ಶೇ.61.64)ಹೆಣ್ಣು 926 ( ಶೇ.78.1) ಸೇರಿದಂತೆ ಒಟ್ಟು 1625 ಸರಾಸರಿ ಶೇ.70.1ವಿದ್ಯಾರ್ಥಿಗಳು ಪಾಸಾಗಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಮೂರು ಶಾಲೆಗಳು ಶೇ. 100 ರಷ್ಟು ಫಲಿತಾಂಶ:ತಾಲೂಕಿನ ಮೊರಾರ್ಜಿ ದೇಸಾಯಿ ವಸತಿಯುತಶಾಲೆ ಮುಗ್ಗಿದರಾಗಿಹಳ್ಳಿ,ಕಿತ್ತೂರು ರಾಣಿ ಚೆನ್ನಮ್ಮ ವಸತಿಯುತ ಶಾಲೆ ಉದ್ಗಟ್ಟ,ರೂರಲ್ ಪಬ್ಲಿಕ್ ಶಾಲೆ ದಿದ್ದಿಗೆ,ಶೇ 100ರಷ್ಟು ಫಲಿತಾಂಶ ಪಡೆದಿವೆ.ಅಂತೆಯೇ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕಗಳನ್ನು 50 ವಿದ್ಯಾರ್ಥಿಗಳು ಗಳಿಸಿದ್ದಾರೆ ಎಂದು ಬಿಇಓ ಹಾಲಮೂರ್ತಿ ಶುಕ್ರದೆಸೆನ್ಯೂಸ್ ವೆಬ್ ಮಿಡಿಯಾ ಗೆ ತಿಳಿಸಿದ್ದಾರೆ.
‘ಕಳೆದ 5 ವರ್ಷಗಳಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮಸ್ಥಾನ ಗಳಿಸಿದ್ದ ತಾಲೂಕಿನಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಕುಸಿತಗೊಂಡಿದೆ.ಪಾರದರ್ಶಕವಾಗಿ ಪರೀಕ್ಷೆ ಸಿಸಿ ಕ್ಯಾಮೇರಾ ಕಣ್ಗಾವಲಿನಲ್ಲಿ ಬಿಗಿಬಂದೋಬಸ್ತ್ ನಿಂದ ನಡೆಸಲಾಗಿದೆ.ಫೇಲಾದ ವಿದ್ಯಾರ್ಥಿಗಳು ಎದೆಗುಂದದೆ ಉತ್ತಮ ಅಭ್ಯಾಸದೊಂದಿಗೆ ಪೂರಕ ಪರೀಕ್ಷೆಯಲ್ಲಿ ಪಾಸಾಗಬೇಕು’ ಎಂದು ಬಿಇಓ ಹಾಲಮೂರ್ತಿ ಕಿವಿಮಾತು ಹೇಳಿದ್ದಾರೆ.
ಪೋಷಕರು ಬೇಸರ:ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಶಿಕ್ಷಕರು ಉತ್ತಮ ತರಬೇತಿ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ.ಸಿಸಿ ಕ್ಯಾಮೇರಾ ಅಳವಡಿಕೆ ಮಾಹಿತಿ ತಿಳಿದ ಶಿಕ್ಷಣ ಇಲಾಖೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕಿತ್ತು.ಪರೀಕ್ಷೆತಯಾರಿ ನಡೆಸಬೇಕಿತ್ತು.ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಪರೀಕ್ಷೆ ಎದುರಿಸಿರುವುದೇ ಫಲಿತಾಂಶ ಕುಸಿತಕ್ಕೆ ಕಾರಣವಾಗಿದೆ ಎಂದು ಕೆಲ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಉದ್ಗಟ್ಟ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಶೇ. 100 ಕ್ಕೆ 100 ಫಲಿತಾಂಶ:ಕಿತ್ತೂ ರಾಣಿ ಚೆನ್ನಮ್ಮ ವಸತಿಯುತ ಶಾಲೆ ಉದ್ಗಟ್ಟ ಶೇ. 100 ಕ್ಕೆ 100. ರಷ್ಟು ಫಲಿತಾಂಶ ಪಡೆದಿದ್ದು.ಹಂಸಶ್ರೀ ಎಚ್.581 ಶೇ.92.24,ನೇತ್ರಾವತಿ ಎಸ್ ಎಚ್.563 ಶೇ.90.4 ಅಂಕಗಳನ್ನು ಗಳಿಸಿದ್ದಾರೆ.
ತ
‘