ಕ್ರಾಂತಿಕಾರಿ ಬಸವಣ್ಣನ ವಿಚಾರಧಾರೆಗಳು ಪ್ರಸ್ತುತ ಯುಸಮೂಹಕ್ಕೆ ಪಸರಿಸಲಿ: ವಕೀಲ ಮರೇನಹಳ್ಳಿ ಬಸವರಾಜ್ ಅಭಿಪ್ರಾಯ
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on may 10
ಜಗಳೂರು ಸುದ್ದಿ: 12 ನೇ ಶತಮಾನದ ಬಸವಣ್ಣನವರು ಅನುಭವವ ಮಂಟಪದ ಮೂಲಕ ವಚನಸಾಹಿತ್ಯದ ಚಳುವಳಿ ಮೂಲಕ ವೈಚಾರಿಕತೆ, ಸಾಮಾಜಿಕ ಸಮಾನತೆಗಾಗಿ ಕ್ರಾಂತಿಕಾರಿ ನಿಲುವಿನ ಹೋರಾಟದ ಅವಿರತ ಶ್ರಮದ ಫಲವಾಗಿ ಇದೀಗ ದೇಶಕ್ಕೆ ಉತ್ತಮ ಸಂದೇಶ ದಾರಿದೀಪವಾಗಿದೆ ವಿಶ್ವಗುರು ಬಸವಣ್ಣನಜಯಂತಿ ಆಚರಣೆಗಿಂತ ಅವರ ವಿಚಾರಗಳು ಯುವ ಸಮೂಹಕ್ಕೆ ಪಸರಿಸಲಿ ಎಂದು ತಾ.ಪಂ. ಮಾಜಿ ಸದಸ್ಯ ಹಾಗೂ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಮರೇನಹಳ್ಳಿ ವಕೀಲ ಬಸವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶುಕ್ರವಾರ ಪಟ್ಟಣದ ಪ್ರೇರಣಾ ಸೇವಾ ಟ್ರಸ್ಟ್ ಚರ್ಚ್ ಸಭಾಂಗಣದಲ್ಲಿ ಮಾನವಬಂಧುತ್ವ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ 891 ನೇ ವಿಶ್ವಗುರು ಬಸವಣ್ಣ ಜಯಂತ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ವೇದಿಕೆಯನ್ನುದ್ದೇಶಿಸಿ ಮಾತನಾಡಿದರು.
‘ಆರ್ಥಿಕ ಸಮಾನತೆ,ಸಾಮಾಜಿಕ,ಶೈಕ್ಷಣಿಕ,ಸಾಂಸ್ಕೃತಿಕ ಏಕತೆಯಂತಹ ಶ್ರೇಷ್ಠ ಮತ್ತು ಉದಾರತ್ವ ಧ್ಯೇಯಗಳನ್ನು ಮೂಲಮಂತ್ರವನ್ನಾಗಿಸಿಕೊಂಡು, ಪ್ರಜಾಪ್ರಭುತ್ವ ತಳಹದಿಯ ಮೇಲೆ ನಿರ್ಮಿತಗೊಂಡ ಅನುಭವಮಂಟಪ ಪ್ರಥಮ ಸಂಸತ್ತು.ಇಂದು ಎಲ್ಲಾ ವರ್ಗದ ಜನತೆಗೆ ಪ್ರಜಾಸತ್ತಾತ್ಮಕ,ಕಾನೂನಾತ್ಮಕ ಸಂವಿಧಾನದ ಆಶಯಗಳು 12 ನೇ ಶತಮಾನದಲ್ಲಿ ಬಸವಣ್ಣನ ಆಶಯಗಳಾಗಿದ್ದವು. ಆದರೆ ಪ್ರಸ್ತುತದಲ್ಲಿ ಕೆಲವರು ಅಂಬೇಡ್ಕರ್ ಮತ್ತು ವಿಶ್ವಗುರು ಬಸವಣ್ಣ ಅವರನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸುತ್ತಿರುವುದು ವಿಷಾಧನೀಯ ಎಂದರು .
ಪ್ರಾಂಶುಪಾಲ ನಾಗಲಿಂಗಪ್ಪ ಮಾತನಾಡಿ,’ಬಸವಣ್ಣ ಅನುಭವಮಂಟಪದಲ್ಲಿ ಶೋಷಿತ ವರ್ಗದ ಪುರುಷ ವಚನಕಾರರಿಗೆ ಮಾತ್ರವಲ್ಲದೆ ಮಹಿಳಾ ವಚನಗಾರ್ತಿಯರಿಗೂ ವಚನಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿದ್ದರು.ಶೋಷಿತ ವರ್ಗಕ್ಕೆ ಬಸವಣ್ಣ ವಿಶಿಷ್ಠವಾದ ದೈವಮಾನವರಾಗಿದ್ದಾರೆ ಅಂತೆಯೇ ವೈಚಾರಿಕ ಪ್ರಜ್ಞೆಯ ವಿವೇಕವನ್ನು ಬೆಳೆಸಿದ ಬಸವಣ್ಣನ ಚಿಂತನೆಗಳು ಜಗತ್ತನ್ನೇ ಆಳುವಂತಿವೆ ‘ಎಂದು ತಿಳಿಸಿದರು.
ವಕೀಲ ಆರ್.ಓಬಳೇಶ್ ಮಾತನಾಡಿ,’ಕ್ರಾಂತಿಕಾರಿ ವೈಚಾರಿಕ ಚಿಂತನೆವುಳ್ಳ ಬಸವಣ್ಣನನ್ನು ನಂದಿವಿಗ್ರಹ,ಎತ್ತುಗಳ ಪ್ರತಿ ರೂಪವಾಗಿ ಬಿಂಬಿಸಿ ಮೂರ್ತಿ ಆರಾಧನೆ ವೈಭವೀಕರಿಸಲಾಗಿದೆ.ಅವರ ನೈಜ ವಿಚಾರಧಾರೆ,ಆದರ್ಶಗಳನ್ನು ತಿರುಚುವ ಹುನ್ನಾರ ನಡೆಯುತ್ತಿದೆ.ವಿಶ್ವಗುರು ಬಸವಣ್ಣ ಜನಿಸಿದ ನಾಡಿನಲ್ಲಿ ಕೋಮುವಾದ,ಜಾತೀಯತೆ,ಧರ್ಮಾಂಧತೆ ತಾಂಡವಾಡುತ್ತಿದೆ ಕೆಲ ರಾಜಕಾರಣಿಗಳನ್ನು ವಿಶ್ವಗುರುವನ್ನಾಗಿಸಲು ಹೊರಟಿರುವುದು ಅಪಾಯಕಾರಿ ಬೆಳವಣಿಗೆ’ ಎಂದು ಆತಂಕ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಹಿರಿಯ ನಾಗರೀಕ ಸಂಘದ ತಾಲೂಕು ಅಧ್ಯಕ್ಷ ಸಿ.ತಿಪ್ಪೇಸ್ವಾಮಿ ಶುಕ್ರದೆಸೆನ್ಯೂಸ್ ಪತ್ರಿಕೆ ಸಂಪಾದಕ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ,ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ಧನ್ಯಕುಮಾರ್ ಎಚ್.ಎಂ.ಹೊಳೆ,ವಕೀಲರಾದ ಸಣ್ಣ ಓಬಯ್ಯ, ರಂಗಪ್ಪ,ಭೂಪತಿ,ತಿಪ್ಪೇಸ್ವಾಮಿ,ಮಹಾಂತೇಶ್,ಮರೇನಹಳ್ಳಿ ತಿಪ್ಪೇಸ್ವಾಮಿ,ರುದ್ರೇಶ್ ಮಾಜಿ ಪ.ಪಂ ಅಧ್ಯಕ್ಷ ಮಂಜುನಾಥ್,ಪ್ರಗತಿಪರ ಸಂಘಟನೆ ಮುಖಂಡರಾದ ಮರೇನಹಳ್ಳಿ ನಜೀರ್ ಅಹಮ್ಮದ್, ಮಹಿಳಾ ಸಂಚಾಲಕಿ ಇಂದ್ರಮ್ಮ ,ಸತೀಶ್ ಮಲೆಮಾಚಿಕೆರೆ,ಮಾದಿಹಳ್ಳಿ ಮಂಜುನಾಥ್,ರಮೇಶ್,ಓಬಳೇಶ್,ರುದ್ರೇಶ್,ವಿಜಯ್ ಕೆಂಚೋಳ್,ಕುಮಾರ ನಾಯ್ಕ,ಸೇರಿದಂತೆ ಇದ್ದರು.