ಕೊಡಗನ್ನು ಬೆಚ್ಚಿ ಬೀಳಿಸಿದ ಸೂರ್ಲಬ್ಬಿ ವಿದ್ಯಾರ್ಥಿ ಮೀನಾ ಹತ್ಯೆ ಪ್ರಕರಣ ನಡೆದದ್ದು ಏನು. ? ರುಂಡದ ಜೊತೆ ಪರಾರಿ ಆದ ಆರೋಪಿ ಪತ್ತೆಗೆ ಪೊಲೀಸರ ಬಿರುಸಿನ ಕಾರ್ಯಾಚರಣೆ.
By
Shukradeshe news
ಮೇ 10, 2024

ಸೂರ್ಲಬ್ಬಿ ಸರ್ಕಾರಿ ಶಾಲಾ ವಿದ್ಯಾರ್ಥಿನಿ ಮೀನಾಳಿಗೆ 16 ವರ್ಷ ವಯಸ್ಸಾಗಿತ್ತು. ಅವರು ಮೀನಾ ಸೂರ್ಲಬ್ಬಿ ಸುಬ್ರಮಣಿ ಅವರ ಕಿರಿಯ ಪುತ್ರಿಯಾಗಿದ್ದರು

ಈಕೆಗೆ ಮೂವರು ಅಕ್ಕಂದಿರು ಮತ್ತು ಇಬ್ಬರು ಅಣ್ಣಂದಿರು ಇದ್ದರು. ನಿನ್ನೆ ಎಸ್. ಎಸ್. ಎಲ್. ಸಿ. ಪರೀಕ್ಷೆ ಫಲಿತಾಂಶ ಬಂದಾಗ ಮೀನಾ ಉತ್ತೀರ್ಣ ಆಗಿದ್ದಳು. ಸೂರ್ಲಬ್ಬಿ ಶಾಲೆಯ ಹತ್ತನೇ ತರಗತಿಯಲ್ಲಿ ಈಕೆ ಏಕೈಕ ವಿದ್ಯಾರ್ಥಿನಿ.

ಆದರೆ ನಿನ್ನೆ ಈಕೆಯ ಪೋಷಕರು ಮೀನಾಳ ಮದುವೆ ನಿಶ್ಚಿತಾರ್ಥಕ್ಕೆ ಮುಂದಾಗಿದ್ದರು. 16 ವರ್ಷದ ಮೀನಾ ಜೊತೆ 32 ವರ್ಷದ ಪ್ರಕಾಶ್ ನನ್ನು ಮದುವೆ ಮಾಡಲು ನಿಶ್ಚಿತಾರ್ಥ ಸಿದ್ಧತೆ ನಡೆದಿತ್ತು.

ಆದರೆ ಈ ವಿಷಯ ಮಕ್ಕಳ ಸಹಾಯವಾಣಿಗೆ ಯಾರೋ ತಿಳಿಸಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ನಿಶ್ಚಿತಾರ್ಥ ತಡೆದಿದ್ದರು. ಎರಡು ಕಡೆಯವರಿಗೆ ತಿಳುವಳಿಕೆ ನೀಡಿ 18 ವರ್ಷ ಆದ ನಂತರವೇ ಮದುವೆ ಕಾರ್ಯಕ್ರಮ ಇಟ್ಟುಕೊಳ್ಳುವಂತೆ ಸೂಚಿಸಿದ್ದರು. ಇದನ್ನು ಉಭಯ ಕಡೆಯವರು ಒಪ್ಪಿಕೊಂಡಿದ್ದರು.

ಆದ್ರೆ ಸಂಜೆ 5.30 ರ ವೇಳೆಗೆ ಪ್ರಕಾಶ್ ಮತ್ತೆ ಮೀನಾಳ ಮನೆಗೆ ತೆರಳಿ ಆಕೆಯ ತಂದೆ ಹಾಗೂ ತಾಯಿಗೆ ಹಲ್ಲೆ ಮಾಡಿದ. ಮನೆಯಿಂದ ಮೀನಾಳನ್ನು ಸುಮಾರು 100 ಮೀಟರ್ ಹೊರಕ್ಕೆ ಎಳೆದುಕೊಂಡು ಹೋದ.

ಅಲ್ಲಿಯೇ ಮೀನಾಳ ದೇಹವನ್ನು ಕತ್ತರಿಸಿದ. ತಲೆಯನ್ನು ಕೂಡ ತುಂಡು ಮಾಡಿದ. ನಂತರ ದುಷ್ಕರ್ಮಿ ಪ್ರಕಾಶ್ ಆಕೆಯ ರುಂಡದೊಂದಿಗೆ ಪರಾರಿಯಾದ. ವಿಷಯ ತಿಳಿಯುತ್ತಿದ್ದಂತೆ ರಾತ್ರಿ ಎಸ್‌ ಪಿ ಮತ್ತು ಡಿ. ಎಸ್. ಪಿ ಸಹಿತ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿ ಪತ್ತೆಗಾಗಿ ಬಿರುಸಿನ ತನಿಕೆ ಕೈಗೊಂಡಿದ್ದಾರೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!