filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 47;

ಮಾಜಿ ಸಚಿವ ಎಚ್ ಆಂಜನೇಯರವರಿಗೆ ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಾ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರಿಗೆ ಜಗಳೂರು ತಾಲೂಕು ಮಾದಿಗ ಸಮಾಜದ ವತಿಯಿಂದ ಒತ್ತಾಯಿಸಿದರು.

Editor m rajappa vyasagondanahalli
By shukradeshenews Kannada | online news portal |Kannada news online

By shukradeshenews | published on may 23

ಜಗಳೂರು ಪಟ್ಟಣದ ಆದಿಜಾಂಬವ ವಿಧ್ಯಾರ್ಥಿ ನಿಲಯದಲ್ಲಿ ಜಗಳೂರು ತಾಲ್ಲೂಕು ಮಾದಿಗ ಸಮಾಜದ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರು ಒತ್ತಾಯಿಸಿದರು. ರಾಜ್ಯದಲ್ಲಿ ಮಾದಿಗ ಸಮಾಜದ ಮಾಸ್ ಲೀಡರ್ ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಪ ಮತಗಳಲ್ಲಿ ಪರಾಭವಗೊಂಡು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಆಪಾರವಾದ ಕೊಡುಗೆ ನೀಡಿದ ಎಚ್ ಆಂಜನೇಯರವರಿಗೆ ವಿಧಾನ ಪರಿಷತ್ ನಾಮನಿರ್ದೇಶನ ಸದಸ್ಯರನ್ನಾಗಿ ಆಯ್ಕೆ ಮಾಡುವಂತೆ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡ ಜಿ ಎಚ್ ಶಂಭುಲಿಗಪ್ಪ ಮನವಿ ಮಾಡಿಕೊಂಡರು.
ಮುಖಂಡ ಹಟ್ಟಿ ತಿಪ್ಪೇಸ್ವಾಮಿ ಮಾತನಾಡಿ ಮಾದಿಗ ಸಮಾಜದ ಎಚ್ ಆಂಜನೇಯರವರ ನಾಯಕತ್ವದಲ್ಲಿ ಹಿಡಿ ರಾಜ್ಯದ ಮಾದಿಗ ಸಮಾಜದವರು ಒಗ್ಗಾಟ್ಟಾಗಿ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸುತಾ ಬಂದಿರುವ ಪ್ರತಿಫಲವಾಗಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಅತ್ಯಂತ ಸಹಕಾರಿಯಾಗಿದೆ .ಆದ್ದರಿಂದ ಮತ್ತೊಷ್ಟು ಪಕ್ಷ ಸಂಘಟನೆಗೆ ಶ್ರಮಿಸಲು ನಮ್ಮ ನಾಯಕ ಆಜನೇಯಣ್ಣರವರಿಗೆ ಎಂ ಎಲ್ ಸಿ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಮನವಿ ಮಾಡಿಕೊಂಡರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನಕಾರ್ಯಧರ್ಶಿ ಪಲ್ಲಾಗಟ್ಟೆ ಶೇಖರಪ್ಪ ಮಾತನಾಡಿ ಮಾಜಿ ಸಚಿವರು ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದರು ಸಹ ದೃತಿಗೇಡದೆ ಪಕ್ಷ ಸಂಘಟನೆಗೆ ಶ್ರಮಿಸುತಾ ಸಂಸದರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹಗಲು ಇರುಳು ಶ್ರಮಿಸಿದ್ದಾರೆ ಎಂ.ಎಲ್ ಸಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು..

ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಮಿಕ ಸಂಘಟನೆ ಕಾರ್ಯಧರ್ಶಿ ಗುತ್ತಿದುರ್ಗ ರುದ್ರೇಶ್ ಮಾತನಾಡಿ ಎಚ್ ಆಂಜನೇಯರವರು ಒಂದು ಸಮುದಾಯದ ನಾಯಕರಲ್ಲ ಸರ್ವ ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಹಿತಾ ಚಿಂತಕ ಕಾಂಗ್ರೆಸ್ ಪಕ್ಷದಲ್ಲಿ ಹಳ್ಳಿಯಿಂದ ಡೆಲ್ಲಿಯವರೆಗೂ ನಮ್ಮ ನಾಯಕನ ಹೆಸರು ಪ್ರಚಲಿತದಲ್ಲಿದೆ ಅವರು ಸಚಿವರಿದ್ದಾಗ ಅನೇಕ ಮಹತ್ವದ ನಿಲುವಿನ ಕಾರ್ಯವೈಕರಿಗಳಿಂದ ಜನಪರವಾದ ಆಡಳಿತ ನಡೆಸಿ ಬಡವರ್ಗದ ಜನರಿಗೆ ಗಂಗಾಕಲ್ಯಾಣ ಯೋಜನೆ ಬೊರೆವೆಲ್ ಕೊರಸಿ ರೈತರ ನೆರವಿಗೆ ಚಾಚಿದ್ದರು .ಎಸ್ ಸಿ ಎಸ್.ಟಿ ಮಸೂದೆ ಮಂಡನೆಯಲ್ಲಿ ಬದಲಾವಣೆ ತಂದು ಗುತ್ತಿಗೆದಾರರಿಗೆ ಮೀಸಲು ಕಲ್ಪಿಸಿದ ಏಕೈಕ ನಾಯಕ ಎಚ್ ಆಂಜನೇಯರವರಿಗೆ ಎಂ.ಎಲ್.ಸಿ ಸ್ಥಾನ ಕಲ್ಪಿಸುವಂತೆ ರಾಜ್ಯ ಸರ್ಕಾರದ ಮಂತ್ರಿಮಂಡಲಕ್ಕೆ ಒತ್ತಾಯಿಸಿದರು.
. ಈ ಸಂದರ್ಭದಲ್ಲಿ ನಿವೃತ್ತ ನೌಕರ ಪಾಪಣ್ಣ.ಕೆಂಚಪ್ಪ.ನಿಬಗೂರು ಮುನಿಯಪ್ಪ.ಮಾಜಿ ಪಪಂ ಅದ್ಯಕ್ಷ ಮಂಜುನಾಥ.ಅಣಬೂರು ಗ್ರಾಪಂ ಅಧ್ಯಕ್ಷರ ಪತಿ ರೇಣುಕೇಶ್.ದೋಣಿಹಳ್ಳಿ
ಗ್ರಾಪಂ ಅಧ್ಯಕ್ಷೆ ತಿಪ್ಪೇಸ್ವಾಮಿ.ಮಾರುತಿ.ಸತೀಶ್ ಮಲೆಮಾಚಿಕೆರೆ . ಕ್ಯಾಸೆನಹಳ್ಳಿ ಹನುಮಂತಪ್ಪ.ಸೇರಿದಂತೆ ಮುಂತಾದವರು ಹಾಜುರಿದ್ದರು.

.

Leave a Reply

Your email address will not be published. Required fields are marked *

You missed

error: Content is protected !!