Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on may 24
ಬುದ್ದನ ಚಿಂತನೆಗಳು ಆಧುನಿಕ ಸಮಾಜಕ್ಕೆ ಸ್ಪೂರ್ತಿಯಾಗಬೇಕಿದೆ.
ಜಗಳೂರು ಸುದ್ದಿ:ಬುದ್ದನ ಚಿಂತನೆಗಳು ಆಧುನಿಕ ಸಮಾಜಕ್ಕೆ ಸ್ಪೂರ್ತಿಯಾಗಲಿ ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ವಕೀಲ ಮರೇನಹಳ್ಳಿ ಟಿ.ಬಸವರಾಜ್ ಅಭಿಮತ ವ್ಯಕ್ತಪಡಿಸಿದರು.
ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಮಾನವ ಬಂಧುತ್ವ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಬುದ್ದಪೂರ್ಣಿಮೆ’ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರೀತಿಯ ಅಂತಃಕರಣದ ಬೋಧನೆಗಳಿಂದ ಏಷ್ಯಾದ ಬೆಳಕಾಗಿದ್ದಲ್ಲದೆ, ನಿದ್ದೆಯಿಂದ ಎದ್ದು ಜಾಗೃತನಾದ ಜ್ಞಾನಿ,ವಿಕಸಿತನಾದ ಗೌತಮ ಬುದ್ದನ ಆಚಾರ, ವಿಚಾರಗಳು ಪ್ರಸ್ತುತ ಪ್ರಕ್ಷ್ಯುಬ್ದ ವಾತಾವರಣಕ್ಕೆ ಪ್ರಸ್ತುತ ಮತ್ತು ಅನಿವಾರ್ಯ’ ಎಂದು ತಿಳಿಸಿದರು.
‘ಸಮಾಜದಲ್ಲಿ ತುಳಿತಕ್ಕೊಳಗಾದವರ ಕಣ್ಣೀರು ಒರೆಸಿದ ದ್ವೇಷ,ಅಸೂಯೆ ನಿರ್ನಾಮ ಮಾಡಿ ಪ್ರೀತಿಯ ಚಿಲುಮೆಯಾಗಿರುವ ಬುದ್ದನ ತತ್ವಾದರ್ಶಗಳು ಡಾ.ಬಿ.ಆರ್ ಅಂಬೇಡ್ಕರ್ ,ಗಾಂಧೀಜಿ,ಸ್ವಾಮಿ ವಿವೇಕಾನಂದರ ವೈಚಾರಿಕ ಚಿಂತನೆಗಳಿಗೆ ಮೂಲ ಪ್ರೇರಕವಾಗಿವೆ’ ಎಂದರು.
ಪ್ರಾಂಶುಪಾಲ ಎ.ಡಿ.ನಾಗಲಿಂಗಪ್ಪ ಮಾತನಾಡಿ,’ಭಗವಾನ್ ಬುದ್ದ ಜ್ಞಾನೋದಯವಾದ,ಹುಟ್ಟಿದ,ಪರಿನಿರ್ವಾಣ ಹೊಂದಿದ ದಿನದ ಪ್ರತೀಕವಾಗಿ ದೇಶವ್ಯಾಪಿ ಬುದ್ದ ಪೂರ್ಣಿಮೆ ಆಚರಿಸಲಾಗುತ್ತಿದೆ.ಧರ್ಮವು ಮನುಕುಲ ಅನುಭವಿಸುತ್ತಿರುವ ಸಂಕಷ್ಟಗಳಿಗೆ ಸ್ಪಂದಿಸುವುದಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ವಕೀಲರಾದ ಆರ್.ಓಬಳೇಶ್,ಪಂಪಣ್ಣ,ರಂಗಸ್ವಾಮಿ,ನಾಗೇಶ್,ಸಣ್ಣ ಓಬಯ್ಯ,ತಿಪ್ಪೇಸ್ವಾಮಿ,ರುದ್ರೇಶ್,ಚಿಕ್ಕಮಲ್ಲನಹೊಳೆ ತಿಪ್ಪೇಸ್ವಾಮಿ,ಮಾನವಬಂಧುತ್ವ ವೇದಿಕೆ ತಾಲೂಕು ಸಂಚಾಲಕ ಧನ್ಯಕುಮಾರ್ ಎಚ್.ಎಂ.ಹೊಳೆ,ಮುಖಂಡರಾದ ಸಿ.ಬಸವರಾಜ್,ಮಾದಿಹಳ್ಳಿ ಮಂಜುನಾಥ್,ರವಿಕುಮಾರ್,ಮರೇನಹಳ್ಳಿ ಬಾಬು,ಸಂದೀಪ್ ಸಿ.ಎಂಹೊಳೆ,ರವಿಕುಮಾರ್,ಜಯ್ಯಣ್ಣ,ಜಗಜೀವನ್ ರಾಮ್,ಸೇರಿದಂತೆ ಇದ್ದರು.