Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on may 25
ಜಗಳೂರು ವಕೀಲರ ಸಂಘ: ಅಧ್ಯಕ್ಷರಾಗಿ ಬಸವರಾಜ್ ಮರೇನಹಳ್ಳಿ ಅವಿರೋಧ ಆಯ್ಕೆಯಾಗಿದ್ದು ಕಾರ್ಯಧರ್ಶಿಯಾಗಿ ಪರಶುರಾಮಪ್ಪ ಆಯ್ಕೆಯಾಗಿದ್ದಾರೆ.ಏಂದು ಚುನಾವಣೆ ಅಧಿಕಾರಿ ತಿಳಿಸಿದ್ದಾರೆ.
ಜಗಳೂರು:
ಅಧ್ಯಕ್ಷ ಸ್ಥಾನಕ್ಕೆ ಟಿ. ಬಸವರಾಜ್ ಮರೇನಹಳ್ಳಿ, ಬಿ. ಪಂಪಣ್ಣ ಹಾಗೂ ಎಸ್. ಹಾಲಪ್ಪ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಶನಿವಾರ ಬಿ. ಪಂಪಣ್ಣ ಹಾಗೂ ಎಸ್. ಹಾಲಪ್ಪ ಅವರು ತಮ್ಮ ನಾಮಪತ್ರಗಳನ್ನು ವಾಪಸ್ಸು ಪಡೆದಿದ್ದರಿಂದ ಟಿ. ಬಸವರಾಜ್ ಮರೇನಹಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. .
ಉಪಾಧ್ಯಕ್ಷರಾಗಿ ಜಿ.ಎಸ್. ಪ್ರಕಾಶ್ ಹಾಗೂ ಕಾರ್ಯದರ್ಶಿಯಾಗಿ ಎ.ಕೆ. ಪರಶುರಾಮ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಣ್ಣೋಬಯ್ಯ ಘೊಷಿಸಿದರು.
ಅಧ್ಯಕ್ಷರಾಗಿದ್ದ ಇ. ಓಂಕಾರಪ್ಪ , ಕಾರ್ಯದರ್ಶಿ ಕೆ.ವಿ. ರುದ್ರೇಶ್ ಅವರ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ ತಾಲ್ಲೂಕು ವಕೀಲರ ಸಂಘಕ್ಕೆ ಚುನಾವಣೆ ನಡೆಯಿತು.