Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on may25

ಅಸಗೋಡು ಜಯಸಿಂಹ ಅವರಿಗೆ ಪರಿಷತ್ತು ಟಿಕೇಟ್ ಕೊಡಿ:ಶಿವಕುಮಾರ್ ಆಗ್ರಹ ಜಯಸಿಂಹ ಅವರಿಗೆ ಪರಿಷತ್ತು ಟಿಕೇಟ್ ಕೊಡಿ:ಶಿವಕುಮಾರ್ ಆಗ್ರಹ

ಜಗಳೂರು ಸುದ್ದಿ:ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ ಅವರಿಗೆ ವಿಧಾನಪರಿಷತ್ ಸದಸ್ಯ ಚುನಾವಣೆಗೆ ಕಾಂಗ್ರೆಸ್ ಪಕ್ಷ ಟಿಕೇಟ್ ನೀಡಬೇಕು ಎಂದು ಮುಖಂಡ ಹನುಮಂತಾಪುರ ಶಿವಕುಮಾರ್ ಒತ್ತಾಯಿಸಿದರು.

ಪಟ್ಟಣದ ಹಳೇಕ್ಲಬ್ ನಲ್ಲಿ ಜಯಸಿಂಹ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಮುಖಂಡರಿಂದ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

1972 ರ ಕಾಲಘಟ್ಟದ ಮಾಜಿ ಸಚಿವ ದಿವಂಗತ ಅಶ್ವತ್ಥರೆಡ್ಡಿ ಅವರ ಅಡಳಿತದಿಂದಲೂ 5 ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ನಿರಂತರ ಸೇವೆಗೈಯುತ್ತಿದ್ದು.ಅವರ ತಂದೆ ಒಬ್ಬ ಸ್ವಾತಂತ್ರ ಹೊರಾಟಗಾರರಾಗಿದ್ದ ಇತಿಹಾಸವಿದೆ.ಜಯಸಿಂಹ ಅವರು ಕ್ಷೇತ್ರದಲ್ಲಿ ವಿವಿಧ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.ಪಕ್ಷ ನಿಷ್ಠೆ,ಪ್ರಾಮಾಣಿಕತೆ ಪರಿಗಣಿಸಿ ಜೂನ್ 13 ರಂದು ನಡೆಯಲಿರುವ ಮೇಲ್ಮನೆ ವಿಧಾನ ಪರಿಷತ್ತು ಚುನಾವಣೆಯಲ್ಲಿ ಟಿಕೇಟ್ ನೀಡಿ ಪರಿಷತ್ತು ಸದಸ್ಯರನ್ನಾಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ,ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಆಗ್ರಹಿಸಿದರು.

ಕೆಪಿಸಿಸಿ ಎಸ್ ಸಿ ಘಟಕದ ಸದಸ್ಯ ಸಿ.ತಿಪ್ಪೇಸ್ವಾಮಿ ತಾಲೂಕಿನ ಮೆದಗಿನಕೆರೆ ಪಟೇಲ್‌ ಕಲ್ಲಿಂಗಪ್ಪ ಗೌಡ್ರು ಅವರು 1907 ರಲ್ಲಿ ಮೈಸೂರು ಸಂಸ್ಥಾನಕ್ಕೆ ಮೈಸೂರು ಪ್ರಜಾಪ್ರತಿನಿಧಿ ಸಭೆ (ಎಂಆರ್ ಎ) ಗೆ ಆಯ್ಕೆಯಾದ ಇತಿಹಾಸವಿದೆ.ಚಿಂತಕರ ಚಾವಡಿಯಾಗಿದ್ದ ಪರಿವರ್ತಿತ ವಿಧಾನ ಪರಿಷತ್ತಿಗೆ ಪ್ರಸಕ್ತವಾಗಿ ಅಸಗೋಡು ಜಯಸಿಂಹ ಅವರಿಗೆ ವಿಧಾನ ಪರಿಷತ್ತು ಸದಸ್ಯರಾಗಲು ಕಾಂಗ್ರೆಸ್ ಪಕ್ಷ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.

ಮಾಜಿ ಪ.ಪಂ‌‌ ಸದಸ್ಯ ಹಟ್ಟಿ ತಿಪ್ಪೇಸ್ವಾಮಿ ಮಾತನಾಡಿ,ಅಸಗೋಡು ಜಯಸಿಂಹ ಅವರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರೂ ಬ್ರಾಹ್ಮಣ್ಯತ್ವ ತೊರೆದು ಎಲ್ಲಾ ವರ್ಗದವರ ಧ್ವನಿಯಾಗಿರುವ ಜಾತ್ಯಾತೀತ ನಾಯಕರಿಗೆ ಕಾಂಗ್ರೆಸ್ ಪಕ್ಷ ಪರಿಷತ್ತು ಸದಸ್ಯದ ಟಿಕೇಟ್ ಕೊಡಬೇಕು ಎಂದು ಮನವಿಮಾಡಿದರು.

ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ವಾಲಿಬಾಲ್ ತಿಮ್ಮಾರೆಡ್ಡಿ,ಪ್ರಕಾಶ್ ರೆಡ್ಡಿ,ಪುಟ್ಟಣ್ಣ,ಚಿತ್ತಣ್ಣ,ಬಿ.ಮಹೇಶ್ವರಪ್ಪ,ಜಗಳೂರಯ್ಯ,ಸುಧೀರ್ ರೆಡ್ಡಿ,ಚಂದ್ರಪ್ಪ,ಕಾಟಜ್ಜ,ಓಬಣ್ಣ,ಗೌರಿಪುರ ಹೇಮಣ್ಣ,ಸೇರಿದಂತೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!