Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on may 30.

ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಮತಯಾಚನೆ.

ಜಗಳೂರು ಸುದ್ದಿ:ಆಗ್ನೇಯ ಕ್ಷೇತ್ರದ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರು ವಿವಿಧ ಕಾಲೇಜು ಪ್ರೌಢಶಾಲೆಗಳಿಗೆ ತೆರಳಿ ತಮ್ಮಪರ ಮತಯಾಚನೆ ಮಾಡಿದರು.

ತಾಲೂಕಿನ ದೇವರಾಜ್ ಅರಸ್ ,ರಾಜರಾಜೇಶ್ವರಿ,ನಾಲಂದ ಪದವಿಪೂರ್ವ ಕಾಲೇಜುಗಳ,ಮೆದಗಿನಕೆರೆ ಮೊರಾರ್ಜಿ ವಸತಿ ಶಾಲೆ,ಸೇರಿದಂತೆ ವಿವಿಧ ಪ್ರೌಢ ಶಾಲೆಗಳಲ್ಲಿ ಉಪನ್ಯಾಸಕರು ಹಾಗೂ ಶಿಕ್ಷಕರುಗಳಿಗೆ ಮತಯಾಚಿಸಿ ನಂತರ ಮಾತನಾಡಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ನನ್ನನ್ನು ವಿಧಾನ ಪರಿಷತ್ತು ಸದಸ್ಯನನ್ನಾಗಿ ಆಯ್ಕೆಗೊಳಿಸಿದರೆ.ರಾಜ್ಯದಲ್ಲಿನ ಕಾಂಗ್ರೆಸ್ ಆಡಳಿತ ಸರಕಾರದ ಸಹಕಾರದಿಂದ,ಸ್ಥಳೀಯ ಶಾಸಕರ ಸಹಯೋಗದಲ್ಲಿ ಶಿಕ್ಷಕರ,ಉಪನ್ಯಾಸಕರುಗಳ ಸಮಸ್ಯೆಗಳ ಧ್ವನಿಯಾಗುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದಿಂದ ನಾನು ಶಾಸಕನಾಗಿ ಆಯ್ಕೆಯಾಗಿರುವೆ.ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರಿಗೆ ಮೊದಲನೇ ಪ್ರಾಶಸ್ತ್ಯದ ಮತದಾನಮಾಡುವ ಮೂಲಕ ಶಿಕ್ಷಕ,ಉಪನ್ಯಾಸಕ ವರ್ಗದ ಮತದಾರರು ಬೆಂಬಲಿಸಿಬೇಕು.ವಿಧಾನ ಪರಿಷತ್ತು ಸದಸ್ಯರೂ ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡರೆ,ಶಿಕ್ಷಣ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಸಾಕ್ಷಿಕರಿಸಿದಂತಾಗುತ್ತದೆ ಎಂದು ಮನವಿಮಾಡಿದರು.

ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ,ಮುಖಂಡರಾದ ಬಿ. ಮಹೇಶ್ವರಪ್ಪ, ಸಣ್ಣ ಸೂರಯ್ಯ,ಕಲ್ಪನಾ, ತಿಪ್ಪೇಸ್ವಾಮಿ ಗೌಡ,ಪುರುಷೋತ್ತಮ ನಾಯ್ಕ,ಷಂಷುದ್ದಿನ್ ಎಂ.ಎಸ್. ಪಾಟೀಲ್,ಜೀವಣ್ಣ ಸೇರಿದಂತೆ ಉಪನ್ಯಾಸಕರು,ಶಾಲಾ ಶಿಕ್ಷಕರುಗಳು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!