ನೂತನ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮರೆನಹಳ್ಳಿ ಬಸವರಾಜ್ ರವರಿಗೆ ಕಾಂಗ್ರೆಸ್ ಎಸ್ಸಿ ಘಟಕದ ತಾಲ್ಲೂಕು ಅದ್ಯಕ್ಷ ಬಿ .ಮಹೇಶ್ ರವರು ಸನ್ಮಾನಿಸಿ ಗೌರವಿಸಿದರು.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಮೇ 31
ಜಗಳೂರು ಪಟ್ಟಣದ ಪಪಂ ಕಛೇರಿ ಆವರಣದಲ್ಲಿ ನೂತನ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಸವರಾಜ್ ರವರಿಗೆ ಎಸ್ಸಿ ಘಟಕದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ತಾಲ್ಲೂಕು ಅದ್ಯಕ್ಷರಾದ ಬಿ ಮಹೇಶ್ ರವರು ಸನ್ಮಾನಿಸಿ ಶುಭಾ ಕೋರಿ ಮಾತನಾಡಿದರು ನೂತನ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಯುವ ವಕೀಲರಿಗೆ ಆದ್ಯತೆ ನೀಡಿ ಇಂತ ಉನ್ನತ ಸ್ಥಾನಕ್ಕೆ ಶ್ರೀಯುತ ಬಸವರಾಜ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಅರ್ಥಪೂರ್ಣವಾಗಿದೆ ಶ್ರೀಯುತರು ಮತ್ತು ಅವರ ತಂಡ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಮತ್ತಷ್ಟು ಉತ್ತಂಗಕ್ಕೆ ಬೆಳೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯ ಎಸ್ಟಿ ಘಟಕದ ಅದ್ಯಕ್ಷ ಕೆ.ಪಿ ಪಾಲಯ್ಯ.ಮಾಜಿ ತಾಪಂ ಅದ್ಯಕ್ಷ ಯು.ಜಿ ಶಿವಕುಮಾರ್.ಮಾಜಿ ತಾಪಂ ಸದಸ್ಯ ನಿಜಲಿಂಗಪ್ಪ.ಮಾಜಿ ಪಪಂ ಅಧ್ಯಕ್ಷ ನಾಗೇಂದ್ರರೆಡ್ಡಿ.ಮಾಜಿ ಪಪಂ ಅಧ್ಯಕ್ಷ ಮಾಜಿ ಮಂಜಣ್ಣ. ಮಾಜಿ ಗ್ರಾಪಂ ಸದಸ್ಯ ಮರೆನಹಳ್ಳಿ ನಾಗರಾಜ್ ಸೇರಿದಂತೆ ಮುಂತಾದವರು ಹಾಜುರಿದ್ದರು.