ಸರ್ಕಾರಿ ನೌಕರರಿಗೆ ವಯೋ ನಿವೃತ್ತಿ ಅನಿವಾರ್ಯ ಆದರೆ ಸೇವೆ ಮಾಡಿದ ಅವಧಿಯಲ್ಲಿ ಜನರು ಸ್ಮರಿಸುವಂತ ಕೆಲಸ ಬಹುಮುಖ್ಯ ಎಂದು ತಾಪಂ ಇಓ ಶ್ರೀಕಂಠದತ್ತ ಅರಸು ಅಭಿಪ್ರಾಯಪಟ್ಟರು.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜೂನ್ 1
ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ವಯೋ ನಿವೃತ್ತಿ ಹೊಂದಿದ ನೌಕರರಾದ ತೋರಣಗಟ್ಟೆ ಗ್ರಾಪಂ ಪಿಡಿಓ ಬಸವರಾಜಯ್ಯ ಹಾಗೂ . ಬಿಸ್ತುವಳ್ಳಿ ಪಂಚಾಯಿತಿ ಕಾರ್ಯಧರ್ಶಿ ಚನ್ನಬಸಪ್ಪ. ಹನುಮಂತಪುರ ಗ್ರಾಪಂ ಕಾರ್ಯಧರ್ಶಿ ಸುರೇಶ್ ಇವರುಗಳು ವಯೋ ನಿವೃತ್ತಿ ಸಮಾರಂಭ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕುರಿತು ತಾಪಂ ಇಓ ಮಾತನಾಡಿದರು ಇದುವರೆಗೂ ಸರ್ಕಾರಿ ನೌಕರಿ ಅವಧಿಯಲ್ಲಿ ಸೇವೆ ಸಲ್ಲಿಸಿದ ಪಿಡಿಓ ಬಸವರಾಜಯ್ಯ. ಹಾಗೂ ಚನ್ನಬಸಪ್ಪ.ಸುರೇಶ್ ರವರ ನಿವೃತ್ತಿಯ ದಿನಗಳು ಸುಖಕರವಾಗಿರಲು ಬಹುಮುಖ್ಯವಾಗಿ ನೆಮ್ಮದಿಯ ಜೀವನಕ್ಕೆ ಕಳೆಯಲು ಈ ಒಂದು ನಿವೃತ್ತಿ ಸಾಕ್ಷಿಯಾಗಿದೆ.
.
ನಿವೃತ್ತಿ ಹೊಂದಿದ ಮೇಲೆ ಕೆಲಸದಲ್ಲಿದ್ದಾಗ ಮಾಡುವಂತೆಯೇ ಖರ್ಚುಗಳನ್ನು ಮಾಡಲಾಗುವುದಿಲ್ಲ. ಹೀಗಾಗಿ ಜೀವನ ಶೈಲಿಯನ್ನು ಕೂಡ ಬದಲಾಯಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಪಿಡಿಓ ಲೋಹಿತ ಮಾತನಾಡಿ ಪ್ರಸ್ತುತದ ವಿದ್ಯಾಮಾನದಲ್ಲಿ ನಾವು ಎರಡು ಮೂರು ಪದವಿ ಪಡೆದು ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ನೀಡುತಾ ಬಂದರು ಸಹ ಜನರ ಬಳಿ ನಮ್ಮ ಹುದ್ದೆ ನಿಭಾಯಿಸಲು ಸೋತುಹೋಗುತ್ತೆವೆ ಆದ್ದರಿಂದ ಪದವಿ ಪಡೆಯದೆ ಕೆಳ ಹಂತದಿಂದ ನೌಕರಿ ಮಾಡಿ ಅಭಿವೃದ್ಧಿ ಅಧಿಕಾರಿಗಳಾಗಿ ಸುಧಿರ್ಘ ಸೇವೆ ನೀಡಿದ ಬಸವರಾಜಯ್ಯರವರಂತ ಅನುಭವದ ಮಾರ್ಗದರ್ಶನ ಬಹುಮುಖ್ಯ ಎಂದರು.
ಪಿಡಿಓ ವಾಸು ಮಾತನಾಡಿದರು
ಈ ಸಂದರ್ಭದಲ್ಲಿ ತಾಪಂ ವ್ಯವಸ್ಥಾಪಕ ರವಿಕುಮಾರ್ .ತಾಪಂ ಎನ್ ಆರ್ ಇಜಿ ಸಹಾಯಕ ನಿರ್ದೇಶಕ ಬೋರಯ್ಯ. ಪಿಡಿಓ ಅರವಿಂದ್ . ಒಬಣ್ಣ.ಸೇರಿದಂತೆ ಸಿಬಂದಿಗಳು ಮುಂತಾದವರು ಹಾಜರಿದ್ದರು