ಜಗಳೂರು ತಾಲ್ಲೂಕು ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಡಿ.ಬಿ ಪ್ರಭುದೇವರವರು ಪ್ರಮೋಷನ್ ಸರ್ಕಾರಿ ನೀಯಮನುಸಾರವಾಗಿ ದಿನಾಂಕ 30 _5_2024 ರಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಗಿ ಪದೋನ್ನತ್ತಿ ಪಡೆದು ಕೋಲಾರದ ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರ ಸ್ವೀಕರಿಸಿಕೊಂಡ ಪ್ರಭುದೇವ ಮರುದಿನ ದಿನಾಂಕ ಮೇ 31 ರಂದು ವಯೊಸಹಜ ನಿವೃತ್ತಿ ಹೊಂದಿದ ಏಕೈಕ ಅಧಿಕಾರಿಯ ಯಶೋಗಾಥೆ ವೈಶಿಷ್ಟ್ಯ ಪೂರ್ಣವಾಗಿದೆ.

Editor m rajappa vyasagondanahalli
By shukradeshenews Kannada | online news portal |Kannada news online

By shukradeshenews | published on
ಜೂನ್ 1

ಡಿ .ಬಿ.ಪ್ರಭುದೇವರವರು ಜಗಳೂರು ತಾಲ್ಲೂಕಿನ ಚಿಕ್ಕಬಂಟನಹಳ್ಳಿ ಗ್ರಾಮದ ತಾಯಿ ಶ್ರೀಮತಿ ಶರಣಮ್ಮ ತಂದೆ ದೇವಕಿ ಬಸವರಾಜಪ್ಪ ಎಂಬುವರ ದ್ವಿತೀಯ ಪುತ್ರನಾಗಿ ಜನಿಸಿದ ಇವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನ ಸ್ವಗ್ರಾಮದಲ್ಲಿಯೆ ಪಡೆದು ಹೆಚ್ಚಿನ ಪ್ರೌಢ ಶಾಲಾ ವಿದ್ಯಾಭ್ಯಾಸವನ್ನ ಸರ್ಕಾರಿ ಬಾಲಕರ ಪ್ರೌಢ ಶಾಲೆ ಕೊಟ್ಟರಿನಲ್ಲಿ ಮುಗಿಸಿ ನಂತರ ತುಮಕೂರು ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ಡಿಪ್ಲೊಮಾ ವಿಧ್ಯಾಭ್ಯಾಸ ಮುಗಿಸಿ ಕೆಲಸಕ್ಕಾಗಿ ಅಲೆಯುತಾ ಕೊನೆಗೆ ಜಗಳೂರು ಲೋಕೋಪಯೋಗಿ ಇಲಾಖೆಯಲ್ಲಿ 1985 ರಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತಾ ಬಂದ ಪ್ರಭುರವರಿಗೆ ಇಲಾಖೆ ಗುರುತಿಸಿ 1995 ರಲ್ಲಿ ಖಾಯಂ ಹುದ್ದೆ ಪರಿಗಣಿಸಿತು ಆ ದಿನದಿಂದಲೂ ಇಲ್ಲಿಯವರೆಗೂ ಕಾಯಕವೆ ಕೈಲಾಸ ಎಂಬುವಂತೆ ನಿತ್ಯ ಸೇವೆಯನ್ನೆ ದೇವರೆಂದು ನಂಬಿ ಇಲಾಖೆಯಲ್ಲಿ ಪ್ರಮಾಣಿಕವಾಗಿ ಅಮೋಘವಾದ ಸೇವೆಗೆ ಸಾಕ್ಷಿಯಾಗಿದ್ದಾರೆ.ಇವರ ಸೇವಾವಧಿಯಲ್ಲಿ ಇಲಾಖೆ ಕಾರ್ಯವೈಖರಿಯಲ್ಲೂ ಸಹ ಶಿಸ್ತುಬದ್ಧ ಸಂಯಮದ ನಡೆ ನುಡಿಗೆ ಮತ್ತೊಂದು ಹೆಸರೆ ಡಿ .ಬಿ ಪ್ರಭುದೇವ ಎಂದರೆ ಅಪರೂಪದ ವ್ಯಕ್ತಿತ್ವವುಳ್ಳ ಸ್ನೇಹಮಯಿ ಇವರು ಎಲ್ಲಾ ಅಧಿಕಾರಿಗಳೊಂದಿಗೆ ಪ್ರಿತಿ ವಿಶ್ವಾಸವೆ ಇವರ ಔದರ್ಯದ ಗುಣ ಸ್ವಭಾವ ಅಜಾತ ಶತ್ರು ಇಂದಿಗೂ ಇವರ ಹೆಸರು ಇಲಾಖೆಯಲ್ಲಿ ಪ್ರಚಲಿತದಲ್ಲಿದೆ .

ಜಗಳೂರು ತಾಲ್ಲೂಕಿನಲ್ಲಿ ಉತ್ತಮ ಕಾರ್ಯವೈಖರಿ ಮೂಲಕ ಸೇವೆ ಸಲ್ಲಿಸಿ ಇದೀಗ ಸರ್ಕಾರದ ನೀಯಮದಂತೆ ಕೋಲಾರ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯಾಲಕರಾಗಿ ಎ.ಇ.ಇ ಹುದ್ದೆಗೆ ಪದನ್ನೋತಿ ಹೊಂದಿ ಅಧಿಕಾರ ಸ್ವಿಕಾರಮಾಡಿಕೊಂಡು ವಯೋ ನಿವೃತ್ತಿ ಹೊಂದಿದ ಶ್ರೀಯುತರಿಗೆ ಜಗಳೂರು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ನಾಗರಾಜ್ ಹಾಗೂ ಸಿಬ್ಬಂದಿ ವರ್ಗ ಸನ್ಮಾನಿಸಿ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭಾ ಕೋರಿದ್ದಾರೆ.

ನಮ್ಮ ಶುಕ್ರದೆಸೆನ್ಯೂಸ್ ಪತ್ರಿಕೆಯೊಂದಿಗೆ ಆ ದಿನದ ಸವಿ ಸವಿ ನೆನಪು ಬಿಚ್ಚಿಟ್ಟ ಅಧಿಕಾರಿ ಡಿ.ಬಿ. ಪ್ರಭುದೇವರವರ ಮನದಾಳದ ಮಾತು ಅಂದಿನ ದಿನಮಾನಗಳಲ್ಲಿ ನಮ್ಮ ಕುಟುಂಬದ ನಿರ್ವಹಣೆ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಗ್ರಾಮೀಣ ಪ್ರದೇಶಗಳಲ್ಲಿ ಜೀವಿಸುವುದೆ ಒಂದು ದುಸ್ತರವಾಗಿತ್ತು ತಂದೆಯ ಜೊತೆಗೆ ಜಮೀನು ಕೆಲಸ ಮಾಡಿದ್ದುಂಟು ಕೆಲಸಕ್ಕಾಗಿ ಅಲೆದು ಕೊನೆಗೆ ಜಗಳೂರು ಲೋಕೋಪಯೋಗಿ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇರಿಕೊಂಡು ಅದೇ ಇಲಾಖೆಯಲ್ಲಿ ಸುಮಾರು 35 ವರ್ಷಗಳ ಕಾಲ ಬೇರಡೆಗೆ ವರ್ಗಾವಣೆಯಾಗದೆ ಸುದೀರ್ಘ ಸರ್ಕಾರಿ ಸೇವೆ ಸಲ್ಲಿಸಿರುವೆ ನನ್ನ ಸೇವಾವಧಿ ನನಗೆ ತೃಪ್ತಿ ತಂದಿದೆ .

Leave a Reply

Your email address will not be published. Required fields are marked *

You missed

error: Content is protected !!