ಪರಿಹಾರ ಕೋಡಿ ಇಲ್ಲ ಜಾಗ ಖಾಲಿ ಮಾಡಿ ವಿಂಡ್ ಫ್ಯಾನ್ ಸಂಪರ್ಕ ಸ್ಥಗಿತಗೊಳಿಸುವಂತೆ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜೂನ್ 2
ಜಗಳೂರು ಸುದ್ದಿ:
ತಾಲೂಕಿನ ಬಿದರಕೆರೆ ಗ್ರಾಮದ ರೈತನ ಜಮೀನಿನೊಂದರಲ್ಲಿ ಆಳವಡಿಸಿರುವ ಹೈಟೇನ್ಷನ್ ಲೈನ ಆಳವಡಿಸಿರುವ ಹಿನ್ನೆಲೆಯಲ್ಲಿ ರೈತನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಹರಿಯಾಣ ಮೂಲದ ಖಾಸಗಿ ರಿನಿವ್ಯೋ ವಿಂಡ್ ಫ್ಯಾನ್ ಕಂಪನಿ ವಿರುದ್ದ ಸ್ಥಳದಲ್ಲಿಯೇ ರೈತರು ಪೆಂಡಲ್ ಹಾಕಿ ಬೆಳಿಗ್ಗೆಯಿಂದ ಸಂಜೆತನಕ ಕರ್ನಾಟಕ ರಾಜ್ಯ ರೈತ ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಸುಮಾರು ಮೂರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ಜಮೀನು ಮಾಲಿಕನಿಗೆ ಪರಿಹಾರ ನೀಡಲೆಬೇಕು ಇಲ್ಲ ಜಾಗ ಖಾಲಿ ಮಾಡಿ ಎಂದು ಫ್ಯಾನ್ ವಿದ್ಯುತ್ ಲೈನ್ ಸಂಪರ್ಕ ಸ್ಥಗಿತಗೊಳಿಸಿ ಕಡಿತಗೊಳಿಸಿ ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹಾಗೂ ಜಮೀನಿನ ಮಾಲಿಕ ಉಜ್ಜನಗೌಡ್ರು ಮಾತನಾಡಿದರು,ನಮ್ಮ ಸ್ವಂತಕ್ಕೆ ಸೇರಿದ ಸರ್ವೆ ನಂಬರ್ 60/4 ಜಮೀನಿನಲ್ಲಿ ರಿನಿವ್ ವಿಂಡ್ ಫ್ಯಾನ್ ಕಂಪನಿ ಕಳೆದ ಮೂರು ವರ್ಷಗಳ ಹಿಂದೆ ನಮ್ಮ ಜಮೀನಿನಲ್ಲಿ ದೌರ್ಜನ್ಯದಿಂದ ಆಕ್ರಮವಾಗಿ ವಿಂಡ್ ಫ್ಯಾನ್ ನ ಹೈ ಟೆನ್ಷನ್ ವಿದ್ಯುತ್ ಸಂಪರ್ಕದ ಲೈನ್ ಎಳೆದಿರುವುದರಿಂದ ನಾವು ಕೃಷಿ ಚಟುವಟಿಕೆ ಮಾಡಲು ಅಡ್ಡಿಯಾಗಿದೆ.ನಾವು ಜಮೀನಿನಲ್ಲಿ ಕೆಲಸ ಮಾಡುವಾಗ ವಿದ್ಯುತ್ ಸ್ಪರ್ಶ ಆನಾಹುತ ಆಗುವ ಅತಂಕವಿದೆ ನಮ್ಮ ಜಮೀನಿನಲ್ಲಿ ಎಳೆಯಲಾದ ಪವರ್ ಲೈನ್ ಗೆ ಬರುವಂತ ಪರಿಹಾರಕ್ಕಾಗಿ ತಡೆಯೊಡ್ಡಿದ್ದೆವೆ ..ಈ ಹಿಂದೆ ಕಂಪನಿಯವರು ಮಾರುಕಟ್ಟೆ ಬೆಲೆಯನ್ವಯ ₹60 ಲಕ್ಷ ಪರಿಹಾರ ಭರಿಸಲು ಭರವಸೆ ನೀಡಿದ್ದರು
ಆದರೆ ಸಂಬಂಧಿಸಿದ ರಿನಿವ್ ಕಂಪನಿಯವರು ಇದುವರೆಗೂ ಯಾವುದೇ ಪರಿಹಾರ ಹಣ ನೀಡದೆ ವಂಚಿಸಿ ಜಮೀನು ಮಾಲಿಕರಿಗೆ ಪರಿಹಾರ ನೀಡಿದ್ದೇವೆ ಎಂಬ ಸುಳ್ಳು ಆರೋಪ ಮಾಡಿ ನಮ್ಮ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿ ತುಳಿಯುವ ಷಡ್ಯಂತ್ರ ಎಂದರು . ಪಕ್ಕದ ಜಮೀನಿನ ರೈತರಿಗೆ ಪ್ರತಿ ಗುಂಟೆಗೆ ₹300,000 ದವರೆಗೂ ಪರಿಹಾರ ಹಣ ಕೊಟ್ಟಿದ್ದಾರೆ.ಅಂತೆಯೇ 30 ಗುಂಟೆ ವ್ಯಾಪ್ತಿ ಜಮೀನಿನಲ್ಲಿ ವಿದ್ಯುತ್ ಸಂಪರ್ಕ ಲೈನ್ ಎಳೆದಿದ್ದು ಪ್ರತಿ ಗುಂಟೆಗೆ ಕೇವಲ ₹200,000 ದಂತೆ ಒಟ್ಟು ₹60ಲಕ್ಷ ಪರಿಹಾರ ಹಣ ನೀಡಲಿ ಇಲ್ಲವಾದರೆ ವಿದ್ಯುತ್ ಲೈನ್ ತೆರವುಗೊಳಿಸಿ ನಮ್ಮ ಜಮೀನಿಂದ ಜಾಗ ಖಾಲಿ ಮಾಡಲಿ ಎಂದು ಆಗ್ರಹಿಸಿದರು.
ನಾನು ನಮ್ಮ ಜಮೀನಿನ್ನಲ್ಲಿ ಕೃಷಿಯೇತರ ಚಟುವಟಿಕೆಗೆ ಉದ್ದಿಮೆ ಆರಂಭಿಸಲು ಈಗಾಗಲೇ ಜಿಲ್ಲಾಧಿಕಾರಿ ಕಛೇರಿಯಲ್ಲಿ (ಎನ್ ಎ) ಅನುಮತಿಗೆ ಅರ್ಜಿ ಸಲ್ಲಿಸಿದ್ದೆನೆ .ಈ ಬಾಗದಲ್ಲಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಸೌತೆ ಕಂಪನಿ ಪ್ರಾರಂಭಿಸಿ ಈ ಬಾಗದಲ್ಲಿ ಉದ್ಯೋಗ ಕಲ್ಪಿಸುವಂತ ಉದ್ದೇಶವಿದೆ .ಆದರೆ ಕಂಪನಿಯವರು ನಮ್ಮ ಹನುಮತಿಯಿಲ್ಲದೆ ಏಕಾಎಕಿ ಫ್ಯಾನ್ ನ ವಿದ್ಯುತ್ ಸಂಪರ್ಕದ ಲೈನ್ ಆಳವಡಿಸಿರುವುದರಿಂದ ನಮ್ಮ ಕಾರ್ಯಚಟುವಟಿಗೆ ಅಡ್ಡಿಯಾಗಿದೆ ಶೀಘ್ರ ಬೇಡಿಕೆ ಈಡೇರಿಸದಿದ್ದರೆ ಲೈನ್ ಕಿತ್ತು ಹಾಕಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ..
ಈ ಸಂದರ್ಭದಲ್ಲಿ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮೆಳ್ಳೆಕಟ್ಟೆ ಪದ್ಮ,ರಾಜ್ಯ ಕಾರ್ಯಾಧ್ಯಕ್ಷ ನೆಲವೆನ್ನಿ ರಮೇಶ್ ,ರಾಜ್ಯ ಉಪಾಧ್ಯಕ್ಷೆ ಅನಿತಮ್ಮ,ರಾಜ್ಯ ಕಾರ್ಯದರ್ಶಿ ಭಾಗ್ಯಮ್ಮ,ಮಂಜುನಾಥ್,ಜಿಲ್ಲಾಧ್ಯಕ್ಷೆ ಗೀತಮ್ಮ,ತಾಲೂಕು ಅಧ್ಯಕ್ಷೆ ಚೌಡಮ್ಮ,ಮುಖಂಡರಾದ ಬಸವರಾಜ್,ಚಂದ್ರಣ್ಣ.ಶಶಿಕಲಾ ,ಸೇರಿದಂತೆ ಭಾಗವಹಿಸಿದ್ದರು.