ಅನರ್ಹರಿಗೆ ಕಿಟ್ ವಿತರಣೆ ಆರ್ಹ ಕಾರ್ಮಿಕರಿಗೆ ಅನ್ಯಾಯ ಸಾರ್ವಜನಿಕರ ಆರೋಪ.
ಶುಕ್ರದೆಸೆ ನ್ಯೂಸ್: ಜಗಳೂರು:ಜಗಳೂರು ತಾಲ್ಲೂಕಿನ ಕಾರ್ಮಿಕರಿಗೆ ಹಾಗೂ ಅವರ ಮಕ್ಕಳಿಗೆ ನೀಡಬೇಕಾದ ಕಿಟ್‍ಗಳನ್ನು ಅರ್ಹ ಫಲಾನುಭವಿಗಳಿಗೆ ನೀಡದೆ ಅನರ್ಹರಿಗೆ ನೀಡಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಕಛೇರಿಗೆ ತೆರಳಿ ತಹಶೀಲ್ದಾರ್ ಜಿ ಸಂತೋಷಕುಮಾರ್ ರವರಿಗೆ ಕಿಟ್ ಕೋಡಿಸುವಂತೆ ಮೌಕಿಕವಾಗಿ ಪ್ರತಿಭಟಿಸಿ ಒತ್ತಾಯಿಸಿದರು.
ಸರ್ಕಾರ ಕೆಲವು ವೃತ್ತಿಗೆ ಸಂಬಂಧಿಸಿದ ಟೂಲ್‍ಕಿಟ್ ಹಾಗೂ ಅವರ ಮಕ್ಕಳಿಗೆ ಶಿಕ್ಷಣಕ್ಕೆ ನೋಟ್ ಬುಕ್ ಸೇರಿದಂತೆ ವಿವಿದ ರೀತಿಯ ಸಂಬಂಧಿಸಿದ ಕಿಟ್‍ಗಳನ್ನು ಕೊಡುತ್ತಿದೆ. ಆದರೆ, ಇಲ್ಲಿನ ಅಧಿಕಾರಿಗಳು ಮಾತ್ರ ಸರ್ಕಾರ ನೀಡಿದಂತ ಅರ್ಹ ಫಲಾನುಭವಿಗಳಿಗೆ ನೀಡದ ಕಿಟ್ ಗಳನ್ನು ಅನರ್ಹರಿಗೆ ನೀಡುತ್ತಿದ್ದಾರೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾದಂತಾಗಿ ಸರ್ಕಾರದ ಯೋಜನೆಗಳಿಂದ ದೂರ ಉಳಿಯುವಂತಾಗಿದೆ ಎಂದು ಕಾರ್ಮಿಕರು ಆರೋಪಿಸಿದರು.
ಕಿಟ್ ಗಳುನ್ನು ಇಲಾಖೆಯವರು ಭಾನುವಾರ ರಜಾ ಅವಧಿಯಲ್ಲಿ ಆನರ್ಹರ ಕಾರ್ಮಿಕರಿಗೆ ನೀಡಿ ಆರ್ಹರಿಗೆ ಮೋಸ ವೇಸಗಿದ್ದಾರೆ ಎಂದು 150 ಕ್ಕೂ ಹೆಚ್ಚು ಕಾರ್ಮಿಕರು ತಾಲ್ಲೂಕು ಕಛೇರಿ ಮುಂದೆ ಬುಧವಾರ ಜಮಾಯಿಸಿ ಕಾರ್ಮಿಕ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಕಾರ್ಮಿಕರಿಗೆ ಕಿಟ್ ಕೋಡುವಂತೆ ಒತ್ತಾಯಿಸಿದ್ದಾರೆ..ಈಗಾಗಲೇ ಆರ್ಹರಿಗೆ ಕೀಟ್ ನೀಡಿ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುವಂತ ಇಲಾಖೆ ಸೌಲಭ್ಯಗಳು ಕಾರ್ಮಿಕರಲ್ಲದವರಿಗೆ ನೀಡುತ್ತಿರುವುದು ಬೇಸರ ತಂದಿದೆ .ನಂತರ ಪ್ರತಿಭಟನೆಕಾರರು ಎಪಿ ಎಂ ಸಿ ಮಾರುಕಟ್ಟೆಯಲ್ಲಿರುವ ಕಾರ್ಮಿಕರ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದರು .ಆದರೆ ಇಲಾಖೆಯಲ್ಲಿ ಯಾವೊಬ್ಬ ಅಧಿಕಾರಿಯಿಲ್ಲದೆ ಇಲಾಖೆಗೆ ಬೀಗ ಹಾಕಲಾಗಿದೆ ಅಧಿಕಾರಿಗಳು ಕರ್ತವ್ಯಲೋಪ ವೇಸಗುತ್ತಿದ್ದಾರೆ ನಾವು ನಮ್ಮ ಸಮಸ್ಯೆಯನ್ನ ಯಾರ ಬಳಿ ಹೇಳಿಕೊಳ್ಳಲಿ ಎಂದು ಕಿಡಿಕಾರಿದರು.ಈ ಸಂದರ್ಭದಲ್ಲಿ ಕಲ್ಲೆದೇವರಪುರದ ಬಬ್ಬುರಣ್ಣ.ದುರಗಮ್ಮ.ಚೌಡಮ್ಮ.ಭಾಗ್ಯಮ್ಮ..ಸೇರಿದಂತೆ ಮುಂತಾದ ಕಾರ್ಮಿಕರು ಹಾಜರಿದ್ದರು.
‘