ಆಧಾರ್- ಪಾನ್ ಜೋಡಣೆಯ ಗಡುವು ವಿಸ್ತರಣೆ: ಜನಸಾಮಾನ್ಯರು ಕೊಂಚ ನಿರಾಳ
ಶುಕ್ರದೆಸೆ ಸುದ್ದಿ :ಹೊಸದಿಲ್ಲಿ:-ಕೊನೆಯ ದಿನ ಸಮೀಪಿ ಸುತ್ತಿದ್ದರೂ ಪಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಜೋಡಣೆ ಮಾಡಲಾಗದೆ ಪರದಾಡುತ್ತಿದ್ದ ಜನಸಾಮಾನ್ಯರಿಗೆ ನೆಮ್ಮದಿಯ ಸುದ್ದಿ ಬಂದಿದೆ. ಈ ಎರಡೂ ಗುರುತಿನ ಕಾರ್ಡ್‌ಗಳನ್ನು ಜೋಡಿ ಸಲು ಇರುವ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ 2023ರ ಜೂನ್ 30ರವರೆಗೂ ವಿಸ್ತರಿಸಿದೆ.

ಈ ಮೊದಲು 1 ಸಾವಿರ ರೂ ದಂಡ ಸಹಿತವಾಗಿ ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ 2023ರ ಮಾರ್ಚ್ 31ರವರೆಗೆ ಸಮಯ ನೀಡಲಾಗಿತ್ತು. ಕೊನೆಯ ದಿನ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧದ ಜನರ ಆಕ್ರೋಶ ತೀವ್ರಗೊಂಡಿತ್ತು. ಜತೆಗೆ ಜೋಡಣೆಗೆ ವೇದಿಕೆ ಯಾಗಿರುವ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ಈ ವಿಭಾಗ ತೆರೆದುಕೊಳ್ಳುತ್ತಲೇ ಇರಲಿಲ್ಲ. ಈ ತಾಂತ್ರಿಕ ದೋಷದ ಬಗ್ಗೆ ಅನೇಕರು ದೂರು ನೀಡಿದ್ದರು.

ಈಗ ದಿನಾಂಕವನ್ನು ಜೂನ್ 30ರವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ಮಂಗಳ ವಾರ ಹೇಳಿಕೆ ಬಿಡುಗಡೆ ಮಾಡಿದೆ. ಈ ಸಂಬಂಧ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಅದು ತಿಳಿಸಿದೆ.

ಮೂರು ತಿಂಗಳ ಬಳಿಕವೂ ಈ ಎರಡೂ ಮಹತ್ವದ ದಾಖಲೆ ಗಳನ್ನು ಲಿಂಕ್ ಮಾಡುವುದರಲ್ಲಿ ತೆರಿಗೆದಾರ ವಿಫಲನಾದಲ್ಲಿ, ಅವರ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಅಂತಹ ಪ್ರಕರಣ ಗಳಲ್ಲಿ ತೆರಿಗೆದಾರ ತಮ್ಮ ಪಾನ್‌ ಕಾರ್ಡ್ ಅನ್ನು ಒದಗಿಸಲು, ಅದನ್ನು ಉಲ್ಲೇಖಿಸಲು ಅಥವಾ ಬಳಸಲು ಸಾಧ್ಯವಾಗುವುದಿಲ್ಲ.

ಲಿಂಕ್ ಮಾಡದೆ ಇದ್ದರೆ ಏನಾಗಲಿದೆ?

ಜೂನ್ 30ರ ಗಡುವಿನ ಒಳಗೆ ಪಾನ್ ಮತ್ತು ಆಧಾರ್ ಸಂಖ್ಯೆ ಜೋಡಣೆ ಮಾಡುವಲ್ಲಿ ವಿಫಲರಾದರೆ, ಜುಲೈ 1ರ ಬಳಿಕ ತೆರಿಗೆ ದಾರರು ಕಾನೂನಾತ್ಮಕ ದಂಡದ ಕ್ರಮಗಳನ್ನು ಎದುರಿಸ ಬೇಕಾಗುತ್ತದೆ.

ನಿಷ್ಕ್ರಿಯಗೊಂಡ ಪಾನ್ ಕಾರ್ಡ್‌ಗಳಿಗೆ ತೆರಿಗೆ ಮರುಪಾವತಿ ಇರುವುದಿಲ್ಲ.

ರಿಟರ್ನ್ ಫೈಲ್ ಮಾಡಿದ ಬಳಿಕ ಎರಡು ದಾಖಲೆಗಳನ್ನು ತೆರಿಗೆದಾರ ಜೋಡಣೆ ಮಾಡಿದರೆ, ಆದಾಯ ತೆರಿಗೆ ಇಲಾಖೆಯು, ಎರಡೂ ದಾಖಲೆಗಳನ್ನು ಜೋಡಣೆ ಮಾಡದ ಅವಧಿಯಲ್ಲಿನ ಮರುಪಾವತಿ ಮೇಲಿನ ಬಡ್ಡಿಯನ್ನು ಪಾವತಿಸುವುದಿಲ್ಲ.

ಅಂತಹ ಪ್ರಕರಣಗಳಲ್ಲಿ ಮೂಲದಲ್ಲಿ ಕಡಿತಗೊಂಡ ತೆರಿಗೆ (ಟಿಡಿಎಸ್) ಮತ್ತು ಮೂಲದಲ್ಲಿ ಸಂಗ್ರಹಿಸಿದ ತೆರಿಗೆ (ಟಿಸಿಎಸ್) ಎರಡನ್ನೂ ಅಧಿಕ ಪ್ರಮಾಣದಲ್ಲಿ ಕಡಿತ ಹಾಗೂ ಸಂಗ್ರಹ ಮಾಡಲಾಗುತ್ತದೆ.

ತೆರಿಗೆದಾರರು, 1,000 ರೂ ವಿಳಂಬ ದಂಡವನ್ನು ಪಾವತಿಸಿದ 30 ದಿನಗಳ ಒಳಗಾಗಿ ತಮ್ಮ ಪಾನ್ ಕಾರ್ಡ್ ಅನ್ನು ಪುನಃ ಸಕ್ರಿಯ ಗೊಳಿಸಿಕೊಳ್ಳಲು ಅವಕಾಶವಿದೆ. ಈವರೆಗೂ ಆಧಾರ್ ಕಾರ್ಡ್ ಜತೆಗೆ 51 ಪಾನ್ ಕಾರ್ಡ್‌ಗಳನ್ನು ಲಿಂಕ್ ಮಾಡಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

ಆಧಾರ್ ಕಾರ್ಡ್ ಮತ್ತು ಪಾನ್ ಜೋಡಣೆಗೆ 2017ರಿಂದಲೂ ಕೇಂದ್ರ ಸರ್ಕಾರ ಸೂಚನೆ ನೀಡುತ್ತಾ ಬಂದಿದೆ. 2022ರ ಏಪ್ರಿಲ್ 1ರಂದು 500 ರೂ ಶುಲ್ಕ ವಿಧಿಸಲಾಗಿತ್ತು. 2022ರ ಜುಲೈ 1ರಿಂದ ಶುಲ್ಕವನ್ನು 1,000 ರೂಪಾಯಿಗೆ ಹೆಚ್ಚಿಸಲಾಗಿತ್ತು. ಒಂದು ವೇಳೆ ಜೂನ್ 30ರ ಒಳಗೂ ಈ ದಾಖಲೆಗಳನ್ನು ಜೋಡಣೆ ಮಾಡದೆ ಇದ್ದರೆ ಮುಖ್ಯವಾಗಿ ಆದಾಯ ತೆರಿಗೆ ಪಾವತಿದಾರರಿಗೆ ಸಮಸ್ಯೆ ಎದುರಾಗಲಿದೆ ಎಂದು‌ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You missed

error: Content is protected !!