ADVERTISEMENT
Home ದಾವಣಗೆರೆ
ದೇಸಾಯಿ ಸಿನಿಮಾ ಜೂ.21ಕ್ಕೆ ರಾಜ್ಯಾದ್ಯಂತ ತೆರೆಗೆ
Editor BY EDITOR June 13, 2024
ದೇಸಾಯಿ ಸಿನಿಮಾ ಜೂ.21ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲಿದೆ.

Editor m rajappa vyasagondanahalli
By shukradeshenews Kannada | online news portal |Kannada news online

By shukradeshenews | published on ಜೂನ್ 13

Shukradeshe news KANNADA NEWS/ DAVANAGERE/ DATE:13-06-2024

ದಾವಣಗೆರೆ ಸುದ್ದಿ-: ಉತ್ತರ ಕರ್ನಾಟಕದ ಸೊಗಡಿನ ಚಿತ್ರ “ದೇಸಾಯಿ” ಚಿತ್ರ ತೆರೆಗೆ ಬರಲಿದ್ದು ಗ್ರಾಮೀಣ ಜನರ ಜನಜೀವನ ಆಧಾರಿತ ಕಥೆಯಾಗಿದೆ ಚಿತ್ರಕಥೆ ನಿರ್ಮಾಪಕ ಮಹಾಂತೇಶ್ .ಹಿರೊ ಆಗಿ ನಟಿಸಿರುವ ಪ್ರವೀಣ್ ಹೋಸಪೆಟೆ ವಿವಿಧ ಸೀನ್ ಗಳಲ್ಲಿ ವಿವಿಧ ಪಾತ್ರಧಾರಿಗಳಿಂದ ನಿರ್ಮಿಸಿರುವ ಕೌಟುಂಬಿಕ ಹಿನ್ನಲೆಯುಳ್ಳ ದೇಸಾಯಿ ಚಲನಚಿತ್ರ ಇದೇ ಜೂ. 21 ರಂದು‌ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಬಾಗಲಕೋಟೆಯ ಮಹಾಂತೇಶ್ ಚೋಳಚಗುಡ್ಡ ಅವರು ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು ” ದೇಸಾಯಿ” ಚಲನಚಿತ್ರ ಶ್ರೀ ವೀರಭದ್ರೇಶ್ವರ ಕ್ರಿಯೇಟಿವ್ ಫೀಲ್ಮ್ ನಡಿ ಮೂಡಿಬಂದಿದೆ. ನಾಗಿರೆಡ್ಡಿ ನಿದೇ೯ಶನ ಮಾಡಿದ್ದು, ಪಿ ಕ್ ಎಚ್ ದಾಸ್ ಛಾಯಾಗ್ರಹಣವಿದೆ.ಚಿತ್ರಕ್ಕೆ ಸಂಗೀತವನ್ನು
ಸಾಯಿ ಕಾತಿ೯ಕ್ ನೀಡಿದ್ದು ನಾಲ್ಕು ಹಾಡುಗಳಿವೆ ವಿಜಯಪ್ರಕಾಶ್ ಹಾಗೂ ಅನುರಾಧ ಭಟ್ ಧ್ವನಿ ನೀಡಿದ್ದಾರೆ ಎಂದರು.


ಚಿತ್ರದ ತಾರಾಗಣದಲ್ಲಿ ಪ್ರವೀಣ್ ಕುಮಾರ್, ರಾಧ್ಯ, ವರಟ ಪ್ರಶಾಂತ್, ಚಲವರಾಜ್, ಹರಿಣಿ, ಕಲ್ಯಾಣಿ, ಮಧುಸೂದನ ರಾವ್ ಮತ್ತಿತರರಿದ್ದಾರೆ.ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಚಿತ್ರಗಳ ಕೊರತೆ ಕಂಡುಬರುತ್ತಿದೆ.ಆದ್ದರಿಂದ ನಾವು ಕೌಟುಂಬಿಕ ಹಿನ್ನೆಲೆಯಲ್ಲಿ ಚಿತ್ರ ಮಾಡಿದ್ದೇವೆ. ಸಮಾಜಕ್ಕೆ ಅರಿವು ಮೂಡಿಸುವ ಚಿತ್ರ ಇದಾಗಿದೆ.ಒಳ್ಳೆಯ ಸಿನಿಮಾ ಬಂದಾಗ ಜನ ಸ್ವೀಕರಿಸುತ್ತಾರೆ ಅದಕ್ಕೆ ಇತ್ತೀಚೆಗೆ ಬಂದ ಕಾಂತಾರ ಹಾಗೂ ಕಾಟೇರಾ ಚಿತ್ರಗಳೇ ಸಾಕ್ಷಿ.ದೇಸಾಯಿ ಚಿತ್ರ ಮೂರು ತಲೆಮಾರಿನ ಜನರ ನಡುವೆ ನಡೆಯುವ ಕಥೆಯಾಗಿದೆ.ಜನ ನಮ್ಮ ಚಿತ್ರ ವೀಕ್ಷಿಸುವ ಮೂಲಕ ಬೆಂಬಲ ನೀಡಬೇಕು ಎಂದು ತಿಳಿಸಿದರು.

ನಟ ಡಾ.ಪ್ರವೀಣ್ ಮಾತನಾಡಿ ನಾನು ಮೂಲತ ಹೋಸಪೇಟೆ ನನ್ನ ಹುಟ್ಟೂರಾಗಿದ್ದು ವೃತ್ತಿಯಲ್ಲಿ ವೈದ್ಯರಾಗಿರುವೆ ಎಂಬಿ.ಬಿ.ಎಸ್ ವಿದ್ಯಾಭ್ಯಾಸ ಮುಗಿಸಿದ ನನಗೆ ಮೊದಲನೆ love 63 ಎಂಬ ಸಿನಿಮಾದ ಮೂಲಕ ನಾಯಕ ನಟನಾಗಿ ಅಭಿನಯಿಸಿ ಇದೀಗ ಎರಡನೇ ಸಿನಿಮಾ ದೇಸಾಯಿ ಚಿತ್ರದಲ್ಲಿ ನಟನೆಗೆ ಆವಕಾಶ ಕಲ್ಪಿಸಿದ್ದರಿಂದ ನಮ್ಮ ಚಿತ್ರತಂಡದ ಪ್ರೋತ್ಸಾಹ ಮೇರೆಗೆ ಈ ಚಿತ್ರ ತುಂಬಾ ಚನ್ನಾಗಿ ಮೂಡಿ ಬಂದಿದ್ದು ಇದೆ ದಿನಾಂಕ_ 21 _6_2024 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದರು.

ಇದೆ ಸಂದರ್ಭದಲ್ಲಿ ಚಿತ್ರಕಥೆ ನಿರ್ಮಾಪಕ ಮಹಾಂತೇಶ್ ಚೊಳಚಗುಡ್ಡ ಇವರು ಗ್ರಾಮೀಣ ಜೀವನ ಆಧಾರಿತ ಕಥೆ ಚೂಚಲ ಚಿತ್ರಕಥೆ ಚಿತ್ರೀಕರಿಸಿ ಬಿಡುಗಡೆಗೊಳ್ಳುತ್ತಿರುವುದು ಸಂತೋಷದ ಸಂಗತಿ ಮಹಾಂತೇಶ್ ಮೂಲತ ಈ.ಟಿ.ವಿ. ವರದಿಗಾರರಾಗಿ ಉತ್ತಮ ಚಾಯಿಗ್ರಾಹಕರಾಗಿ ಈ ಹಿಂದೆ ಸೇವೆ ಸಲ್ಲಿಸುತ್ತಲೆ ಇಂತ ಹೊಸತನದ ಕಥೆ ರಚೀಸಿ ಚಿತ್ರೋದ್ಯಮದಲ್ಲಿ ಬೆಳಕು ಚೆಲ್ಲುಲಿರುವ ಗ್ರಾಮೀಣ ಪ್ರತಿಭೆ ಮಹಾಂತೇಶ್ ಚೊಳಚಗುಡ್ಡರವರು ಯಶಸ್ಸು ಕಾಣಲಿ ಎಂದು ಮಾಜಿ ಬೆಳಗಾವಿ ತೋಟಗಾರಿಕೆ ವಿವಿ ಮಾಜಿ ಅಧ್ಯಕ್ಷರು ಹಾಗೂ ಜಗಳೂರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು .ಮತ್ತು ಮಾಜಿ ಡಿ.ಸಿ ಸಿ ಬ್ಯಾಂಕ್ ಅದ್ಯಕ್ಷರಾದ ಪಿ ಎಸ್. ಸುರೇಶ್ ಗೌಡ್ರು ಶುಭಾ ಹಾರೈಸಿದ್ದಾರೆ‌.

ಸುದ್ಗಿಗೋಷ್ಠಿಯಲ್ಲಿ ನಾಯಕನಟ ಪ್ರವೀಣ್ ಕುಮಾರ್, ಕಾಂಗ್ರೆಸ್ ವಕ್ತಾರರಾದ ಉಮಾ ವೀರಭದ್ರಪ್ಪ, ಪುರಂದರ ಲೋಕಿಕೆರೆ,ಪತ್ರಕರ್ತ ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ,ಜಿ.ಬಿ ಹಾವೇರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!