Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜೂನ್ 15
ಬೈರನಾಯಕನಹಳ್ಳಿ ರೈತನಮೇಲೆ ಕರಡಿ ದಾಳಿ ತೀವ್ರ ಗಾಯ.
ಜಗಳೂರು ಸುದ್ದಿ:ತಾಲೂಕಿನ ಭೈರನಾಯಕನಹಳ್ಳಿ ಗ್ರಾಮದ ಹನುಮಂತಪ್ಪ ಸುಮಾರು (48 )ವರ್ಷದ ವ್ಯಕ್ತಿ ಮೇಲೆ ಕರಡಿದಾಳಿಗೆ ತುತ್ತಾಗಿ ಗಂಬೀರ ಗಾಯಗೊಂಡ ಘಟನೆ ಜರುಗಿದೆ..
ಸಂಜೆ ಸುಮಾರು 5 ಗಂಟೆ ಸಮಯದಲ್ಲಿ ಜಮೀನಿನ ಕಡೆ ಕೃಷಿ ಚಟುವಟಿಗೆಗೆ ತೆರಳಿದ ವೇಳೆ ಏಕಾಏಕಿ 4 ಕರಡಿಗಳು ರೈತನ ಮೇಲೆ ದಾಳಿ ನಡೆಸಿದ್ದು.ಕಣ್ಣು,ಕಾಲು,ತಲೆಭಾಗ ತೀರ್ವ ಗಾಯಗೊಂಡಿವೆ.ರೈತ ಹನುಮಂತಪ್ಪ ಸುಮಾರು 48. ವರ್ಷದ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದರಿಂದ ತೀರ್ವಗಾಯಗಳಾಗಿವೆ. .ನಂತರ ಗ್ರಾಮಸ್ಥರ ಸಹಕಾರದಿಂದ ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಗಂಭೀರ ಸ್ಥಿತಿ ಕಂಡ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.
ಗಾಯಗೊಂಡ ರೈತ ಹನುಮಂತಪ್ಪ ಎಂಬ ಅವರು ಜಮೀನಿನಲ್ಲಿ ಸಂಜೆ ಸುಮಸರು 5 ಗಂಟೆ ವೇಳೆಯಲ್ಲಿ ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಕರಡಿಗಳ ದಾಳಿಯಿಂದ ತಲೆ. ಕೈ, ಮುಖ, ಬೆನ್ನು ಮತ್ತು ಕಾಲುಗಳಿಗೆ ಕಚ್ಚಿ ಗಾಯಗಳಾಗಿವೆ ಎಂದು ಕಂಡುಬಂದಿದೆ..
ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಜಗಳೂರು ಕೊಂಡುಕುರಿ ಅರಣ್ಯ ಧಾಮದ ಸುತ್ತ ಸೋಲಾರ್ ಪಿನಿಶಂಗ್ ಆಳವಡಿಸಲಾಗಿದೆ ಆದರೆ ಅದು ನಾಮಕಾವ್ಯವಸ್ಥೆಯಾಗಿದೆ ಸೋಲಾರ್ ಕಾರ್ಯನಿರ್ವಹಿಸುತ್ತಿಲ್ಲ ಪ್ರಾಣಿಗಳು ಸಲ್ಲಿಸಾಗಿ ರೈತರ ಜಮೀನುಗಳಿಗೆ ಲಗ್ಗೆಯಿಟ್ಟು ಬೆಳೆ ಹಾನಿ ಮಾಡುತ್ತಿವೆ.ಅದಲ್ಲದೆ ರೈತರ ಮೇಲೆ ಪ್ರಾಣಿಗಳು ಹಲ್ಲೆ ಮಾಡಿ .ಪ್ರಾಣಿಗಳ ಮತ್ತು ಮಾನವನ ಮೇಲೆ ನಿತ್ಯ ಸಂಘರ್ಷ ನಡೆಯುವಂತಾಗಿದೆ. ಸಂಬಂಧಿಸಿದ ಮೇಲಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ಜಿಡ್ಡುಗಟ್ಟಿರುವ ಕೊಂಡುಕುರಿ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮಕೈಗೊಂಡು ಶಾಶ್ವತ ಪರಿಹಾರ ಕಲ್ಪಿಸುವಂತೆ ರೈತ ಸಂಘದ ಮುಖಂಡ ಬೈರನಾಯ್ಕನಹಳ್ಳಿ ರಾಜು ಆಗ್ರಹಿಸಿದ್ದಾರೆ.